ಅಣು ಕ್ಷಿಪಣಿ ಠೇಂಕಾರ
Team Udayavani, Sep 16, 2017, 7:48 AM IST
ಸಿಯೋಲ್/ವಾಷಿಂಗ್ಟನ್: ಅಣ್ವಸ್ತ್ರ ಪರೀಕ್ಷೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ಉತ್ತರ ಕೊರಿಯಾ ಮತ್ತೆ ಜಪಾನ್ ಹಾದು ಹೋಗುವ ಕ್ಷಿಪಣಿ ಹಾರಿಸಿ ಅಟ್ಟಹಾಸ ಮೆರೆದಿದೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯಾ ಇಡೀ ಉತ್ತರ ಕೊರಿಯಾವನ್ನೇ ನಾಶ ಮಾಡುವ ಮಾತುಗಳನ್ನಾಡಿದ್ದರೆ, ಜಪಾನ್ ಯಾವುದೇ ಕಾರಣಕ್ಕೂ “ಪ್ರಚೋದನೆ’ ಮಾಡಬೇಡಿ ಎಂದಿದೆ.
ಉತ್ತರ ಕೊರಿಯಾದಿಂದ ಕ್ಷಿಪಣಿ ಹೊರಟ ತತ್‌ಕ್ಷಣವೇ ಜಪಾನ್‌ನ ಹೊಕ್ಕೆ„ಡೋ ದ್ವೀಪದಲ್ಲಿ ತುರ್ತು ಸಂದೇಶ ಹೊರಡಿಸಲಾಗಿದೆ. “ಕೂಡಲೇ ಕಟ್ಟಡ ಸಹಿತ ಎಲ್ಲೆಲ್ಲಿ ಅಡಗಿ ಕುಳಿತುಕೊಳ್ಳಲು ಸಾಧ್ಯವೋ ಅಲ್ಲಿಗೆ ಹೋಗಿ’ ಎಂದು ಎಚ್ಚರಿಕೆ ರವಾನಿಸಲಾಗಿತ್ತು. ಜತೆಗೆ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಉತ್ತರ ಕೊರಿಯಾಕ್ಕೆ ಕಠಿನ ಎಚ್ಚರಿಕೆಯನ್ನೂ ನೀಡಿದ್ದಾರೆ.
ಶುಕ್ರವಾರ ಬೆಳ್ಳಂಬೆಳಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಯಮ ಉಲ್ಲಂ ಸಿ ಮೂರು ವಾರಗಳ ಅಂತರದಲ್ಲೇ 2ನೇ ಬಾರಿಗೆ ಕ್ಷಿಪಣಿ ಉಡಾಯಿಸಿದ ಬಗ್ಗೆ ಬಹುತೇಕ ರಾಷ್ಟ್ರಗಳಿಂದ ಖಂಡನೆ ವ್ಯಕ್ತಗೊಂಡಿವೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿಯೇ ಪಾಂಗ್ ಯಾಂಗ್ ಸಮೀಪ ಸುನಾನ್ ಜಿಲ್ಲೆಯ ಉಡಾ ವಣಾ ಕೇಂದ್ರದಿಂದ ಈ ಪರೀಕ್ಷೆ ನಡೆದಿದೆ. ಜಪಾನ್‌ನ ನೈಋತ್ಯ ದ್ವೀಪ ಪ್ರದೇಶದ ಹೊಕ್ಕೆ„ಡೋ ಬಂದರನ್ನೂ ದಾಟಿದ ಕ್ಷಿಪಣಿ, ಅದರಿಂದಾಚೆಗಿನ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ.
ಪರೀಕ್ಷೆ ನಡೆದ ಕೆಲವು ಹೊತ್ತಲ್ಲೇ ದಕ್ಷಿಣ ಕೊರಿಯಾ ಕೂಡ ಸೇನಾ ತಾಲೀಮು ನಡೆಸಿ ಬಲ ಪ್ರದರ್ಶನ ಮಾಡಿದೆ. ಉತ್ತರವಾಗಿ ತಾನೇ ಸಿದ್ಧಪಡಿಸಿದ ಹ್ಯೂನ್ಮೊ-2 ಅಣ್ವಸ್ತ್ರ ಕ್ಷಿಪಣಿಯನ್ನು ಉಡಾಯಿಸಿ ಸಮುದ್ರಕ್ಕೆ ಬೀಳಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಜತೆಗೆ ತಾನೇನಾದರೂ ಉತ್ತರ ಕೊರಿಯಾದ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ, ಆ ದೇಶ ಇತಿಹಾಸ ಸೇರಲಿದೆ ಎಂದು ಎಂದಿದೆ. “ವಿಶ್ವಸಂಸ್ಥೆ ಭದ್ರತಾ ಮಂಡಳಿ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಿ ಉತ್ತರ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಕ್ಷಿಪಣಿ ಪರೀಕ್ಷೆ ಮೂಲಕ ತಾಳ್ಮೆ ಕೆಡಿಸುತ್ತಿರುವ ಉ.ಕೊರಿಯಾ ಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಅಮೆರಿಕ ಕೆಲವು ವಾರಗಳ ಹಿಂದಷ್ಟೇ ಕೈಗೊಂಡಿದ್ದ ನಿರ್ಣಯಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿತ್ತು. ಜಪಾನ್ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.
ಬೆಳ್ಳಂಬೆಳಗ್ಗೆ “ದುಢುಂ’
ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಉತ್ತರ ಕೊರಿಯಾವೇ ಹೇಳಿಕೊಂಡಿರುವಂತೆ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಕೇವಲ 15 ನಿಮಿಷಗಳ ಅಂತರದಲ್ಲಿ 1,240 ಮೈಲು ದೂರ ತಲುಪಿ, 19 ನಿಮಿಷದಲ್ಲಿ 2,300 ಮೈಲು ದೂರ ಕ್ರಮಿಸಿದೆ. ಬಹಳ ಸುಲಭವಾಗಿ ಉತ್ತರ ಕೊರಿಯಾದಿಂದ 2,100 ಮೈಲು ದೂರದಲ್ಲಿರುವ ಅಮೆರಿಕದ ಪೆಸಿಫಿಕ್ ಪ್ರದೇಶ ಗುವಾಮ್‌ಗೆ ಅಪ್ಪಳಿಸಲಿದೆ ಎಂದು ಹೇಳುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಅಚ್ಚರಿ ಎಂದರೆ ಕ್ಷಿಪಣಿ ಜಪಾನ್ ಜಲತೀರ ದಾಟಿ ಅಮೆರಿಕದತ್ತ ಮುಖಮಾಡಿ ಸಾಗರಕ್ಕೆ ಬಿದ್ದಿದೆ. ಇದೀಗ ಪರೀಕ್ಷೆಗೊಳಪಡಿಸಿದ ಕ್ಷಿಪಣಿ ಸೆಪ್ಟೆಂಬರ್ 3ರಂದು ಪರೀಕ್ಷಿಸಿದ ಕ್ಷಿಪಣಿಗಿಂತಲೂ ಹೆಚ್ಚಿನ ಸಾಮರ್ಥ್ಯದ್ದೂ ಎಂದು ಹೇಳಲಾಗಿದೆ.
ಹೌಹಾರಿದ ಜಪಾನ್ ಜನತೆ
ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದ ಬೆನ್ನಲ್ಲೇ ಜಪಾನ್‌ನ ದ್ವೀಪ ಹೊಕ್ಕೆ„ಡೋ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು. ಸೈರನ್ ಹಾಕಿ, ಜೋರಾದ ಧ್ವನಿಯಲ್ಲಿ ಕ್ಷಿಪಣಿ ದಾಳಿ ಎಂದೇ ಎಚ್ಚರಿಸಲಾಯಿತು. ತಕ್ಷಣ ದ್ವೀಪದ ನಿವಾಸಿಗಳು ತಮಗೆ ತರಬೇತಿ ನೀಡಿದಂತೆ ಕ್ಷಿಪಣಿ, ಕ್ಷಿಪಣಿ, ಕ್ಷಿಪಣಿ ಎಂದು ನೆಲಮಾಳಿಗೆಗಳಲ್ಲಿ ಅವತುಕೊಂಡರು. ಪ್ರಾಣ ರಕ್ಷಿಸಿಕೊಳ್ಳಲು ಸುರಕ್ಷತಾ ಸ್ಥಳ ಸೇರಿಕೊಂಡರು. ಆದರೆ ಕ್ಷಿಪಣಿ ಕೆಲ ನಿಮಿಷಗಳಲ್ಲಿ ಸಾಗರಕ್ಕೆ ಬಿದ್ದ ಮಾಹಿತಿ ಪಡೆದು ನಿಟ್ಟುಸಿರು ಬಿಟ್ಟರು.
ಭಾರತ ನೆಲದಿಂದ ಕೊರಿಯಾಗೆ ಎಚ್ಚರಿಕೆ
ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರವಷ್ಟೇ ಭಾರತ ಪ್ರವಾಸದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಬೆ ಅವರ ಜಂಟಿ ಪತ್ರಿಕಾಗೋಷ್ಠಿ ನಡೆಸುವಾಗ ಉತ್ತರ ಕೊರಿಯಾದ ಅಟಾಟೋಪ ಖಂಡಿಸಲಾಗಿದೆ. ಅಲ್ಲದೆ ಅಣ್ವಸ್ತ್ರ ಮತ್ತು ಕ್ಷಿಪಣಿ ಯೋಜನೆಗಳನ್ನು ಕೈಬಿಡುವಂತೆ ಮೋದಿ ಮತ್ತು ಅಬೆ ಒತ್ತಾಯಿಸಿದ್ದಾರೆ. ಇದರ ಜತೆಯಲ್ಲಿ ಈ ಹಿಂದೆ ಉತ್ತರ ಕೊರಿಯಾ ಪರಮಾಣು ಅಸ್ತ್ರ ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡಿದ್ದ ಪಾಕಿಸ್ಥಾನದ ಪಾತ್ರವನ್ನೂ ಪ್ರಸ್ತಾವಿಸಿರುವ ಈ ನಾಯಕರು, ಉತ್ತರ ಕೊರಿಯಾಗೆ ಸಹಾಯ ಮಾಡುತ್ತಿರುವ ಎಲ್ಲ ದೇಶಗಳನ್ನು ಹೊಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಒಂದೇ ಕಲ್ಲಿಗೆ ಚೀನ ಮತ್ತು ಪಾಕಿಸ್ಥಾನಕ್ಕೆ ಗುರಿ ಇಟ್ಟು ಹೊಡೆದಿದ್ದಾರೆ.
ಮತ್ತೂಂದು ಪರೀಕ್ಷೆ ?
ಉ. ಕೊರಿಯಾ ಇನ್ನೊಂದು ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗೊಳಪಡಿಸುವ ಲೆಕ್ಕಾಚಾರದಲ್ಲಿದೆ. ಇದು ಈಗಾಗಲೇ ಪರೀಕ್ಷಿಸಲಾದ ಕ್ಷಿಪಣಿಗಳಿಗಿಂತ ಸಾಮರ್ಥ್ಯದಲ್ಲೂ, ಕ್ರಮಿಸುವ ದೂರ ದಲ್ಲೂ ಅತ್ಯುತ್ತಮ ಎಂದೇ ಹೇಳಲಾಗು ತ್ತಿದೆ. ಜಪಾನ್ ದಾಟಿ ಪೆಸಿಫಿಕ್ ಸಾಗರ ದಲ್ಲಿ (ಅಮೆರಿಕಕ್ಕೆ ಹತ್ತಿರದಲ್ಲಿ) ಬೀಳಿಸು ವುದೇ ಗುರಿ ಎಂದೂ ಹೇಳಲಾಗಿದೆ.
ಉತ್ತರ ಕೊರಿಯಾದ ಉದ್ದೇಶ ಏನೆಂದು ನಾವು ಊಹಿಸಲೂ ಸಾಧ್ಯವಾಗ್ತಿಲ್ಲ. ಬಹುಶಃ ಅವರ ಟಾರ್ಗೆಟ್ ಗುವಾಮ್ ಆಗಿರಬಹುದು. ಆದರೆ
ಅಮೆರಿಕ ಉತ್ತರ ಕೊರಿಯಾ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಲ್ಲ.
ಇತುನೋರಿ ಒನೊಡೇರಾ, ಜಪಾನ್ ರಕ್ಷಣಾ ಸಚಿವ
ಉತ್ತರ ಕೊರಿಯಾದ್ದು ರಾಕ್ಷಸ ಪ್ರವೃತ್ತಿ. ಕ್ಷಿಪಣಿ ಪರೀಕ್ಷೆ ಸಂಬಂಧ ಅಮೆರಿಕ ಸೇನೆ ಮಾತುಕತೆ ನಡೆಸಲು ತಯಾರಿಲ್ಲ. ಅದಕ್ಕೆ ತಕ್ಕುದಾದ ಉತ್ತರವನ್ನು ನೀಡಲಿದೆ.
ಜಿಮ್ ಮ್ಯಾಟ್ಟಿಸ್, ಅಮೆರಿಕ ರಕ್ಷಣಾ ಕಾರ್ಯದರ್ಶಿ
ವಿಶ್ವದ ಶಾಂತಿ ಕೆಡಿಸಲು ಉತ್ತರ ಕೊರಿಯಾ ಮುಂದಾಗಿದೆ. ಈ ವರ್ತನೆ ಖಂಡನೀಯ. ಮತ್ತೆ ನಿಯಮ ಉಲ್ಲಂ ಸಿದ್ದಕ್ಕೆ ವಿಶ್ವಸಂಸ್ಥೆ ತಕ್ಷಣ ಈ ಬಗ್ಗೆ
ಗಂಭೀರ ಚಿಂತನೆ ನಡೆಸಿ ನಿರ್ಬಂಧ ಹೇರಬೇಕಿದೆ. ಇಂಥ ವರ್ತನೆಗೆ ಜಗತ್ತೇ ಸೂಕ್ತ ಸಂದೇಶ ರವಾನಿಸಬೇಕು.
ಶಿಂಜೋ ಅಬೆ, ಜಪಾನ್ ಪ್ರಧಾನಿ
ಒಂದೊಮ್ಮೆ ಉತ್ತರ ಕೊರಿಯಾ ಅಮೆರಿಕ ಅಥವಾ ನಮ್ಮ ಮೇಲೆ ದಾಳಿ ನಡೆಸಿದಲ್ಲಿ, ನಾವೂ ಬಲಪ್ರದರ್ಶನ ಮಾಡಿ ತೋರಿಸಬೇಕಾಗುತ್ತದೆ. ಮತ್ತೆ ತಲೆ ಎತ್ತಲಾಗದ ಪರಿಸ್ಥಿತಿ ಎದುರಿಸಬೇಕಾಗಿ ಬರಬಹುದು.
ಮೂನ್ ಜೇ-ಇನ್, ದಕ್ಷಿಣ ಕೊರಿಯಾ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.