ಮಾರುತಿ ಆಟೋಪ್ರಿಕ್ಸ್ ಸ್ಪರ್ಧೆಗೆ ತೆರೆ
Team Udayavani, Sep 15, 2017, 11:48 AM IST
ಬೆಂಗಳೂರು: ನಗರದ ಹೊರವಲಯದ ಮೈಲಸಂದ್ರದ ಆಟೋ ಮ್ಯೂಸಿಯಂ ಮೈದಾನದಲ್ಲಿ ಇತೀಚೆಗೆ ನಡೆದ ಮಾರುತಿ ಸುಜುಕಿ ಆಟೋಪ್ರಿಕ್ಸ್ -2017, ಮೂರು ದಿನಗಳ ಕಾರು ರೇಸಿಂಗ್ ಚಾಂಪಿಯನ್ಷಿಪ್ ಸ್ಪರ್ಧೆಗಳು ಮುಕ್ತಾಯವಾದವು.
ರಾಷ್ಟ್ರ ಮಟ್ಟದ ಚಾಂಪಿಯನ್ಷಿಪ್ನ ದಕ್ಷಿಣ ವಲಯದ ಮೊದಲ ಸುತ್ತಿನ ಸ್ಪರ್ಧೆಗಳು ಇವಾಗಿದ್ದವು. ದೇಶಾದ್ಯಂತ ಏಳು ನಗರಗಳಲ್ಲಿ ನಡೆದ ಈ ರೇಸಿಂಗ್ನಲ್ಲಿ ಸ್ಪರ್ಧಿಗಳು ಕಡಿದಾದ ತಿರುವು, ವಿವಿಧ ರೀತಿಯ ಟ್ರಾಕ್ ಮೇಲೆ ತಮ್ಮದೇ ಕಾರನ್ನು ಚಲಾಯಿಸುವ ಮೂಲಕ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದರು.
ಅತಿ ವೇಗದ ಹವ್ಯಾಸಿ ವಿಭಾಗದಲ್ಲಿ ನಜೀಮುದೀನ್ (ಮಾರುತಿ ಸುಜುಕಿ ಎಸೀಮ್), ಅತಿ ವೇಗದ ವಿಭಾಗದಲ್ಲಿ ಧ್ರುವ ಚಂದ್ರಶೇಖರ್ (ಸಿಡಿಯಾ) ಹಾಗೂ ಮಹಿಳೆಯ ಅತಿ ವೇಗದ ವಿಭಾಗದಲ್ಲಿ ಸುಪ್ರಿಯಾ ಜಂಬುನಾಥನ್ (ಮಾರುತಿ ಸುಜುಕಿ ಸ್ವಿಫ್ಟ್) ವಿಜೇತರಾಗಿದ್ದಾರೆ. ಈ ಮೂವರು ಅ.27 ರಿಂದ 29ರವರೆಗೆ ನಡೆಯುವ ದಕ್ಷಿಣ ವಲಯ ಮಟ್ಟದ ಎರಡನೇ ಸುತ್ತಿನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುಣೆಯಲ್ಲಿ ಪಶ್ಚಿಮ ವಲಯ ಸ್ಪರ್ಧೆ: ಮಾರುತಿ ಸುಜುಕಿ ಆಟೋಪ್ರಿಕ್ಸ್ ರೇಸಿಂಗ್ ಪಶ್ಚಿಮ ವಲಯದ ಮೊದಲ ಸ್ಪರ್ಧೆ ಇದೇ 22, 23 ಮತ್ತು 24ರಂದು ಪುಣೆಯಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.