ಸಮಸ್ಯೆಗಳ ಆಗರ ಕಮದಾಳ ಶಾಲೆ
Team Udayavani, Sep 15, 2017, 1:05 PM IST
ದೇವದುರ್ಗ: ಬಿರುಕು ಬಿಟ್ಟು ಶಿಥಿಲಗೊಂಡ ಕಟ್ಟಡ, ಕೊಠಡಿ-ಶಿಕ್ಷಕರು-ಮೂಲ ಸೌಲಭ್ಯ ಕೊರತೆ, ಇರುವ ಒಂದು ಕೊಠಡಿಯಲ್ಲೇ ಬಸಿಯೂಟ ಸಾಮಗ್ರಿ ಸಂಗ್ರಹದ ಜೊತೆಗೆ 1ರಿಂದ 5ನೇ ತರಗತಿವರೆಗಿನ 30 ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ. ಇದು ತಾಲೂಕಿನ ಕಮದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ದುಸ್ಥಿತಿ.
ಕೊಪ್ಪರ್ ಕ್ಲಸ್ಟರ್ ವ್ಯಾಪ್ತಿಯ ಕಮದಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಇರುವುದೊಂದೇ ಕೊಠಡಿ. ಕಟ್ಟಡದ ಕಂಬ, ಮೇಲ್ಛಾವಣಿ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಬ್ಬಿಣದ ಸರಳುಗಳು ಕಾಣುತ್ತಿವೆ. ಈ ಕೊಠಡಿಯಲ್ಲೇ ಬಿಸಿಯೂಟ ಸಾಮಗ್ರಿ, ಸಿಲಿಂಡರ್ ಇಡಲಾಗಿದೆ. ಇನ್ನು ಶಾಲೆಯ ದಾಖಲೆಗಳನ್ನೂ ಇದರಲ್ಲೇ ಇಡಲಾಗಿದೆ.
ಉಳಿದ ಇಕ್ಕಟ್ಟಾದ ಜಾಗೆಯಲ್ಲಿ 1ರಿಂದ 5ನೇ ತರಗತಿವರೆಗಿನ ಸುಮಾರು 30 ಮಕ್ಕಳಿಗೆ ಶಿಕ್ಷಕರು ಪಾಠ ಮಾಡಬೇಕಿದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿ ಇದ್ದರೂ ಕೇವಲ ಇಬ್ಬರೇ ಶಿಕ್ಷಕರಿದ್ದಾರೆ. ಇವರೇ ಬಿಸಿಯೂಟದ ಉಸ್ತುವಾರಿ, ಕಚೇರಿ ಕೆಲಸ-ಕಾರ್ಯ, ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಿದೆ. ಶಾಲೆಯಲ್ಲಿ ಶೌಚಾಲಯವಿದ್ದರೂ ಬಳಸುವ ಸ್ಥಿತಿಯಲ್ಲಿಲ್ಲ. ಮಕ್ಕಳಿಗೆ ನೀರಿನ ಸೌಲಭ್ಯವಿಲ್ಲ. ವಿಷಯವಾರು ಇರಲಿ, ತರಗತಿವಾರು ಪಾಠ ಮಾಡಲು ಶಿಕ್ಷಕರೇ ಇಲ್ಲದಾಗಿದೆ. ಮಕ್ಕಳಿಗೆ ಆಟದ ಮೈದಾನ ಕೂಡ ಇಲ್ಲದಾಗಿದೆ. ಒಟ್ಟಾರೆ ಅವ್ಯವಸ್ಥೆಯ ಆಗರವಾಗಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಎಂತಹ ಗುಣಮಟ್ಟದ ಶಿಕ್ಷಣ ಸಿಗಬಹುದು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಸರ್ವ ಶಿಕ್ಷಣ ಅಭಿಯಾನದಡಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ಗ್ರಾಮಸ್ಥರು ಜಾಗೆ ನೀಡಲು ಮುಂದಾಗದ್ದರಿಂದ ಅನುದಾನ ವಾಪಸು ಹೋಗಿದೆ. ಕಳೆದ ವರ್ಷ ಇಲ್ಲಿದ್ದ ಇಬ್ಬರೂ ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದರಿಂದ ಗುಂಡುಗುರ್ತಿ ಶಾಲೆಯಿಂದ ಕಮದಾಳ ಶಾಲೆಗೆ ಎರವಲು ಸೇವೆಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಕಾಯಂ ಶಿಕ್ಷಕರ ಕೊರತೆ ಇದೆ.
ಸೋರುವ ಕಟ್ಟಡ: ಶಿಥಿಲಗೊಂಡ ಶಾಲಾ ಕೊಠಡಿ ಅಲ್ಪ ಮಳೆ ಬಂದರೂ ನೀರು ನಿಂತು ಸೋರುತ್ತದೆ. ಮಕ್ಕಳ ಸುರಕ್ಷತೆ ಜೊತೆಗೆ ಬಿಸಿಯೂಟ ಆಹಾರಧಾನ್ಯ, ಶಾಲಾ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಶಿಕ್ಷಕರು ಪರದಾಡುವಂತಾಗಿದೆ.
ಈಗಾಗಲೇ ಶಿಕ್ಷಣ ಇಲಾಖೆಗೆ ಕಟ್ಟಡ ದುರಸ್ತಿಗೊಳಿಸಲು ಮನವಿ ಸಲ್ಲಿಸಲಾಗಿದೆ. ಸರಕಾರ ಅನುದಾನ ಮಂಜೂರು ಮಾಡುವವರೆಗೆ ಹಳೇ ಕಟ್ಟಡ ಗತಿಯಾಗಿದೆ. ಗ್ರಾಮಸ್ಥರು ಶಾಲಾ ಕಟ್ಟಡಕ್ಕೆ ಜಾಗೆ ಒದಗಿಸಿದ್ದರೆ ಮಕ್ಕಳಿಗೆ ಇಂತಹ ಸ್ಥಿತಿ ಬರುತ್ತಿರಲ್ಲಿ ಎನ್ನುತ್ತಾರೆ ಪಾಲಕರು.
ಯಮನಾಳದಲ್ಲೂ ಸಮಸ್ಯೆ: ಇದೇ ಕ್ಲಸ್ಟರ್ ವ್ಯಾಪ್ತಿಯ ಯಮನಾಳ ಶಾಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹತ್ತು ವರ್ಷಗಳಿಂದ ಭೂ ದಾನಿಗಳು ಅಧಿಕಾರಿಗಳ ಮಧ್ಯ ನಡೆಯುತ್ತಿರುವ ತಕರಾರಿನಿಂದಾಗಿ ಇಲ್ಲಿವರೆಗೆ ಒಂದು ಕೋಣೆ ಬಾಗಿಲು ತೆಗೆಯದೇ ಬೀಗ ಹಾಕಲಾಗಿದೆ. ಒಬ್ಬರೇ ಶಿಕ್ಷಕರು ಐದು ತರಗತಿ ಮಕ್ಕಳಿಗೆ ಪಾಠ ಹೇಳಲು ತೀರ ಕಷ್ಟವಾಗಿದೆ. ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡುವುದರಿಂದ ಸ್ವಲ್ಪ ವಿರಾಳ ಎನ್ನುವಂತಾಗಿದೆ. ಗ್ರಾಮದಲ್ಲಿ ಶಾಲೆಗಳು ಆರಂಭವಾದಾಗ ನಿರ್ಮಿಸಿದ ಶಾಲಾ ಕಟ್ಟಡ ಶಿಥಿಲಗೊಂಡಿದೆ.
ಇನ್ನಾದರೂ ಶಿಕ್ಷಣ ಇಲಾಖೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಗ್ರಾಮಸ್ಥರು ಜಾಗೆ ಒದಗಿಸಬೇಕಿ¨
ನಾಗರಾಜ ತೇಲ್ಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್ಶಹರ್ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.