ತರ್ಲೆ ಕ್ಲಾಸ್ ಅವಾರ್ಡ್ಸ್
Team Udayavani, Sep 15, 2017, 6:45 AM IST
ಅಬ್ಟಾ ! ಇವತ್ತು ಈ ಪೀರಿಯಡ್ ಫ್ರೀ ಇದೆಯಂತೆ. ಪರವಾಗಿಲ್ಲ, ಈ ಅವಧಿಯನ್ನು ಸ್ಪೆಷಲ್ ಎಂದೆನಿಸೋಣ ಎಂದು ನಮ್ಮನಮ್ಮಲ್ಲೇ ಗುಸುಗುಸು ಹರಿದಾಡುತ್ತಿತ್ತು. ಅದಲ್ಲದೆ, ಕೆಲವರಿಗೆ ಮನೆಗೋಡುವ ಧಾವಂತ, ಕೆಲವರಿಗೆ ಕ್ಲಾಸಲ್ಲೇ ಕುಳಿತು ಲೋಕಾಭಿರಾಮವಾಗಿ ಪಟ್ಟಾಂಗವಾಡುವ ತವಕ. ತಲೆಯಲ್ಲಿ ನೂರಾರು ಆಲೋಚನೆಗಳ ಮಣಭಾರ ಹೊತ್ತ ನಮಗೆ ಕ್ಲಾಸ್ ಕಳೆದಿದ್ದೇ ಗೊತ್ತಾಗಲಿಲ್ಲ. ತಾದಾತ್ಮéದಿಂದ ಕಾಯುತ್ತಿದ್ದ ಆ ಫ್ರೀ ಅವರ್ ಬಂದಿದ್ದೂ ಗಮನಿಸಿರಲಿಲ್ಲ.
ಅಲ್ಲಿ ನಮ್ಮ ವಿವೇಕ ಜಾಗೃತಗೊಂಡು, ನಮ್ಮ ತಂಡ ಒಂದು ಯೋಜನೆಯ ಬೆನ್ನುಹತ್ತಿತ್ತು. ಅದೇ “ತರ್ಲೆ ಕ್ಲಾಸ್ ಅವಾರ್ಡ್ಸ್!’
ದೃಶ್ಯ ಮಾಧ್ಯಮಗಳಲ್ಲಿ ಝಗಮಗಿಸೋ ವೇದಿಕೆ, ಕಣುಕ್ಕೊ ಬೆಳಕು, ಅದ್ದೂರಿ ಅಲಂಕಾರ, ಕೆಂಪುಹಾಸಿನ, ಸೆಲೆಬ್ರಿಟಿಗಳ ಕಲ್ಪನೆ ಮನದಲ್ಲಿತ್ತು. ಅಷ್ಟು ವೈಭವೋಪೇತ ಪರಿಕಲ್ಪನೆ ಗಗನಕುಸುಮವೇ. ಕನಸಿನಲ್ಲಿ ಭಾÅಂತಿ ಮೂಡಿಸಬಲ್ಲ ಇವು Exaggeration ಅಷ್ಟೆ ! ಸರಳ ಕಾರ್ಯಕ್ರಮ, ತರಗತಿಗೆ ಪರಿಮಿತ ಎಂಬ ಸರ್ವಾನುಮತದ ತೀರ್ಮಾನ ಮಾಡಿ “ಅವಾರ್ಡ್ ಶೋ’ಗೆ ತಯಾರಿ ನಡೆಸಿದೆವು. ಯಾರಿಗೂ ಹೇಳ್ಬೇಡಿ !
ನಮ್ಮ ಈ ಸಮಾರಂಭ ಕೇವಲ ತರಗತಿಗಷ್ಟೆ ಸೀಮಿತ ಎಂಬ ಕಾರಣಕ್ಕೆ ಗೌಪ್ಯತೆ ಕಾಪಾಡಲು ಹೇಳಿದ್ದೆವು. ಅದಕ್ಕಾಗಿ ಉಪನ್ಯಾಸಕರಿಗೂ ಆಹ್ವಾನ ನೀಡಿರಲಿಲ್ಲ.
ಗೊತ್ತಾದರಂತೂ “ಎಕ್ಸಾಮ್ಸ… ಹತ್ರ ಬರ್ತಾ ಇದೆ! ನಿಮ್ಮ ತುಂಟಾಟಗಳು ನಿÇÉೋದಿಲ್ವೆ ?’ ಎಂಬ ದೂಷಣೆ ಖಂಡಿತ. ಅದಕ್ಕೆ ಯಾರಿಗೂ ಹೇಳ್ಬೇಡಿ ಎಂಬ ಕಟ್ಟಪ್ಪ(ನ)ಣೆ ವಿಧಿಸಿದ್ದೆವು.
ನಮ್ಮದೇ ತಂಡ
“ತಂಡ’ ಅನ್ನೋದಕ್ಕಿಂತ ಪ್ರಶಸ್ತಿ ಮಾನದಂಡದ ಸಮಿತಿ ಎನ್ನಬಹುದು. ನಮ್ಮಲ್ಲೇ ಸಮಾನಮನಸ್ಕ ವಿದ್ಯಾರ್ಥಿ ಬಳಗ ಒಟ್ಟುಗೂಡಿ, ಅವಾರ್ಡ್ ಶೋನ ರೂಪುರೇಷೆ ಸಿದ್ಧಪಡಿಸಿದೆವು. ಅದಕ್ಕಾಗಿ ಸಣ್ಣ ಮಟ್ಟಿನ “ಸ್ಪೈ ಟೀಮ…’ ಸಿದ್ಧಪಡಿಸಿ, ಪ್ರಶಸ್ತಿಗೆ ಬೇಕಾದ ನಾಮಿನೇಶನ್ ಸ್ಪಾನ್ಸರ್ಸ್ ಪಟ್ಟಿಯನ್ನ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಭಿನ್ನರಾಗ, ಜಡೆಜಗಳಕ್ಕೆ ಆಹ್ವಾನ ಸಿಗಬಾರದೆಂಬ ಕಾರಣಕ್ಕೆ ಇಂತಹ ಪರಾಮರ್ಶೆ ಅತ್ಯಗತ್ಯ ಎನಿಸಿತ್ತು. ನಮ್ಮ ಬೆಂಚ್‌ಗೆ ಪ್ರಾಧಾನ್ಯ ಸಿಕ್ಕಿಲ್ಲ ಎಂಬ ಪ್ರಾದೇಶಿಕ ಅಸಮಾನತೆಯಂತಹ ಕೂಗನ್ನು ಮೆಟ್ಟಿ ನಿಲ್ಲುವ ಮಾನಸಿಕ ತಾಕತ್ತು ನಮ್ಮ ತಂಡ ಪಡಕೊಂಡು, ಸಮಾರಂಭದ ಏರ್ಪಾಟು ಮಾಡಿದೆವು.
ತರ್ಲೆ ಅವಾರ್ಡುಗಳು
ಭಾರಿ ಮೌಲ್ಯವುಳ್ಳ , ತೂಕಭರಿತ ಅವಾರ್ಡುಗಳು ಇರಬಹುದು ಅಂದುಕೊಂಡರೆ ಅದು ತಪ್ಪು ಕಲ್ಪನೆ. ನಮ್ಮ ಯಾದಿಯಲ್ಲಿ ಇದ್ದಿದ್ದು ಇವೇ; ಕೃಷ್ಣ ಆಫ್ ಕ್ಲಾಸ್, ರಾಧಾ ಆಫ್ ಕ್ಲಾಸ್, ಉದ್ದದ ಜಡೆ, ಮ್ಯಾಚೋ ಮ್ಯಾನ್ ಆಫ್ ಕ್ಲಾಸ್, ಬಿದಿರ್ ಕಡ್ಡಿ ಅವಾರ್ಡ್, ಬೆಸ್ಟ್ ಝುಮುಕಿ, ಬಿಲ್ಡ್‌ಅಪ್ ಬಸ್ಯಾ, ಬೆಸ್ಟ್ ಪುಂಡಿ ಅವಾರ್ಡ್, ಉತ್ತಮ ಬೆಕ್ಕಿನ ನಡಿಗೆ… ಹೀಗೆ ಈ ತಮಾಷೆಯ ಅವಾರ್ಡ್‌ಗಳ ಪಟ್ಟಿ ಬೆಳೆದಿತ್ತು. ಅದರ ಜತೆಗೆ ಸ್ವಲ್ಪ ಸಭ್ಯ, ಗಂಭೀರ ಎಂದೆನಿಸಬಲ್ಲ ಕೆಲವು ಅವಾರ್ಡುಗಳನ್ನು ಸೇರಿಸಿದ್ದೆವು. ಉತ್ತಮ ನಗೆಗಾರ, ಜಾಣರ ಜಾಣ (ಮಲ್ಲ ಮಂಡೆ), ಉತ್ತಮ ನಾಯಕ ಇತ್ಯಾದಿ.
ನಿರೂಪಣೆ ಹಾಗೂ ಪ್ರಾಯೋಜಕರು ತರಗತಿಯಲ್ಲಿ ಸದಾ ನಮ್ಮನ್ನ ನಗಿಸುತ್ತಿದ್ದ , ಬಾಲಿಶ ವರ್ತನೆಯ ಆ ಗೆಳತಿ ನಿರೂಪಣೆಗೆ ಸೂಕ್ತ ಎಂದೆನಿಸಿ ಆಕೆಗೆ ಭರಪೂರ ಭಾರ ಪೇರಿಸಿದೆವು. ಕಾರ್ಯಕ್ರಮ ಶುರುವಾಗುತ್ತಲೆ ನಾನು ಸೀದಾ ತೆರಳಿ ನಿರೂಪಕಿಯ ಕೈಗೆ ಮೈಕಿತ್ತೆ? ಅಂದ ಹಾಗೆ ಆ ಹುಡುಗಾಟಿಕೆಯ ಮೈಕ್ ಯಾವುದು ಗೊತ್ತೆ? ನನ್ನ ಮನೆಯಲ್ಲಿ ಅದಾಗಲೇ ಕಾಯಿಗಟ್ಟಿದ್ದ ಎಳೆ ಹಲಸು. (ತುಳುವಿನ ಕಳ್ಳಿಗೆ) ಕೆಲವು ಮೈಕ್‌ಗಳು ಎಳೆ ಹಲಸನ್ನೇ ನೆನಪಿಸುವ ಕಾರಣ ಅದನ್ನೇ ಕೊಂಚ ವಿಭಿನ್ನವಾಗಿಸಿದ್ದೆ. (ಎಕ್ಸೆಂಟ್ರಿಕ್ ಅಂದುಕೊಂಡರೂ ಪರವಾಗಿಲ್ಲ ಎಂಬಂತೆ) ಅದಲ್ಲದೆ ತರಗತಿಯೊಳಗೆ ನಡೆಯುತ್ತಿದ್ದ ಶೋ ಆದ ಕಾರಣ ಅಬ್ಬರಕ್ಕೂ ಆಸ್ಪದವಿರಲಿಲ್ಲ. ನಾವೇ ಜಾಹೀರಾತುದಾರರಾಗಿದ್ದರಿಂದ ನಮ್ಮ ಹೆಸರು ಹೇಳುವುದು ನಿಕ್ಕಿ ಆಗಿತ್ತು. ನಿರೂಪಕಿಯ ಜೊತೆ ನಾವು ಸ್ಪಾನ್ಪರ್ಸ್ ಹೆಸರುಗಳನ್ನ ಬಿಡಿಬಿಡಿಯಾಗಿ ಬಡಾಯಿಸುವ ಒಡಂಬಡಿಕೆ ಮಾಡಿಕೊಂಡಿದ್ದೆವು!
ಮನೋರಂಜನೆಯ ಖನಿ ತಮಾಷೆ, ನಗು ಎಲ್ಲವೂ ಮನೋರಂಜನೆಯ ದೃಷ್ಟಿಯಿಂದಷ್ಟೇ ನಮ್ಮೊಂದಿಗೆ ಸಹಪಾಠಿಗಳಾಗಿ ಬಹುಸಮಯದಿಂದ ಇದ್ದರೂ ತಮಗರಿವಿಲ್ಲದೆ ಅವರ ಅಪೂರ್ವ ನೈಜ ಮೇಧಾಶಕ್ತಿ ಇಲ್ಲಿ ಬೆಳಕಿಗೆ ಬಂದುಬಿಟ್ಟಿರುತ್ತದೆ.
“ಹೌದಾ! ನಾ ಹಿಂಗೂ ಇದ್ನಾ ?’ ಅನ್ನೋ ಉದ್ಗಾರ ಪ್ರಶಸ್ತಿ ವಿಜೇತ ಸಹೃದಯರಲ್ಲಿತ್ತು. ಅವರಿಗೇನೆ ಎಷ್ಟೋ ಬಾರಿ ಗ್ರಹಿಕೆಗೆ ನಿಲುಕಿರುವುದಿಲ್ಲ ತಮ್ಮ ಜಡೆಯೇ ಉದ್ದವಾಗಿರೋದು, ತಮ್ಮ ಝುಮಕಿಯೆ ಚನ್ನ ಎಂದೆಲ್ಲಾ! ಆಗಲೇ ಹೇಳಿದಂತೆ ಸಮಿತಿಯು ಇದನ್ನೆಲ್ಲ ನಾಜೂಕಾಗಿ, ಸರಿಯಾದ ಅಳತೆಗೋಲಿಟ್ಟುಕೊಂಡು ಆಯ್ಕೆ ನಡೆಸುವ ಚಾಕಚಕ್ಯತೆ ಹೊಂದಿರಬೇಕಾದದ್ದು ಅತ್ಯಗತ್ಯ.
ನಾವೆಷ್ಟೇ ಬೆಣ್ಣೆಯಿಂದ ಕೂದಲು ತೆಗೆದ ಥರಾ ಸಂದರ್ಭ ನಿರ್ವಹಿಸಿದರೂ, ಮೊಸರಿನಲ್ಲೆ ಕಲ್ಲು ಹುಡುಕೋ ಜಾಣರಂತೂ ಇದ್ದರು. ಆದರೂ ಇದೆಲ್ಲ ಚಣಹೊತ್ತಿನ ಖುಷಿ, ಇದರಲ್ಲಿ ಇರೋ ನೆನಪುಗಳ ಸಿಹಿ ಹೂರಣ ಮುಂದೆ ಕಚಗುಳಿ ಇಡುತ್ತಲೇ ಇರುತ್ತವೆ ಎಂಬ ಸಮಾಧಾನ ಇತ್ತಷ್ಟೆ. ಕಾಲೇಜು ದಿನಗಳ ಮಧುರ ಸಾಲಿನಲ್ಲಿ ಇದು ಸೇರಿಕೊಳ್ಳುವುದು ಎಂಬ ಆತ್ಮತೃಪ್ತಿ. ಅದಕ್ಕೆ ಪ್ರಶಸ್ತಿ ವಂಚಿತರೂ ಸಂತೈಸಿಕೊಂಡು ನಮ್ಮ ನಿಲುವಿಗೆ ಜೈ ಎಂದಿದ್ದರು.
ಕೊನೆಯದಾಗಿ ಭವಿಷ್ಯದಲ್ಲಿ ಇಂತಹ ಅವಾರ್ಡ್ ಶೋನಲ್ಲಿ ಪಾಲ್ಗೊಳುವ ಭಾಗ್ಯ ಲಭ್ಯವಾಗುವುದೋ ಇಲ್ಲವೋ ಗೊತ್ತಿಲ್ಲ. ಕಾಲೇಜಿನಲ್ಲಾ
ದರೂ ಪ್ರಾತ್ಯಕ್ಷಿಕೆ ನೀಡೋ ಸದಾವಕಾಶ ಸಿಕ್ಕಿತಲ್ಲ ಎಂಬ ಭಾವನೆ ಕೊನೆತನಕ ಹಸುರಾಗಿ ಉಳಿಯುತ್ತದೆ. ಅದನ್ನು ಕೆದಕಿದಾಗ ಮೊಗದಲ್ಲಿ ಸಣ್ಣ ಮುಗುಳ್ನಗೆ ಮೂಡುತ್ತದೆ ನಿರ್ಲಿಪ್ತ ಭಾವದಲ್ಲಿ !
– ಸುಭಾಷ್ ಮಂಚಿ
ನಿಕಟಪೂರ್ವ ವರ್ಷದ ಹಳೆವಿದ್ಯಾರ್ಥಿ,
ವಿ. ವಿ. ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.