“ಗಂಡನ ಸಾಯಿಸಿ, ನನ್ನನ್ನು ವಿಧವೆ ಮಾಡಮ್ಮ’ ಎಂದು ಬನಶಂಕರಿಗೆ ಪತ್ರ!
Team Udayavani, Sep 15, 2017, 11:49 AM IST
ಬೆಂಗಳೂರು: ಮುತ್ತೈದೆಯರು ಮಾಂಗಲ್ಯಭಾಗ್ಯ ಗಟ್ಟಿಯಾಗಿರಲಿ, ಸುಮಂಗಲಿ ಸಾವು ಪ್ರಾಪ್ತವಾಗಲಿ ಎಂದು ಹರಕೆ, ವ್ರತಗಳನ್ನು ಆಚರಿಸುತ್ತಾರೆ. ಕಂಡ ಕಂಡ ದೇವರುಗಳಿಗೆ ಕೈಮುಗಿದು ಗಂಡನ ಯೋಗಕ್ಷೇಮಕ್ಕೆ ಬೇಡಿಕೊಳ್ಳವುದು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ “ನನ್ನ ಗಂಡನನ್ನು ಸಾಯಿಸಿ, ನನ್ನನ್ನು ವಿಧವೆ ಮಾಡು,’ ಎಂದು ಬನಶಂಕರಿ ದೇವಿಗೆ ಪತ್ರ ಬರೆದಿದ್ದಾಳೆ!.
ಇದು ವಿಚಿತ್ರವಾದರೂ ಸತ್ಯ. ಕುಮಾರಸ್ವಾಮಿ ಲೇಔಟ್ ಹಿಂಭಾಗದ ಬನಶಂಕರಿ ದೇವಸ್ಥಾನದಲ್ಲಿ ಗುರುವಾರ ಕಾಣಿಕೆ ಹುಂಡಿ ಎಣಿಕೆ ವೇಳೆ ನೂರಾರು ಪತ್ರಗಳು ಸಿಕ್ಕಿದ್ದು, ಅದರಲ್ಲಿ ಇಂತಹ ವಿಲಕ್ಷಣ ಪತ್ರ ಸಿಕ್ಕಿದೆ. ಗೃಹಿಣಿಯೊಬ್ಬರು “ನನ್ನ ವಿಧವೆ ಮಾಡು. ನನ್ನ ಗಂಡನ ಅಹಂಕಾರವನ್ನು ಅಡಗಿಸು. ನನ್ನ ಗಂಡ ಸತ್ತೆರೆ ಸಾಕು, ನಾನು ವಿಧವೆ ಆದರೆ ಸಾಕು. ನನ್ನ ಮಗನನ್ನು, ನನ್ನನ್ನು ನೆಮ್ಮದಿಯಾಗಿಡು ತಾಯಿ.
ನನ್ನ ಗಂಡನ ಅಹಂಕಾರವನ್ನು ತುಳಿದು ಹಾಕು. ನನ್ನ ಗಂಡನ ಅಟ್ಟಹಾಸವನ್ನು ಮಟ್ಟ ಹಾಕು ತಾಯಿ,’ ಎಂದು ದೇವಿ ಬನಶಂಕರಿಗೆ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ಮಗ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ರಿವಾಲ್ಯುವೇಶನ್‌ಗೆ ಅರ್ಜಿ ಹಾಕಿದ್ದು, ಆತನನ್ನು ಪಾಸು ಮಾಡು. ಆತನಿಗೆ ಆರೋಗ್ಯ, ಸಂಪತ್ತು, ಐಶ್ವರ್ಯ ಎಲ್ಲ ಕೊಡು ಎಂದು ಬೇಡಿಕೊಂಡಿದ್ದಾಳೆ.
ಪತಿಯ ಸಾವನ್ನು ಬಯಸಿ ದೇವರಿಗೆ ಕೋರಿಕೆ ಪತ್ರ ಬರೆದಿರುವ ಪತ್ನಿಯೊಬ್ಬಳ ಈ ವಿಲಕ್ಷಣ ಪತ್ರ ವೈರಲ್ ಆಗಿದ್ದು, ತನ್ನ ಗಂಡನಿಂದ ಆಕೆ ಎಷ್ಟೊಂದು ಕಿರಿಕಿರಿ, ಹಿಂಸೆ ಅನುಭವಿಸುತ್ತಿರಬಹುದು ಎಂದು ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.