5,000 ರೂ ಲಂಚ: ಮ.ಪ್ರ.ಅಧಿಕಾರಿಗೆ 5 ವರ್ಷ ಜೈಲು,1 ಲಕ್ಷ ದಂಡ
Team Udayavani, Sep 14, 2017, 4:30 PM IST
ಮೊರೇನಾ, ಮಧ್ಯ ಪ್ರದೇಶ : 2015ರ ಲಂಚ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಮಧ್ಯಪ್ರದೇಶದ ಪಂಚಾಯತ್ ಇಲಾಖಾಧಿಕಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಒಂದು ಲಕ್ಷ ರೂ. ದಂಡ ಹೇರಿದೆ.
ದೂರುದಾರರಿಂದ 5,000 ರೂ. ಲಂಚ ಸ್ವೀಕರಿಸಿರುವ ಉದ್ಯೋಗ ಸಹಾಯಕ ಅಧಿಕಾರಿ ವಿನೋದ್ ಧಾಕರ್ ಭ್ರಷ್ಟಾಚಾರ ತಡೆ ಕಾಯಿದೆಯ ವಿವಿಧ ಸೆಕ್ಷನ್ಗಳಡಿ ಅಪರಾಧಿಯಾಗಿರುವುದು ಸಾಬೀತಾಗಿದೆ ಎಂದು ವಿಶೇಷ ಕೋರ್ಟಿನ ನ್ಯಾಯಾಧೀಶ ರಮೇಶ್ ಶ್ರೀವಾಸ್ತವ ಹೇಳಿದರು.
ಜಿಲ್ಲೆಯ ಕೈಲಾರಸ್ ಪಟ್ಟಣದ ನಿವಾಸಿಯಾಗಿರುವ ದೂರುದಾರನಿಗೆ ತೋಟಗಾರಿಕೆ ಯೋಜನೆ ಸಂಬಂಧದ ಹಣವನ್ನು ಬಿಡುಗಡೆ ಮಾಡಲು ಆರೋಪಿ ಅಧಿಕಾರಿ ಧಾಕರ್ “ಕಮಿಷನ್’ ಕೇಳಿ ಪಡೆದಿದ್ದರು. 2015ರ ಜುಲೈಯಲ್ಲಿ ಲೋಕಾಯುಕ್ತ ಪೊಲೀಸರು ಧಾಕರ್ ಅವರನ್ನು ಅವರ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದಾಗ ಸೆರೆ ಹಿಡಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.