ಡಾ| ಅಮೃತ ಸೋಮೇಶ್ವರಗೆ ಭಾಷಾ ಸಮ್ಮಾನ್ ಗೌರವ
Team Udayavani, Sep 15, 2017, 8:20 AM IST
ಮಂಗಳೂರು: ತುಳು ಭಾಷೆಯ ಏಳಿಗೆಗೆ ನೀಡಿದ ಕೊಡುಗೆ ಪರಿಗಣಿಸಿ ತುಳು ಜಾನಪದ ವಿದ್ವಾಂಸ ಮತ್ತು ಹಿರಿಯ ಸಾಹಿತಿ ಡಾ| ಅಮೃತ ಸೋಮೇಶ್ವರ ಅವರಿಗೆ ಘೋಷಣೆಯಾದ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ “ಭಾಷಾ ಸಮ್ಮಾನ್’ ಪ್ರಶಸ್ತಿಯನ್ನು ಗುರುವಾರ ಪ್ರದಾನ ಮಾಡಲಾಯಿತು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ| ಅಮೃತ ಸೋಮೇ ಶ್ವರ ಅವರಿಗೆ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಕಂಬಾರ ಅವರು ಮಾತನಾಡಿ, “ಸೋಮೇಶ್ವರರು ಪಾಡªನಗಳನ್ನು ಅನುವಾದಿಸಿ ಕನ್ನಡದಲ್ಲಿ ಅದನ್ನು ಪ್ರಕಟ ಮಾಡಿದಂದಿನಿಂದ ಸಂಬಂಧ ಬೆಳೆಯುತ್ತಾ ಬಂದು ಅವರ ಅಭಿಮಾನಿಯಾಗಿದ್ದೇನೆ. ಅತ್ಯುತ್ತಮವಾದ ಅನುವಾದ ಹಾಗೂ ನನ್ನ “ಜೋಕುಮಾರ ಸ್ವಾಮಿ’ಯನ್ನು ತುಳು ಭಾಷೆಯಲ್ಲಿ ಅನುವಾದಿಸಿದ್ದು ನನಗೆ ಖುಷಿ ತಂದಿದೆ ಎಂದರು.
ಡಾ| ಸೋಮೇಶ್ವರ ಅವರ ಪತ್ನಿ ನರ್ಮದಾ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಎಸ್.ರಮಾನಂದ ಶೆಟ್ಟಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ| ಸತೀಶ್ ಭಂಡಾರಿ, ಕುಲಸಚಿವರಾದ ಡಾ| ಎಂ.ಎಸ್. ಮೂಡಿತ್ತಾಯ, ಕ್ಷೇಮ ರಿಜಿಸ್ಟ್ರಾರ್ ಡಾ| ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಯ ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಪಿ. ಮಹಾಲಿಂಗೇಶ್ವರ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಡಾ| ನಾ.ದಾಮೋದರ ಶೆಟ್ಟಿ ಸ್ವಾಗತಿಸಿದರು. ಆಯ್ಕೆ ಸಮಿತಿಯ ಡಾ| ಚಿನ್ನಪ್ಪ ಗೌಡ ವಂದಿಸಿದರು. ಪ್ರಾಧ್ಯಾಪಕಿ ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.
ಇನ್ನಷ್ಟು ಸೇವೆ ಸಲ್ಲಿಸುವಾಸೆ
ಪ್ರಶಸ್ತಿ ಸ್ವೀಕರಿಸಿದ ಡಾ|ಅಮೃತ ಸೋಮೇಶ್ವರ ಅವರು ಮಾತನಾಡಿ, ತುಳು ಹಾಗೂ ಕನ್ನಡ ಭಾಷಾ ಕ್ಷೇತ್ರದಲ್ಲಿ ಇನ್ನೊಂದಿಷ್ಟು ಕಾಲ ಯಥಾಸ್ಥಿತಿ ಸೇವೆ ಸಲ್ಲಿಸಬೇಕು ಎಂಬ ತುಡಿತ ನನ್ನಲ್ಲಿದೆ. ಅದಕ್ಕೆ ನನ್ನೊಳಗಿನ ಚೈತನ್ಯ ಹಾಗೂ ಅಭಿಮಾನ ಪೂರ್ವಕ ಆಶಯಗಳು ಸ್ಫೂರ್ತಿಯಾಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.