ಜನರಿಕ್‌ ಔಷಧ ಮಳಿಗೆ ಬಂದ್‌ಗೆ ಸೂಚನೆ


Team Udayavani, Sep 15, 2017, 12:27 PM IST

15-chikamagaluru-1.jpg

ಚಿಕ್ಕಮಗಳೂರು: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತೆರೆಯಲಾಗಿರುವ ಜನರಿಕ್‌ ಔಷಧ ಮಳಿಗೆಯನ್ನು ಮುಚ್ಚಿಸಲು ಕೂಡಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.ಶುಕ್ರವಾರ ಮಧ್ಯಾಹ್ನ ದಿಢೀರನೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಜನರಿಕ್‌ ಔಷಧ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದರು. 

ಅಲ್ಲಿ ಜನರಿಕ್‌ ಔಷಧಗಳಿಗಿಂತಲೂ ಹೆಚ್ಚಾಗಿ ಪ್ರಮುಖ ಕಂಪನಿಗಳ ಔಷಧಗಳ ದಾಸ್ತಾನು ಇರುವುದನ್ನು ಕಂಡು ಈ ಬಗ್ಗೆ ಔಷಧ ಮಳಿಗೆಯವರನ್ನು ವಿಚಾರಿಸಿದರು. ಇಲ್ಲಿಗೆ ಬರುವವರು ಪ್ರಮುಖ ಕಂಪನಿಗಳ ಔಷಧಗಳೇಬೇಕೆಂದು ಕೇಳುವುದರಿಂದ ಪ್ರಮುಖ ಔಷಧ ಕಂಪನಿಗಳ ಕೆಲವೊಂದು ಔಷಧಗಳನ್ನು ಇಟ್ಟಿರುವುದಾಗಿ ಅಂಗಡಿಯವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ.ರವಿ, ಜನರಿಕ್‌ ಔಷಧ ಮಳಿಗೆಗಳನ್ನು ಸರ್ಕಾರ ತೆರೆದಿರುವುದೇ ಬಡ ಜನತೆಗೆ ಕಡಿಮೆ ಹಣದಲ್ಲಿ ಗುಣಮಟ್ಟದ ಔಷಧಗಳು ದೊರೆಯಲಿ ಎಂದು. ಇಂತಹ ಕಡೆ ದುಬಾರಿ ಬೆಲೆಯ ಔಷಧಗಳನ್ನು
ಮಾರಾಟ ಮಾಡಿದರೆ ಸರ್ಕಾರದ ಯೋಜನೆ ಯಶಸ್ವಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇವುಗಳನ್ನು ಶಾಸಕರು, ಸಚಿವರು ಬಂದು ನೋಡಿ ಹೇಳಬೇಕೆ, ನೀವೇನು ಮಾಡುತ್ತಿದ್ದೀರಿ ಎಂದು ಸಚಿವರು ಜಿಲ್ಲಾ ಸರ್ಜನ್‌ ಡಾ| ದೊಡ್ಡಮಲ್ಲಪ್ಪ ಅವರನ್ನು ಪ್ರಶ್ನಿಸಿದರು. ತಾವು ಸಹ ಈ ಬಗ್ಗೆ ನೋಡಿ ಕ್ರಮ ಕೈಗೊಳ್ಳುವಂತೆ ಡಿಎಚ್‌
ಒಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಸರ್ಜನ್‌ ತಿಳಿಸಿದರು.

ಕೂಡಲೇ ಸ್ಥಳಕ್ಕೆ ಡಿಎಚ್‌ಒ ಅವರನ್ನು ಕರೆಸಿದ ಸಚಿವರು, ಜನರಿಕ್‌ ಔಷಧ ಮಳಿಗೆಯಲ್ಲಿ ಪ್ರಮುಖ ಕಂಪನಿಗಳ ದುಬಾರಿ ಬೆಲೆಯ ಔಷಧಗಳನ್ನು ಮಾರಾಟ ಮಾಡುತ್ತಿರುವುದರಿಂದ ಕೂಡಲೇ ಈ ಮಳಿಗೆಯನ್ನು ಮುಚ್ಚಿಸಿ ಬೇರೆಯವರಿಗೆ ವಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶೌಚಾಲಯದಲ್ಲಿ ನೀರಿಲ್ಲ: ಜಿಲ್ಲಾಆಸ್ಪತ್ರೆಯ ಹೊರರೋಗಿಗಳ ವಿಭಾಗದ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಶೌಚಾಲಯದಲ್ಲಿ ನೀರು ಇಲ್ಲದಿರುವುದು ಕಂಡು ಬಂದಿತು. ಈ ಬಗ್ಗೆ ಜಿಲ್ಲಾ ಸರ್ಜನ್‌ ಅವರನ್ನು ವಿಚಾರಿಸುತ್ತಿದ್ದ ಸಂದರ್ಭದಲ್ಲಿಯೇ ಪಕ್ಕದ ಮತ್ತೂಂದು ಶೌಚಾಲಯದಿಂದ ಯುವಕನೋರ್ವ ಹೊರಗೆ ಬಂದನು. ಅಲ್ಲಿ ನೀರು ಇದೆಯೇ ಎಂದು ಸಚಿವರು ಆ ಯುವಕನನ್ನು ಪ್ರಶ್ನಿಸಿದಾಗ, ಆತ ಇಲ್ಲ ಸಾರ್‌ ಇಲ್ಲಿಯೂ ನೀರಿಲ್ಲ ಎಂಬ ಉತ್ತರ ನೀಡಿದರು.

ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿ ದಾಖಲಾಗಿದ್ದ ಪ್ರತಿಯೊಬ್ಬ ರೋಗಿಯನ್ನೂ ಮಾತನಾಡಿಸಿದರು. ಆಸ್ಪತ್ರೆಗೆ ದಾಖಲಾಗಿದ್ದು ಯಾವಾಗ, ಸರಿಯಾಗಿ ನೋಡಿಕೊಳ್ಳುತ್ತಿರುವರೆ, ಔಷಧವನ್ನು ಇಲ್ಲಿಯೇ
ಕೊಡುತ್ತಿದ್ದಾರೊ ಅಥವಾ ಹೊರಗಡೆಯಿಂದ ತರಲು ಚೀಟಿ ಬರೆದುಕೊಡುತ್ತಿರುವರೋ ಎಂಬ ಪ್ರಶ್ನೆಗಳನ್ನು ಪ್ರತಿಯೊಬ್ಬರಲ್ಲಿಯೂ ಕೇಳಿ ಉತ್ತರ ಪಡೆದುಕೊಂಡರು.

ಧೈರ್ಯದಿಂದ ಎದುರಿಸು: ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ ಓರ್ವ ಯುವಕನು ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದನ್ನು ತಿಳಿದು ಬೇಸರ ವ್ಯಕ್ತಪಡಿಸಿದ ಸಚಿವರು, ಜೀವನದಲ್ಲಿ ಕೆಟ್ಟದ್ದು, ಒಳ್ಳೆಯದು
ಎಲ್ಲವೂ ಆಗುತ್ತದೆ. ಅದಕ್ಕೆ ಧೃತಿಗೆಡಬಾರದು. ಏನೇ ಬಂದರೂ ಅದನ್ನು ಧೈರ್ಯದಿಂದ ಎದುರಿಸಬೇಕು.ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ ಎಂದು ಯುವಕನಿಗೆ ತಿಳಿ ಹೇಳಿದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಇದ್ದರೂ ಪ್ರಯೋಜನವಾಗುತ್ತಿಲ್ಲ. ಸಿಟಿ ಸ್ಕ್ಯಾನ್  ಇಲ್ಲ, ಎಂ.ಆರ್‌.ಐ. ಸ್ಕ್ಯಾನಿಂಗ್ ಇಲ್ಲ ಎಂಬ ಮಾಹಿತಿ ಪಡೆದ ಸಚಿವರು, ವೆಂಟಿಲೇಟರ್‌ ಬಳಕೆಯಾಗದ ಬಗ್ಗೆ ಜಿಲ್ಲಾ ಸರ್ಜನ್‌ ಅವರನ್ನು ಪ್ರಶ್ನಿಸಿದಾಗ, ಅವರು ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಸಾಕಷ್ಟು ಖಾಲಿ ಇದೆ. ಇದರಿಂದ ವೆಂಟಿಲೇಟರ್‌ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಉತ್ತರಿಸಿದರು.

ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ಆಸ್ಪತ್ರೆಗೆ ಅವಶ್ಯಕವಿರುವ ಪದಾರ್ಥಗಳು, ಸೌಲಭ್ಯಗಳ ಸಮಗ್ರ ವರದಿ ನೀಡಿ, ತಾವು ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಾಜಿ ಶಾಸಕಿ ಎ.ವಿ. ಗಾಯತ್ರಿಶಾಂತೇಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌. ವಿಜಯ್‌ಕುಮಾರ್‌, ಜಿಲ್ಲಾಧಿಕಾರಿ ಜಿ. ಸತ್ಯವತಿ, ಜಿಲ್ಲಾ ರಕ್ಷಣಾಧಿಕಾರಿ ಕೆ. ಅಣ್ಣಾಮಲೈ ಇದ್ದರು. 

 

ಟಾಪ್ ನ್ಯೂಸ್

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-kottigehara

Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.