ಭತ್ತದ ಗದ್ದೆ ತುಂಬ ಬರೀ ಮಣ್ಣು !
Team Udayavani, Sep 17, 2017, 12:44 PM IST
ಸಿರುಗುಪ್ಪ: ಗುರುವಾರ ಮತ್ತು ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಆದರೆ ರೈತರ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಬದುಗಳು ಒಡೆದು ಅಪಾರ ಪ್ರಮಾಣದ ಮಣ್ಣು ಹಳ್ಳ ಕೊಳ್ಳ ಸೇರಿದೆ.
ಮಳೆ ನೀರಿನೊಂದಿಗೆ ಕೆಲವೆಡೆ ಮರಳು ಭತ್ತದ ಗದ್ದೆಗಳಿಗೆ ಹರಿದು ಬಂದಿದ್ದರಿಂದ ಭತ್ತದ ಗದ್ದೆಗಳೆಲ್ಲ ಮಣ್ಣಿನಲ್ಲಿ ಹೂತು ಹೋಗಿದ್ದು, ಗದ್ದೆಯಲ್ಲಿರುವ ಮಣ್ಣು ಮಿಶ್ರಿತ ಮರಳು ತೆಗೆದು ಹಾಕಲು ರೈತರು ಹರಸಾಹಸ ಪಡಬೇಕಿದೆ.
ಮತ್ತೂಂದೆಡೆ ವೇದಾವತಿ ಹಗರಿ ನದಿ, ದೊಡ್ಡ ಹಳ್ಳದ ದಂಡೆಯಲ್ಲಿರುವ ರೈತರ ಏತ ನೀರಾವರಿ ಯೋಜನೆಯ ಪಂಪ್ ಸೆಟ್‌ಗಳು ಮುಳುಗಿ ಹೋಗಿದ್ದು, ನೀರಿನಲ್ಲಿ ತೊಯ್ದ ಪಂಪ್‌ಸೆಟ್ ಮೋಟಾರ್ ರಿಪೇರಿ ಮಾಡಿಸುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.
ದೊಡ್ಡಹಳ್ಳ, ವೇದಾವತಿ ಹಗರಿ ನದಿಯ ದಂಡೆಯಲ್ಲಿ ನಾಟಿ ಮಾಡಿದ ಭತ್ತದ ಬೆಳೆಯು ಮಳೆ ನೀರಿನ ಹೊಂಡಿನಲ್ಲಿ ಹೂತು ಹೋಗಿದ್ದು, ರೈತರನ್ನು ಕಂಗಾಲಾಗಿಸಿದೆ. ಮತ್ತೆ ಕೆಲವು ರೈತರು ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಳೆ ನೀರಿನ ಪ್ರವಾಹದಿಂದ ರೈತರು ನಷ್ಟ ಅನುಭವಿಸಿದ್ದರೂ ತಾಲೂಕು ಆಡಳಿತ ಬೆಳೆ ನಷ್ಟದ ಬಗ್ಗೆ ಯಾವುದೇ ರೀತಿಯಲ್ಲಿ ಸರ್ವೆ ಕಾರ್ಯ ಮಾಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಮಳೆ ನಿಂತು ಹೋಗಿದ್ದರೂ ರೈತರ ಹೊಲಗಳಲ್ಲಿ ಹರಿಯುವ ಹಳ್ಳ, ಹಗರಿ ನೀರು ಮಾತ್ರ ಇನ್ನೂ ಹರಿಯುತ್ತಲೇ ಇರುವುದರಿಂದ ನೀರಿನಲ್ಲಿ ಭತ್ತದ ಸಸಿಗಳು ನಾಶವಾಗುವ ಹಂತ ತಲುಪಿವೆ. ತಾಲೂಕಿನಲ್ಲಿ 2 ದಿನ ಸುರಿದ ಮಳೆಯಿಂದ ಕೆಲವು ಭಾಗಗಳ ರೈತರಿಗೆ ಅನುಕೂಲವಾಗಿದ್ದರೆ, ಇನ್ನೂ ಕೆಲವು ಭಾಗದ ರೈತರಿಗೆ ಅನಾನುಕೂಲವಾಗಿದೆ.
ಕೊಚ್ಚಿ ಹೊದ ಕುಲ್ಡನಾಲ್ ಸೇತುವೆ:
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150ಎ ಯಿಂದ ಸಿರಿಗೇರಿ, ಮಾರಲಮಡಿಕೆ ಅಂತರ್ ರಾಜ್ಯ ರಸ್ತೆಯಲ್ಲಿ ಬರುವ ಕರೂರು ಗ್ರಾಮದ ಹತ್ತಿರ ಇರುವ ನೆಲಮಟ್ಟದ ಕುಲ್ಡನಾಲ್‌ನಲ್ಲಿ ಮಳೆ ನೀರಿನ ಪ್ರವಾಹದಿಂದ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ವಾಹನಗಳು ಸೀಮಾಂಧ್ರಕ್ಕೆ ತೆರಳುತ್ತಿದ್ದು, ಈ ನೆಲಮಟ್ಟದ ಸೇತುವೆಯ ಒಂದು ಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಭಾರಿ ವಾಹನಗಳು ಸಂಚರಿಸಲು ಅನಾನುಕೂಲವಾಗಿದೆ. ಒಂದು ವೇಳೆ ಸರಕು ತುಂಬಿದ ಭಾರಿ ವಾಹನ ಈ ಸೇತುವೆ ಮೇಲೆ ಸಂಚರಿಸಿದರೆ ಸೇತುವೆಯು ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕುಲ್ಡನಾಲ್ ಕೆಳಮಟ್ಟದ ಸೇತುವೆ ಕುಸಿದಿದ್ದು, ಇದನ್ನು ರಿಪೇರಿ ಮಾಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇ ಲಾಲ್ ಸಾಬ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.