ಆರ್ ಕೆ ಸ್ಟುಡಿಯೋದಲ್ಲಿ ಬೆಂಕಿ ಅನಾಹುತ: ಹಾಲ್ ನಂ.1 ಭಸ್ಮ
Team Udayavani, Sep 16, 2017, 4:43 PM IST
ಮುಂಬಯಿ : ಮುಂಬಯಿಯ ಪ್ರಸಿದ್ಧ ಆರ್ ಕೆ ಸ್ಟುಡಿಯೋದಲ್ಲಿ ಇಂದು ಶನಿವಾರ ಮಧ್ಯಾಹ್ನ ಅಗ್ನಿ ದುರಂತ ಸಂಭವಿಸಿತು.
ಬೆಂಕಿ ದುರಂತವು ಸ್ಟುಡಿಯೋದ ಇಲೆಕ್ಟ್ರಿಕ್ ವಿಭಾಗಕ್ಕೆ ಮಾತ್ರವೇ ಸೀಮಿತವಾಗಿತ್ತು ಎಂದು ಎಎನ್‌ಐ ವರದಿ ಮಾಡಿದೆ.
ಆರು ಅಗ್ನಿ ಶಾಮಕ ಘಟಕಗಳು ಸ್ಥಳವನ್ನು ತಲುಪಿದ್ದು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಬೆಂಕಿಯನ್ನು ನಿಯಂತ್ರಿಸಲು ಐದು ವಾಟರ್ ಟಾಂಕರ್‌ಗಳನ್ನು ಕರೆಸಿಕೊಳ್ಳಲಾಗಿದೆ.
ನಗರದ ಚೆಂಬೂರ್ ಪ್ರದೇಶದಲ್ಲಿರುವ ಆರ್ ಕೆ ಸ್ಟುಡಿಯೋದ ಹಾಲ್ ನಂಬರ್ 1 ಸಂಪೂರ್ಣವಾಗಿ ಹಾನಿಗೀಡಾಗಿದೆ. ಇಲೆಕ್ಟ್ರಿಕ್ ವಿಭಾಗದಲ್ಲಿ ವಯರಿಂಗ್ ಕೆಲಸ ನಡೆಯುತ್ತಿದ್ದಾಗ ವಿದ್ಯುತ್ ಶಾರ್ಟ್ ಸರ್‌ಕ್ಯೂಟ್ ಉಂಟಾಗಿ ಅದರಿಂದ ಬೆಂಕಿ ಅವಘಡ ಉಂಟಾಯಿತೆಂದು ತಿಳಿಯಲಾಗಿದೆ.
ಅಗ್ನಿ ದುರಂತದಿಂದ ಯಾವುದೇ ಜೀವ ಹಾನಿ ಉಂಟಾದ ಅಥವಾ ಯಾರೊಬ್ಬರಿಗೂ ಗಾಯಗಳಾದ ವರದಿಗಳು ಬಂದಿಲ್ಲ.
ಸೂಪರ್ ಡ್ಯಾನ್ಸರ್ ಎಂಬ ಟಿವಿ ಶೋ ಸೆಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆಯಾದರೂ ಇಂದು ಶನಿವಾರವಾದ್ದರಿಂದ ಯಾವುದೇ ಸಿಬಂದಿ ಸೆಟ್‌ನಲ್ಲಿ ಹಾಜರಿರಲಿಲ್ಲ. ಅಗ್ನಿ ಅವಘಡವನ್ನು ಅನುಸರಿಸಿ ಇಡಿಯ ಕಟ್ಟಡವನ್ನು ತೆರವುಗೊಳಿಸಲಾಗಿದೆ.
ಆರ್ ಕೆ ಸ್ಟುಡಿಯೋ ಸ್ಥಾಪನೆಗೆ ಆರಂಭದಲ್ಲಿ ಹಣ ಹಾಕಿ 1948ರಲ್ಲಿ ಅದನ್ನು ನಿರ್ಮಿಸಿದವರು ಬಾಲಿವುಡ್‌ನ “ದಿ ಗ್ರೇಟ್ ಶೋ ಮ್ಯಾನ್’ ಎಂದೇ ಖ್ಯಾತರಾಗಿದ್ದ ರಾಜ್ ಕಪೂರ್. ರಾಜ್‌ಕಪೂರ್ ಅವರ ಮಗ ರಿಷಿ ಕಪೂರ್ ಈಗ ಈ ಸ್ಟುಡಿಯೋದ ಕಾರ್ಯ ನಿರ್ವಹಣೆಯ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.