ಬ್ಲೂ ವೇಲ್ ಆಟ: ಕೇಂದ್ರ ಸರಕಾರದ ಎಚ್ಚರಿಕೆ ಸುತ್ತೋಲೆ
Team Udayavani, Sep 16, 2017, 8:04 AM IST
ಹೊಸದಿಲ್ಲಿ: “ಹೆತ್ತವರೇ ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ಬ್ಲೂ ವೇಲ್ ಚಾಲೆಂಜ್ ಗೇಮ್ ಬಗ್ಗೆ ಅಗತ್ಯವಿಲ್ಲದೆ ಮಕ್ಕಳ ಎದುರು ಮಾತನಾಡಬೇಡಿ.’ ದೇಶದಲ್ಲಿ ಮಾರಕ ಗೇಮ್‌ನಿಂದ ಒಂಬತ್ತು ಮಂದಿ ಆತ್ಮಹತ್ಯೆಗೆ ಶರಣಾದ ಬಳಿಕ ಶುಕ್ರವಾರ ಕೇಂದ್ರ ಸರಕಾರ ಎಚ್ಚರಿಕೆಯ ಸುತ್ತೋಲೆ ಹೊರಡಿಸಿದೆ. ಮಕ್ಕಳ ಎದುರು ಕುತೂಹಲಕ್ಕಾಗಿ ಗೇಮ್ ಬಗ್ಗೆ ಮಾತನಾಡಿದರೆ ಅವರು ಅದರ ಬಗ್ಗೆ ಕುತೂಹಲ ದಿಂದ ಇಂಟರ್‌ನೆಟ್‌ನಲ್ಲಿ ಹುಡು ಕಾಡಬಹುದು. ಹೀಗಾಗಿ ಅದನ್ನು ನಡೆಸದಂತೆ ಮನವಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನೋಟಿಸ್: ಈ ನಡುವೆ ಗೇಮ್ ಮೇಲೆ ನಿಷೇಧ ಹೇರಲು ಕೇಂದ್ರಕ್ಕೆ ನಿರ್ದೇಶ ನೀಡು ವಂತೆ ಒತ್ತಾಯಿಸಿ ಮಧುರೈಯ ಎನ್.ಎಸ್. ಪೊನ್ನಯ್ಯನ್ (73) ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಜತೆಗೆ ಈ ನಿಟ್ಟಿನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನೆರವು ನೀಡಬೇಕು ಎಂದು ಕೋರಿದೆ. ಮಧುರೈಯಲ್ಲಿನ ಪ್ರಕರಣದ ಬಳಿಕ ಅವರು ಸುಪ್ರೀಂಗೆ ಮನವಿ ಮಾಡಿದ್ದರು.
ಸಲಹೆಗಳೇನು?
ಖನ್ನತೆಗೆ ಒಳಗಾಗಿದ್ದರೆ, ಅವರನ್ನು ಮಾತನಾಡಿಸಿ ವಿವರ ಪಡೆದುಕೊಳ್ಳಬೇಕು. ಯಾವುದೇ ಹಂತದಲ್ಲಿ ಅವರಿಗೆ ಬೆಂಬಲವಾಗಿ ಹೆತ್ತವರು ನಿಲ್ಲಬೇಕು.
ಹೆತ್ತವರು ಮತ್ತು ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಯಾವುದನ್ನು ನೋಡುತ್ತಿದ್ದಾರೆ ಎಂಬ ಬಗ್ಗೆ ಹೆಚ್ಚು ಗಮನಹರಿಸಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ರಹಸ್ಯವಾಗಿ ಅದು ಹರಿದಾಡುತ್ತಿದೆ. ಅದು ಆತ್ಮಹತ್ಯೆಗೆ ಪ್ರೇರಣೆ ನೀಡುವುದರಿಂದ ಖನ್ನತೆಗೆ ಒಳಗಾಗಿರುವವರನ್ನೇ ಆಟಕ್ಕೆ ಸೇರ್ಪಡೆ ಯಾಗುವಂತೆ ಪ್ರೇರೇಪಿಸುತ್ತದೆ.
ಅಸಹಜವಾಗಿ ಮಕ್ಕಳು ವರ್ತಿಸುತ್ತಿದ್ದರೆ ಹೆತ್ತವರು ಈ ಬಗ್ಗೆ ಗಮನ ಹರಿಸಬೇಕು. ಬ್ಲೂ ವೇಲ್ ಆಡುವವರು ದೇಹದ ಭಾಗಗಳಲ್ಲಿ ಆಳವಾದ ಗಾಯ ಮಾಡಿಕೊಳ್ಳುತ್ತಾರೆ.
ಎಂದಿಗಿಂತ ಹೆಚ್ಚಿನ ಸಮಯವನ್ನು ಜಾಲತಾಣಗಳಲ್ಲಿ ಮಕ್ಕಳು ಕಳೆಯುತ್ತಿದ್ದಾರೆ ಎಂದರೆ ಅದರ ಬಗ್ಗೆ ಎಚ್ಚರಿಕೆ ವಹಿಸಿ. ವರ್ತನೆ ಬದಲಾಗಿದ್ದರೆ ಮಕ್ಕಳನ್ನು ವಿಚಾರಿಸಿ.
ಮಕ್ಕಳ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಹೊಸ ಸಂಪರ್ಕ ಸಂಖ್ಯೆ, ಇ-ಮೇಲ್‌ಗಳಿದ್ದರೆ ಗಮನಿಸಿ.
ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಉತ್ತಮ ದರ್ಜೆಯ ಪೇರೆಂಟಲ್ ಲಾಕ್ ಅಳವಡಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.