ಮಾರುತೇಶ್ವರನ ಮಹಾತ್ಮೆ
Team Udayavani, Sep 16, 2017, 11:40 AM IST
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರದ ಮಾರುತೇಶ್ವರ ದೇವಾಲಯ ಪ್ರಾಚೀನ ಪರಂಪರೆಯ ದ್ಯೋತಕವಾಗಿದೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ವಿಸ್ಮಯ ರೀತಿಯ ಹತಾರ ಸೇವೆ, ಕಾಯಿ ಒಡೆಯುವುದು , ಹೇಳಿಕೆ ನುಡಿಯುವುದು ವಿಶೇಷ ಆಕರ್ಷಣೆ. ನಮ್ಮ ಹನುಮಾನ್ ಮಂದಿರಗಳ ಜಾತ್ರೆಗಳಲ್ಲಿ ಹತಾರ ಸೇವೆ ಇಲ್ಲ. ಅದನ್ನು ನೀವು ನೋಡಬೇಕೆಂದರೆ ತಿಮ್ಮಾಪುರಕ್ಕೇ ಬರಬೇಕು.
ತಿಮ್ಮಾಪೂರ ಒಂದು ಸಣ್ಣ ಗ್ರಾಮ. ಇದು ಅಮರಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ.
ಶ್ರೀಮಾರುತೇಶ್ವರನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ದಿಸುವುದೆನ್ನುವ ನಂಬಿಕೆ ಇಂದಿಗೂ ಆಳವಾಗಿ ಬೇರೋರಿದೆ. ವಿಜಯಪುರ-ಬಾಗಲಕೋಟ ಜಿಲ್ಲೆಯಲ್ಲಿ ಐವರು ಪ್ರಾಣದೇವರನ್ನು ಜಾಗೃತ ದೇವರೆಂದು ಕರೆಯಲಾಗಿದೆ. ಹಲಗಲಿ, ಯಲಗೂರ, ತುಳಸಿಗೇರಿ, ಅಚನೂರ ಹಾಗೂ ಕೋರವಾರ ಗ್ರಾಮದಲ್ಲಿರುವ ದೇವರನ್ನು ಜಾಗೃತ ದೇವರೆನ್ನುವ ಪ್ರತೀತಿ ಇದೆ. ಅದರಂತೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರದ ಹನಮಂತ ದೇವರೂ ಜಾಗೃತ ದೇವರೆಂದು ಹೇಳಬಹುದು.
ಈ ಗ್ರಾಮಕ್ಕೆ ಭೇಟಿ ಕೊಟ್ಟರೆ, ದಕ್ಷಿಣಾ ಭಿಮುಖವಾಗಿರುವ ಎರಡು ದೇವಾಲಯಗಳು ಕಾಣಸಿಗುತ್ತವೆ. ಅವುಗಳಲ್ಲಿ ಒಂದು ಶ್ರೀ ಮಾರುತೇಶ್ವರ, ಇನ್ನೊಂದು ಬಸವೇಶ್ವರ. ಈ ಎರಡು ದೇವರುಗಳ ಜಾತ್ರೆಯೂ ಒಂದೇ ದಿನ ನಡೆಯುವುದು ತಾಲೂಕಿನ ವಿಶೇಷತೆಯಲ್ಲೊಂದಗಿದೆ.
ದೇವಾಲಯದ ಒಳ, ಹೊರ ಗೋಡೆಗಳ ಮೇಲೆ ಪೌರಾಣಿಕ ಹಿನ್ನೆಲೆಯ ಕಥೆ ಹೇಳುವ ಅನೇಕ ಚಿತ್ರಗಳಿವೆ. ದೇವಸ್ಥಾನದ ಎದುರಿಗೆ ಭರಮದೇವರ ಕಟ್ಟೆ ಇದೆ. ಜಾತ್ರೆಯ ದಿವಸ ಹತಾರ ಸೇವೆ ನಡೆದ ನಂತರ ಕೊನೆಯ ಪೂಜಾರಿಯು ಈ ಕಟ್ಟೆಯ ಮೇಲೆ ನಿಂತು ಹೇಳಿಕೆ ಕೊಡುತ್ತಾರೆ.
ತಿಮ್ಮಾಪುರದ ಪೂಜಾರಿಗಳಾದ ದೇಸಾಯಿಯವರು ಹರಪನಹಳ್ಳಿಯಿಂದ ಹುನಗುಂದ ದಮ್ಮೂರದ ಗುಡ್ಡದ ಕಡೆ ಬರುತ್ತಿರುವಾಗ ಅಲ್ಲಿ ಏನೋ ಅವರ ಮನ¨ಲ್ಲಿ ಮೂಡಿ ಬಂದು ಕಲ್ಲಿನ ಮೇಲೆ ನಿಂತರಂತೆ. ಆ ಸಂದರ್ಭದಲ್ಲಿ ಅವರಿಗೆ ಕಣ್ಣುಗಳು ಕಾಣದಂತಾಯಿತಂತೆ. ಮತ್ತೆ ಆ ಸ್ಥಳ ಬಿಟ್ಟು ಕದಲಿದಾಗ, ಸ್ವಲ್ಪ ಸ್ವಲ್ಪ ಕಣ್ಣುಗಳು ಕಾಣಿಸಿದಂತಾಗಿದೆ. ಕಣ್ಣು ತರೆದಾಗ ಮಾರುತೇಶ್ವರ ಪ್ರತ್ಯಕ್ಷನಾದನಂತೆ.
“ಭಕ್ತನೇ, ನೀನು ಎಲ್ಲಿಗೆ ಹೋಗುವೆ.? ನನ್ನನ್ನೂ ಅಲ್ಲಿಗೆ ಕರದುಕೊಂಡು ಹೋಗು. ನಾನೂ ನಿನ್ನ ಜೋತೆ ಬರುತ್ತೇನೆ’ ಎಂದು ಅಶರೀರವಾಣಿ ಕೇಳಿಸಿತಂತೆ.
ಆಗ ಆ ಭಕ್ತನು ನಿನ್ನನ್ನು ಕರೆದೊಯ್ಯಲು ಹೇಗೆ ಸಾಧ್ಯ? ಎಂದು ಅವನನ್ನು ಕೇಳಿದನಂತೆ. ಆಗ ಅಶರೀರವಾಣಿಯು, ನಾನು ರೋಟಿ ತೂಕದಲ್ಲಿ ಬರುತ್ತೇನೆ ಎನ್ನಲು, ಆ ವ್ಯಕ್ತಿ ನೆಲದಲ್ಲಿಯ ಆ ಕಲ್ಲನ್ನು ಎತ್ತಿಕೊಂಡನಂತೆ. ಅದು ಬಹಳ ಹಗುರವಾಯಿತು. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಸಮೀಪಕ್ಕೆ ಬರುತ್ತಿರಲು, ಆ ಕಲ್ಲು ಭಾರವಾಯಿತಂತೆ.
ಆಗ ಆ ವ್ಯಕ್ತಿಯು ಆ ಮೂರ್ತಿಯನ್ನು ಆ ಸ್ಥಳದಲ್ಲಿ ಬಿಟ್ಟು ಹೊರಟನಂತೆ. ಆಗ ಆ ಮೂರ್ತಿಯು- ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡಾ. ಈ ಊರಿನ ಡೊಳ್ಳು-ಕಳಸದೊಂದಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು. ನನಗೆ ಸಂಗಟಿ ಎಡೆಯನ್ನು ಮಾಡಿ ತರಲು ಈ ಊರಿನ ಹಿರಿಯರಿಗೆ ಹೇಳು’ ಎಂದಿತಂತೆ . ಆ ಪ್ರಕಾರ ಗ್ರಾಮಕ್ಕೆ ತಂದು ಮಾರುತೇಶ್ವರನನ್ನು ಪ್ರತಿಷ್ಠಾಪಿಸಿದರು ಎನ್ನುವ ಪ್ರತೀತಿ ಇದೆ.
ವೈ.ಬಿ.ಕಡಕೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.