ಕೆಎಸ್ಸಾರ್ಟಿಸಿಯಿಂದ ಅತ್ಯಾಧುನಿಕ ಕ್ಲಬ್ಕ್ಲಾಸ್ ಸೇವೆ ಆರಂಭ
Team Udayavani, Sep 14, 2017, 6:50 AM IST
ಬೆಂಗಳೂರು: ಅತ್ಯಾಧುನಿಕ ಬಸ್ ಸೇವೆಗೆ ಮುಂಚೂಣಿಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಇದೀಗ 23 ಅತ್ಯಾಧುನಿಕ ತಂತ್ರಜ್ಞಾನದ ಐರಾವತ ಕ್ಲಬ್ ಕ್ಲಾಸ್ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸಿದೆ.ವಿಧಾನಸೌಧದ ಮುಂಭಾಗ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಬಸ್ಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು. ಅಲ್ಲದೆ, ಇಲಾಖೆಯ ನಾಲ್ಕು ವರ್ಷದ ಸಾಧನೆಯ ಕೈಪಿಡಿಯನ್ನೂ ಬಿಡುಗಡೆ ಮಾಡಿದರು.
ಹೊಸದಾಗಿ ಸೇವೆ ಆರಂಭಿಸಿರುವ ಕ್ಲಬ್ ಕ್ಲಾಸ್ ಬಸ್ನಲ್ಲಿ ಕಾಲಿಡಲು ಅತ್ಯಾಧುನಿಕ ವ್ಯವಸ್ಥೆ ಇದ್ದು, ಒಟ್ಟು 47 ಸೀಟುಗಳು ಲಭ್ಯವಿವೆ. ಎಲೆಕ್ಟ್ರಾನಿಕ್ ನಿಯಂತ್ರಿತ ಉಪಕರಣದೊಂದಿಗೆ ನವೀನ ಬಿ.ಎಸ್.-4 ಎಂಜಿನ್ ಹೊಂದಿದೆ. ಮಾನವ ಚಾಲಿತ ಹಾಗೂ ಸ್ವಚಾಲಿತ ಗೇರ್ ವ್ಯವಸ್ಥೆ ಹೊಂದಿರುವ ಈ ಬಸ್ಗಳು ಸಣ್ಣ ಮತ್ತು ಸೂಕ್ಷ್ಮ ತಿರುವುಗಳಲ್ಲೂ ಸುಲಲಿತವಾಗಿ ಓಡುವ ಸಾಮರ್ಥ್ಯ ಹೊಂದಿವೆ. ಎಲೆಕ್ಟ್ರಾನಿಕ್ ಸಸ್ಪೆನÒನ್ ವ್ಯವಸ್ಥೆ ಇರುವ ಇದರಲ್ಲಿ ಬ್ರೇಕ್ ನಿಯಂತ್ರಣಕ್ಕೂ ಎಲೆಕ್ಟ್ರಾನಿಕ್ ಸೌಲಭ್ಯವಿದೆ. ಇಂಧನ ಕ್ಷಮತೆ ಮತ್ತು ಬಾಳಿಕೆಯೂ ಹೆಚ್ಚಾಗಿರುವ ಈ ಬಸ್ನ ಬೆಲೆ 1.07 ಕೋಟಿ ರೂ. ಆಗಿದೆ. ಆದರೆ, ಟಿಕೆಟ್ ದರ ಈ ಹಿಂದೆ ಇದ್ದ ವೋಲ್ವೋ ಕ್ಲಬ್ಕ್ಲಾಸ್ ಬಸ್ ದರದಷ್ಟೇ ಇರುತ್ತದೆ.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಗೃಹ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಸಾರ್ಟಿಸಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಗೋಪಾಲ ಪೂಜಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶುಭಾಷ್ಚಂದ್ರ ಕುಂಟಿಯಾ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ನಿರ್ದೇಶಕ ಕೆ.ಟಿ.ಶ್ರೀಧರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಮತ್ತಿತರರು ಇದ್ದರು.
ಎಲ್ಲೆಲ್ಲಿಗೆ ನೂತನ ಕ್ಲಬ್ ಕ್ಲಾಸ್ ಬಸ್ ಸೌಲಭ್ಯ
ಬೆಂಗಳೂರು ವಿಭಾಗದಿಂದ ಬೆಂಗಳೂರು-ಕ್ಯಾಲಿಕಟ್, ಬೆಂಗಳೂರು-ಚೆನ್ನೈ, ಬೆಂಗಳೂರು-ವಿಜಯವಾಡ ಮತ್ತು ಬೆಂಗಳೂರು-ಶ್ರೀಹರಿಕೋಟಾ ಮಧ್ಯೆ ತಲಾ ಎರಡು ಬಸ್ಗಳು, ಮಂಗಳೂರು ವಿಭಾಗದಿಂದ ಮಣಿಪಾಲ್, ಮಂಗಳೂರು-ಬೆಂಗಳೂರು ಮಧ್ಯೆ ಮೂರು ಬಸ್ಗಳು, ಮಂಗಳೂರು-ಮುಂಬೈ ಮಧ್ಯೆ ಮತ್ತು ಮಂಗಳೂರು ಬೆಂಗಳೂರು ಮಧ್ಯೆ 2 ಬಸ್ಗಳು, ಮೈಸೂರು ವಿಭಾಗದಿಂದ ವಿರಾಜಪೇಟೆ-ಬೆಂಗಳೂರು ಮಧ್ಯೆ ಒಂದು, ಮಡಿಕೇರಿ-ಬೆಂಗಳೂರು ಮಧ್ಯೆ 2 ಹಾಗೂ ಮೈಸೂರು-ಬೆಂಗಳೂರು ಮಧ್ಯೆ 5 ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.