ಕನಸಲ್ಲಿ ಬಂದ್ರೆ ಹೇಳಿ ಸ್ವಾಮಿ ಎಷ್ಟು ಕೊಡ್ತೀರಾ?
Team Udayavani, Sep 15, 2017, 6:13 PM IST
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಗೂ ಸ್ಪೆಷಲ್ ಸಾಂಗ್‌ಗಳು ಬಂದಿವೆ. ಬರುತ್ತಲೂ ಇವೆ. ಅದರಲ್ಲೂ ಅಂತಹ ಹಾಡುಗಳಿಗೆ ಇಲ್ಲಿಯವರಿಗಿಂತ ಪರಭಾಷೆಯಿಂದ ಅನೇಕ ಡ್ಯಾನ್ಸರ್ ಬಂದು ಸೊಂಟು ಬಳುಕಿಸಿ ಹೋಗಿದ್ದೇ ಹೆಚ್ಚು. ಈಗ ಆ ಸಾಲಿಗೆ ಮುಂಬೈ ಮೂಲದ ಅಮೃತಾ ಮಾಂಡ್ವಿಕರ್ ಕೂಡ ಸೇರಿದ್ದಾರೆ.
ಹೌದು, ವಿಜಯ್ ರಾಘವೇಂದ್ರ ಅಭಿನಯದ “ರಾಜ ಲವ್ಸ್ ರಾಧೆ’ ಚಿತ್ರದಲ್ಲಿರುವ ಐಟಂ ಸಾಂಗ್‌ವೊಂದಕ್ಕೆ ಅಮೃತಾ ಮಾಂಡ್ವಿಕರ್, ತಮ್ಮ ನಡುವನ್ನು ಬಳುಕಿಸಿದ್ದಾರೆ. ಈ ಐಟಂ ಸಾಂಗ್‌ನ ವಿಶೇಷವೆಂದರೆ, ಮೈಸೂರು ರಸ್ತೆಯಲ್ಲಿರುವ ಟೊರಿನೋ ಪ್ಯಾಕ್ಟರಿಯ ಹಳೇಕಟ್ಟದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಖಾಲಿ ಬಾಟಲಿಗಳನ್ನು ಜೋಡಿಸಿ, ಆ ಹಾಡನ್ನು ವಿಶೇಷವಾಗಿ ಸೆರೆ ಹಿಡಿಯಲಾಗಿದೆ.
ನಾಗೇಂದ್ರ ಪ್ರಸಾದ್ ಅವರು ಬರೆದ “ಕನಸಲ್ಲಿ ಬಂದ್ರೆ ನಾನು ಹೇಳಿ ಸ್ವಾಮಿ ಎಷ್ಟು ಕೊಡ್ತೀರಾ …’ ಎಂದು ಹಾಡಿ ಕುಣಿಯುವ ಮೂಲಕ ಪಡ್ಡೆಗಳಿಗೆ ಮತ್ತೇರಿಸುವ ಲುಕ್‌ನಲ್ಲಿ ಅಮೃತಾ ಮಾಂಡ್ವಿಕರ್ ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಮಾತು. ಈಗಾಗಲೇ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನ ಹಲವು ಚಿತ್ರಗಳಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದ ಅಮೃತಾ ಮಾಂಡ್ವಿಕರ್‌ಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.
ವೀರ್‌ಸಮರ್ಥ್ ಸಂಗೀತದಲ್ಲಿ ಮೂಡಿಬಂದ ಈ ಹಾಡಿಗೆ ಇಂದು ನಾಗರಾಜ್ ದನಿಯಾಗಿದ್ದಾರೆ. ಅಂದಹಾಗೆ, ನೃತ್ಯ ನಿರ್ದೇಶಕ ಕಲೈ ಅವರು ಮೂರು ದಿನಗಳ ಕಾಲ ಚಿತ್ರೀಕರಿಸಿದ್ದು, ಕ್ಯಾಮೆರಾಮೆನ್ ಚಿದಾನಂದ್ ಈ ಹಾಡನ್ನು ಸೆರೆಹಿಡಿದಿದ್ದಾರೆ. ಈ ಹಾಡಲ್ಲಿ ಶೋಭರಾಜ್, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ ಸೇರಿದಂತೆ ವಿಲನ್ ಗ್ಯಾಂಗ್ ಸ್ಟೆಪ್ ಹಾಕಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಯು ಟ್ಯೂಬ್‌ನಲ್ಲಿ ಮೆಚ್ಚುಗೆ ಪಡೆಯುತ್ತಿವೆ.
ನಾಯಕ ವಿಜಯ್ ರಾಘವೇಂದ್ರ ಅವರಿಗೆ ರಾಧಿಕಾ ಪ್ರೀತಿ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ರವಿಶಂಕರ್, ರಾಕೇಶ್ ಅಡಿಗ, ಶುಭಾ ಪುಂಜಾ, ತಬಲಾ ನಾಣಿ, ಮಿತ್ರ, ಕುರಿ ಪ್ರತಾಪ್, ಪವನ್‌ಕುಮಾರ್, ಕುರಿ ರಂಗ, ಸುನೀಲ್, ಭವ್ಯಾ ಸೇರಿದಂತೆ ಕಲಾವಿದರ ದಂಡೇ ಇದೆ. ಎಂ.ರಾಜಶೇಖರ್ ಈ ಚಿತ್ರವನ್ನು ನಿರ್ದೇಶಿಸಿದರೆ, ಎಚ್.ಎಲ್.ಎನ್ ರಾಜ್ ಹೆಸರಘಟ್ಟ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.