ಹಾರ್ಮೋನಿಯಂ ವಾದಕ ಬಡಿಗೇರಗೆ ವಾಡೆ ಸತ್ಕಾರ
Team Udayavani, Sep 16, 2017, 1:31 PM IST
ಕುಂದಗೋಳ: ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳ ಪಟ್ಟಣದಲ್ಲಿ ಸಂಗೀತ ಪಾಠಶಾಲೆ ತೆರೆಯುವುದಾಗಿ ಶಾಸಕ ಸಿ.ಎಸ್.ಶಿವಳ್ಳಿಯವರು ಹೇಳಿದರು. ಪಟ್ಟಣದ ನಾಡಗೇರ ವಾಡೆಯಲ್ಲಿ ಶ್ರೀಮಂತ ನಾನಾಸಾಹೇಬ ನಾಡಗೇರ ಸ್ಮೃತಿ ಪ್ರತಿಷ್ಠಾನ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಿರಾನಾ ಘರಾನಾದಲ್ಲಿ ಅಮೋಘ ಸಾಧನೆಗೈದು ಕುಂದಗೋಳಕ್ಕೆ ಕೀರ್ತಿ ತಂದ ಶ್ರೇಯ ಸವಾಯಿ ಗಂಧರ್ವರದ್ದಾಗಿದೆ. ಅವರ ತವರಲ್ಲಿ ಸಂಗೀತ ಶಾಲೆ ತೆರೆದು ಯುವ ಪೀಳಿಗೆಯಲ್ಲಿ ಸಂಗೀತದ ಅಭಿರುಚಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರದೊಂದಿಗೆ ಸಮಾಲೋಚಿಸಿ ಅತಿ ಶೀಘ್ರದಲ್ಲಿಯೇ ಆರಂಭಿಸುವುದಾಗಿ ಭರವಸೆ ನೀಡಿದರು.
ಸಂಸದ ಪ್ರಹ್ಲಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಸಂಗೀತ, ಮೇಳದೊಂದಿಗೆ ಹೊರಡುವ ರಾಗ ಅದ್ಭುತವಾಗಿದ್ದು, ಮಾನಸಿಕ ನೆಮ್ಮದಿ ಹೊಂದಲು ಸಂಗೀತ ಶ್ರೇಷ್ಠವಾಗಿದೆ. ಸವಾಯಿ ಗಂಧರ್ವರ ಹೆಸರಿನಲ್ಲಿ ತೆರೆಯುವ ಪಾಠಶಾಲೆಗೆ ಬೆಂಬಲ ನೀಡಲಾಗುವುದು ಎಂದರು. ಹುಬ್ಬಳ್ಳಿಯ ಹಾರ್ಮೋನಿಯಂ ವಾದಕ ಬಿ.ಜಿ. ಬಡಿಗೇರ ಅವರಿಗೆ ನಾಡಗೇರ ವಾಡೆಯ ಸತ್ಕರಿಸಲಾಯಿತು.
ಡಾ| ಜಿ.ಎಚ್. ನರೇಗಲ್ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಪಾಟೀಲ್, ಎನ್. ಎನ್. ಪಾಟೀಲ್, ಆರ್.ಕೆ. ನಾಡಗೇರ, ಅರ್ಜುನ ನಾಡಗೇರ, ಶಾಮಸುಂದರ ದೇಸಾಯಿ, ಸಂಜೀವ ಕುಲಕರ್ಣಿ, ಸುನೀಲ್ ಕರೋಗಲ್, ಮಲ್ಲಿಕಾರ್ಜುನ ಬಾಳಿಕಾಯಿ ಇದ್ದರು. ಸುಶೀಲೇಂದ್ರ ಕುಂದರಗಿ ನಿರೂಪಿಸಿ ವಂದಿಸಿದರು. ಫ್ರಾನ್ಸ್ ದೇಶದಿಂದ ಫ್ರಾನ್ಸಿಸ್ ಎಂಬುವರು ಆಗಮಿಸಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.