ಲಕ್ಷ್ಮೀ ರಾಯರು


Team Udayavani, Sep 15, 2017, 6:25 AM IST

Rai.jpg

ರಾಯ್‌ ಲಕ್ಷ್ಮೀ ಭರ್ಜರಿಯಾಗಿಯೇ ಬಾಲಿವುಡ್‌ಗೆ ಪ್ರವೇಶ ಮಾಡಿದ್ದಾಳೆ. ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ರಾಯ್‌ ಲಕ್ಷ್ಮೀ ನಾಯಕಿಯಾಗಿರುವ ಜೂಲಿ 2 ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ವಿವಾದಕ್ಕೊಳಗಾಗಿತ್ತು. ಲಕ್ಷ್ಮೀಯ ಹಸಿಬಿಸಿ ದೃಶ್ಯಗಳ ಪೋಸ್ಟರ್‌ ನೋಡಿದಾಗಲೇ ಇದು ಜೂಲಿಗಿಂತಲೂ ಸಖತ್‌ ಹಾಟ್‌ ಸಿನೆಮಾ ಎಂದು ಭಾವಿಸಲಾಗಿತ್ತು. ರಾಯ್‌ ಲಕ್ಷ್ಮೀ ಈ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ. ಎಷ್ಟು ಸಾಧ್ಯವೋ ಅಷ್ಟು ಸೆಕ್ಸಿಯಾಗಿ ನಟಿಸಿ ಪಡ್ಡೆಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ.

ಹಾಗೆಂದು ಜೂಲಿ 2 ವಿವಾದಕ್ಕೊಳಗಾಗಿರುವುದು ಲಕ್ಷ್ಮೀಯಿಂದಲ್ಲ. ಬದಲಾಗಿ ಚಿತ್ರದ ವಿತರಕರಾಗಿರುವ ಪಹ್ಲಾಜ್‌ ನಿಹಲಾನಿಯಿಂದಾಗಿ. ಸೆನ್ಸಾರ್‌ ಮಂಡಳಿಯ ಮುಖ್ಯಸ್ಥರಾಗಿದ್ದಾಗ ಇಂತಹ ಚಿತ್ರಗಳಿಗೆಲ್ಲ ನಿರ್ದಯವಾಗಿ ಕತ್ತರಿ ಪ್ರಯೋಗ ಮಾಡಿ “ಸಂಸ್ಕಾರಿ’ ಎಂಬ ಬಿರುದು ಸಂಪಾದಿಸಿಕೊಂಡಿದ್ದ ನಿಹಲಾನಿ ಇದೀಗ ತಾನೇ ಅಂತಹ ಚಿತ್ರವನ್ನು ವಿತರಿಸಲು ಮುಂದಾದದ್ದು ಹುಬ್ಬೇರಿಸುವಂತೆ ಮಾಡಿದೆ. ಅನೇಕರು ನಿಹಲಾನಿಯ ಬದಲಾದ ನಿಲುವನ್ನು ಲೇವಡಿ ಮಾಡಿ ನಕ್ಕಿದ್ದಾರೆ.
 
ಇಷ್ಟಕ್ಕೂ ರಾಯ್‌ ಲಕ್ಷ್ಮೀ ಯಾರು ಎಂಬ ಅನುಮಾನ ನಿಮ್ಮನ್ನು  ಕಾಡುತ್ತಿರಬಹುದು. ಈಕೆ ಬೇರೆ ಯಾರೂ ಅಲ್ಲ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳದ‌ಲ್ಲಿ ಲಕ್ಷ್ಮೀ ರಾಯ್‌ ಅಥವ ಲಕ್ಷ್ಮೀ ರೈ ಎಂದು ಗರುತಿಸಿಕೊಂಡಿರುವ ನಟಿ. ಬಣ್ಣ ಹಚ್ಚಲು ತೊಡಗಿ ಬರೋಬ್ಬರಿ 12 ವರ್ಷವಾದ ಬಳಿಕ ಲಕ್ಷ್ಮೀ ರೈ ತನ್ನ ಹೆಸರನ್ನು ಉಲ್ಟಾ ಮಾಡಿಕೊಂಡು ಬಾಲಿವುಡ್‌ ಪ್ರವೇಶಿಸಿ ಇದೀಗ ಭಾರೀ ಸುದ್ದಿ ಮಾಡುತ್ತಿದ್ದಾಳೆ. ಗುಜರಾತಿನ ಸೌರಾಷ್ಟ್ರ ಮೂಲದವಳಾದರೂ ಬೆಳಗಾವಿಯಲ್ಲಿ ಹುಟ್ಟಿದ ಕಾರಣ ಕನ್ನಡದವಳು ಎಂದು ಕರೆಯಬಹುದು.

ಲಕ್ಷ್ಮೀ ರೈ ಚಿತ್ರಜೀವನ ಶುರುವಾಗಿದ್ದು ತಮಿಳು ಮೂಲಕ. ಅದೃಷÌವಂತಳಾದ ಈಕೆ ಅವಕಾಶಗಳಿಗಾಗಿ ಅಲೆಯುವ ಪ್ರಮೇಯವೇ ಬರಲಿಲ್ಲ. ಏಕೆಂದರೆ ಒಂದರ ಹಿಂದೆ ಇನ್ನೊಂದರಂತೆ ಅವಕಾಶಗಳೇ ಅವಳನ್ನು ಅರಸಿಕೊಂಡು ಬರುತ್ತಿವೆ. ತಮಿಳು, ತೆಲುಗು ಮತ್ತು ಮಲಯಾಳ ಚಿತ್ರರಂಗದ ಎಲ್ಲ ಪ್ರಮುಖ ನಾಯಕರಿಗೆ ನಟಿಯಾಗಿರುವ ಲಕ್ಷ್ಮೀ ಕನ್ನಡದಲ್ಲಿ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಕಲ್ಪನಾ, ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾಳೆ. ಗ್ಲಾಮರ್‌ ತಾರೆಯಾದರೂ ಅಭಿನಯವೂ ಬರುತ್ತದೆ ಎಂದು ತಮಿಳು ಮತ್ತು ಮಲಯಾಳ ಚಿತ್ರಗಳ ಮೂಲಕ ಸಾಬೀತುಪಡಿಸಿದ್ದಾಳೆ. ಅಕಿರಾ ಚಿತ್ರದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ ಬಾಗಿಲು ಲಕ್ಷ್ಮಿ ಜೂಲಿ 2ರಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾಳೆ. ಲಕ್ಷ್ಮೀ ಎಷ್ಟು ಬೇಡಿಕೆಯ ನಟಿ ಎಂದರೆ 2019ರ ತನಕ ಅವಳ ಕಾಲ್‌ಶೀಟ್‌ ಫ‌ುಲ್‌ ಆಗಿದೆ. ಇದರಲ್ಲಿ ಒಂದು ಹಿಂದಿ ಚಿತ್ರವೂ ಸೇರಿದೆ. 

ಟಾಪ್ ನ್ಯೂಸ್

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.