ಯಂಗ್ಮೆನ್ಸ್ ಎಜುಕೇಶನ್ ಸೊಸೈಟಿಯ 72ನೇ ವಾರ್ಷಿಕೋತ್ಸವ
Team Udayavani, Sep 14, 2017, 11:56 AM IST
ಮುಂಬಯಿ: ಪ್ರತಿ ಮಕ್ಕಳಲ್ಲೂ ಭೇದ-ಭಾವಕ್ಕಿಂತ ಸಖೀಭಾವ ರೂಢಿಸುವ ಕೆಲಸ ಪಾಲಕರಿಂದಲೇ ಆಗಬೇಕು. ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಹುಮ್ಮಸ್ಸು ಹೆಚ್ಚಿಸಬೇಕು. ಆ ಮೂಲಕ ರಾಷ್ಟ್ರದ ಮತ್ತು ಸ್ವಭವಿಷ್ಯ ರೂಪಿಸುವ ವಾಸ್ತವಿಕತೆ ಮಕ್ಕಳಲ್ಲಿ ತನ್ನಿಂದ ತಾನೇ ಹುಟ್ಟುತ್ತದೆ. ಮಕ್ಕಳು ಸದಾ ಧನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಅವಾಗಲೇ ಜೀವನಗುರಿ ನಿರ್ದಿಷ್ಟವಾಗಿ ತಲುಪುತ್ತದೆ. ಈ ಬಗ್ಗೆ ಅವರಲ್ಲಿ ಭರವಸೆಯ ಅರಿವು ಹೆಚ್ಚಿಸುವ ಅಗತ್ಯವಿದೆೆ ಎಂದು ಶುಭದಾ ಆಂಗ್ಲ ಮಾಧ್ಯಮ ವಿದ್ಯಾಲಯ ನಾವುಂದ ಕುಂದಾಪುರ ಇದರ ಸಂಸ್ಥಾಪಕ ಡಾ| ಎನ್. ಕೆ. ಬಿಲ್ಲವ ಹೇಳಿದರು.
ಸೆ. 9 ರಂದು ಮಾಟುಂಗಾ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಗೃಹದಲ್ಲಿ ಮಹಾನಗರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಂಗ್ಮೆನ್ಸ್ ಎಜುಕೇಶನ್ ಸೊಸೈಟಿಯ 72ನೇ ವರ್ಧಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಪಾಲ್ಗೊಂಡು ಅವರು ಮಾತನಾಡಿ ಶುಭಹಾರೈಸಿದರು.
ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ಡಾ| ಜಿ. ಡಿ. ಜೋಶಿ ಅವರು ಮಾತನಾಡಿ, ನನ್ನ ಅದೆಷ್ಟೋ ವಿದ್ಯಾರ್ಥಿಗಳು ಹಗಲಲ್ಲಿ ದುಡಿದು ರಾತ್ರಿಶಾಲೆಗಳಲ್ಲಿ ಓದಿ ಅಪಾರ ಪರಿಶ್ರಮದಿಂದ ಸುಶಿಕ್ಷಿತರಾಗಿದ್ದಾರೆ. ಅವರ್ಯಾರೂ ಶ್ರೀಮಂತರಾಗುವ ಕನಸು ಎಂದೂ ಕಂಡವರಲ್ಲ. ಬರೇ ಹಸಿವು ನಿಭಾಯಿಸಲು ಬಂದವರು. ಇಂದು ಅದೆಷ್ಟೋ ಮಂದಿ ಮಾಲಕರಾಗಿ ಇಷ್ಟೆತ್ತರಕ್ಕೆ ಬೆಳೆದು ಬದುಕು ಕಟ್ಟಿದ್ದಾರೆ ಎನ್ನುವ ಅಭಿಮಾನ ನನ್ನ ಶಿಕ್ಷಕ ಸೇವೆಗೆ ಸಂದ ಗೌರವವಾಗಿದೆ. ಪ್ರಭಾ ಕೂಡಾ ನನ್ನ ವಿದ್ಯಾರ್ಥಿನಿಯಾಗಿದ್ದು ಇಷ್ಟೆತ್ತರಕ್ಕೆ ಬೆಳೆದರೂ ಇಂದಿಗೂ ಶಿಷ್ಯೆಯಾಗಿ ನನ್ನೊಂದಿರುವುದು ಅಭಿಮಾನವೆನಿಸುತ್ತಿದೆ. ಆಕೆಗೆ “ಗೊಂಚಲು’ ಕೃತಿ ರೂಪಿಸುವಲ್ಲಿ ನಾನು ಪ್ರೇರೇಪಿಸಿದ್ದೇನೆ. ಕೃತಿ ನನ್ನ ಹಸ್ತದಿಂದಲೇ ಅನಾವರಣಗೊಳಿಸುವ ಬಗ್ಗೆ ಕಾಳಜಿ ತೋರಿದ ಈ ಸಂಸ್ಥೆಯ ಸೇವೆ ಅಭಿನಂದನೀಯ ಎಂದರು.
ಯಂಗ್ಮೆನ್ಸ್ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಎನ್. ಪಿ. ಸುವರ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯಾಶೀಲಾ ಮಕ್ಕಳ ಪೋಷಣೆಯು ಶೈಕ್ಷಣಿಕ ಜ್ಞಾನೋ ದಯದಿಂದಲೇ ಸಾಧ್ಯ. ಇಲ್ಲಿ ಭಾಷೆ ಗಿಂತಲೂ ಶಿಕ್ಷಣ ಮೌಲ್ಯವೇ ಮಹತ್ವದ್ದು. ನಮ್ಮ ಸಂಸ್ಥೆಯು ಇದನ್ನೇ ಧ್ಯೇಯವಾಗಿರಿಸಿ ಮಕ್ಕ ಳನ್ನು ಪ್ರೋತ್ಸಾಹಿಸಿ ಸುತ್ತಾ ಬಂದಿದೆ. ಶೈಕ್ಷಣಿಕ ಪ್ರೋತ್ಸಾಹದಿಂದ ಪ್ರತಿಭಾನ್ವಿತರ ಗುರುತುವಿಕೆ ಸಾಧ್ಯವಾಗಿದ್ದು, ಶಿಕ್ಷಣ ಪ್ರೇಮಿಗಳು ಸಹಕರಿಸಿ ಮಕ್ಕಳಲ್ಲಿ ಸಂತೃಪ್ತಿಯ ಮನೋಭಾವ ಬೆಳೆಸಿರಿ. ನನ್ನ ಗೆಳೆಯರ ಬಳಗವೂ ಎಂದಿಗೂ ಪ್ರೋತ್ಸಾಹಿಸಿದ್ದಾರೆ. ಈ ಕಾರ್ಯಕ್ರಮವೂ ತಮ್ಮೆಲ್ಲರ ಸಹಕಾರದಿಂದಲೇ ಮೂಡಿ ಬರಲು ಸಾಧ್ಯವಾಗಿದೆ ಎಂದು ನುಡಿದರು.
ಸಮಾರಂಭದಲ್ಲಿ ಉಪಸ್ಥಿತ ಅವರು ಪ್ರಭಾ ಎನ್. ಪಿ ಸುವರ್ಣ ರಚಿತ “ಗೊಂಚಲು’ ಕೃತಿ ಬಿಡುಗಡೆಗೊಳಿಸಿದರು. ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.ರಾಧಾಕೃಷ್ಣ ನೃತ್ಯ ಅಕಾಡೆಮಿ ಮೀರಾರೋಡ್ ಇದರ ಕಲಾವಿದರು ಪ್ರಾರ್ಥನೆಗೈದರು. ಪ್ರಭಾ ಸುವರ್ಣ ಶ್ಲೋಕ ಪಠಿಸಿದರು.
ಸೊಸೈಟಿಯ ಉಪಾಧ್ಯಕ್ಷ ಆನಂದ ಎ. ಶೆಟ್ಟಿ ಸ್ವಾಗತಿಸಿದರು. ಚಿತ್ರಾಪು ಕೆ. ಎಂ. ಕೋಟ್ಯಾನ್ ಅತಿಥಿಗಳನ್ನು ಪರಿಚಯಗೈದರು. ಗೌರವ ಕೋಶಾಧಿಕಾರಿ ಶೇಖರ್ ಎನ್. ಸುವರ್ಣ ಪ್ರತಿಭಾ ಪುರಸ್ಕೃತರ ಯಾದಿ ವಾಚಿಸಿದರು. ವಸಂತ್ ಎನ್. ಸುವರ್ಣ ಡೊಂಬಿವಲಿ ಅವರು ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪಿ. ಎನ್. ಶೆಟ್ಟಿಗಾರ್ ವಂದಿಸಿದರು. ರಾಧಾಕೃಷ್ಣ ನƒತ್ಯ ಅಕಾಡೆಮಿಯ ಕಲಾವಿದರು ನಾಟ್ಯಗುರು ಸುಕನ್ಯಾ ಭಟ್ ನಿರ್ದೇಶನದಲ್ಲಿ ನೃತ್ಯವೈಭವ ಪ್ರಸ್ತುತಪಡಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.