ಪುತ್ರ ಶೋಕ : ಕೇಶೂಭಾಯ್ ನಿವಾಸಕ್ಕೆ ಭೇಟಿ ನೀಡಿ ಮೋದಿ ಸಂತಾಪ
Team Udayavani, Sep 14, 2017, 3:45 PM IST
ಗಾಂಧಿನಗರ : ವಿಶೇಷ ಸದ್ಭಾವನೆಯ ದ್ಯೋತಕವಾಗಿ ಪ್ರದಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಮಾಜಿ ಗುಜರಾತ್ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ಅವರ ಇಲ್ಲಿನ ನಿವಾಸಕ್ಕೆ ತೆರಳಿ, ಪಟೇಲ್ ಅವರ ಪುತ್ರ ಪ್ರವೀಣ್ (60) ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಸಾಂತ್ವನ ಹೇಳಿದರು.
ಕೇಶೂಭಾಯ್ ಅವರ ಪುತ್ರ ಪ್ರವೀಣ್ ಅವರ ಅಮೆರಿಕದಲ್ಲಿ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿರುವುದಾಗಿ ಬಿಜೆಪಿ ನಾಯಕರನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ.
ಇಂದು ಗುರುವಾರ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೀ ಅಹ್ಮದಾಬಾದ್ – ಮುಂಬಯಿ ಹೈ ಸ್ಪೀಡ್ ರೈಲು (ಬುಲಟ್ ಟ್ರೈನ್) ಯೋಜನೆಗೆ ಚಾಲನೆ ನೀಡಲು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೆ ಅಹ್ಮದಾಬಾದ್ಗೆ ಬಂದಿದ್ದ ಮೋದಿ ಅವರು ಬಿಡುವಿರದ ಕಾರ್ಯಕ್ರಮದ ನಡುವೆಯೂ ಸ್ವಲ್ಪ ಹೊತ್ತನ್ನು ಬಳಸಿಕೊಂಡು ಕೇಶೂಭಾಯ್ ನಿವಾಸಕ್ಕೆ ತೆರಳಿದರು.
ಪ್ರಧಾನಿ ಮೋದಿ ಜತೆಗೆ ಶಿಂಜೋ ಅಬೆ ಕೂಡ ಕೇಶೂಭಾಯ್ ನಿವಾಸಕ್ಕೆ ತೆರಳಿ ಪುಷ್ಪ ಗುಚ್ಚ ನೀಡಿ ಸಂತಾಪ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
November 20: ಲಾವೋಸ್ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.