ಇಂಜಿನಿಯರ್ ವೃತ್ತಿಗಿದೆ ಅತ್ಯುನ್ನತ ಗೌರವ
Team Udayavani, Sep 16, 2017, 10:01 AM IST
ಜಗಳೂರು: ಸಮಾಜದಲ್ಲಿ ಇಂಜಿನಿಯರ್ ವೃತ್ತಿಗೆ ತನ್ನದೇ ಆದ ಗೌರವವಿದೆ. ಹೀಗಾಗಿ ನಿರ್ವಹಿಸುವ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಚಂದ್ರಶೇಖರ್ ಕರೆ ನೀಡಿದರು.ಇಲ್ಲಿನ ಜಿಪಂ ಇಂಜಿನಿಯರಿಂಗ್ ಕಚೇರಿಯಲ್ಲಿ ಇಂಜಿನಿಯರ್ ದಿನಾಚರಣೆಯ ಅಂಗವಾಗಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಕತೆ ಮೆರೆಯುವುದರ ಮೂಲಕ ಇಂಜಿನಿಯರ್ ವೃತ್ತಿಗೆ ಗೌರವ ತಂದುಕೊಟ್ಟರು. ಕೆಆರ್‌ಎಸ್‌ನಂತಹ ಬೃಹತ್ ನೀರಾವರಿ ಕಾಮಗಾರಿಗಳು ಅವರ ಪ್ರತಿಭೆಗೆ ನಿದರ್ಶನವಾಗಿವೆ. ಅವರ ತಾಂತ್ರಿಕತೆಯ ಕೌಶಲ್ಯವನ್ನು ವಿಶ್ವವೇ ಇತ್ತ ತಿರುಗಿ ನೊಡುವಂತೆ ಮಾಡಿದೆ ಎಂದರು.
ತಾಪಂ ಸದಸ್ಯ ಶಂಕರ್‌ನಾಯ್ಕ ಮಾತನಾಡಿ ಸರ್ ಎಂ.ವಿಶ್ವೇಶ್ವರಯ್ಯನವರು ಸೇವಾ ಮನೋಭಾವನೆ ಹೊಂದಿದ್ದರು. ತಮ್ಮ ಜೀವಿತಾವಧಿ ಯಲ್ಲಿ ಅವರೆಂದು ಲಾಭವನ್ನು ನಿರೀಕ್ಷಿಸಲಿಲ್ಲ. ಅಂತಹ ದಕ್ಷ ಪ್ರಾಮಾಣಿಕರ ಹೆಸರಿನಲ್ಲಿ ಇಂಜಿನಿಯರ್ ದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಸಹಾಯಕ ಇಂಜಿನಿಯರ್‌ಗಳಾದ ಮಹಾಂತೇಶ್, ದಯಾನಂದಸ್ವಾಮಿ, ಕಿರಿಯ ಇಂಜಿನಿಯರ್‌ಗಳಾದ ಮಂಜುನಾಥ್, ನಂದೀಶ್, ನಾಗರಾಜ್, ಹನುಮಂತಪ್ಪ, ಸಿಬ್ಬಂದಿ ಹುಲಿಯಪ್ಪ ರೆಡ್ಡಿ, ಖಾದರ್ ಸಾಬ್, ಗೋವಿಂದರೆಡ್ಡಿ, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಗುತ್ತಿಗೆದಾರರಾದ ಹಾಲೇಶ್, ಮಾರಪ್ಪನಾಯಕ, ಪಟೇಲ್ ಮಾರಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.