ಯಾತ್ರಿಗಳ ಕೊಂದ ಉಗ್ರ ಹತ
Team Udayavani, Sep 15, 2017, 7:40 AM IST
ಶ್ರೀನಗರ: ಜುಲೈ 10ರಂದು ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್ ಸೇರಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ. ಶ್ರೀನಗರದ ಹೊರವಲಯದಲ್ಲಿನ ನೌಗಾಮ್ ಪ್ರದೇಶದ ಅರಿಬಾಘ…ನಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯೋಧರು ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ ಮೂಲದವನಾದ ಹತ ಅಬು ಇಸ್ಮಾಯಿಲ್, ಲಷ್ಕರ್-ಇ-ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದು, ಮತ್ತೂಬ್ಬ ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ. “ನೌಗಾಮ್ ಪ Åದೇಶದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿರುವ ಕುರಿತು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ,’ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಸ್.ಪಿ.ವೈದ್ ಅವರು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ನಂತನಾಗ್ ಜಿಲ್ಲೆಯಲ್ಲಿ ಜುಲೈ 10ರಂದು ಅಮರನಾಥ ಯಾತ್ರಿಗಳು ತೆರಳುತ್ತಿದ್ದ ಬಸ್‌ನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ 9 ಯಾತ್ರಿಗಳು ಮೃತಪಟ್ಟಿದ್ದರು. ಹತ ಉಗ್ರ ಅಬು ಇಸ್ಮಾಯಿಲ್ ಈ ದಾಳಿ ಹಿಂದೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಟ್ವಿಟರ್‌ನಲ್ಲಿ ಅಬು ಬ್ಲಾಕ್:ಅತ್ತ ಎಲ್‌ಇಟಿ ಉಗ್ರ ಅಬು ಇಸ್ಮಾಯಿಲ್ ಎನ್‌ಕೌಂಟರ್‌ನಲ್ಲಿ ಹತನಾಗುತ್ತಿದ್ದಂತೆ ಇತ್ತ ಟ್ವಿಟರ್‌ನಲ್ಲಿ “ಅಬು ಇಸ್ಮಾಯಿಲ್’ ವಿಷಯ ಟಾಪ್ ಟ್ರೆಂಡ್ ಆಯಿತು. ಕೆಲವೇ ನಿಮಿಷಗಳಲ್ಲಿ ಈ ಕುರಿತು ಸಾವಿರಾರು ಟ್ವೀಟ್ ಹರಿದಾಡಿದರು. ಈ Êಬೆಳವನಿಗೆ ಗಮನಿಸಿದ ಟ್ವಿಟರ್ ನಿರ್ವಾಹಕರು ಈ ಕುರಿತ ಎಲ್ಲ ಟ್ವೀಟ್‌ಗಳನ್ನು ಬ್ಲಾಕ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.