ತಾರಕ್ ವರ್ಸಸ್ ಸ್ಪೈಡರ್
Team Udayavani, Sep 17, 2017, 6:21 PM IST
ಚೌತಿ, ದಸರೆ, ದೀಪಾವಳಿ ಎಂದರೆ ಸಿನಿಪ್ರಿಯರು ಸ್ಟಾರ್ ಸಿನಿಮಾಗಳನ್ನು, ಅದರಲ್ಲೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳನ್ನು ಎದುರು ನೋಡುತ್ತಾರೆ. ಅದಕ್ಕೆ ಸರಿಯಾಗಿ ಸಿನಿಮಾ ಮಂದಿ ಕೂಡಾ ಹಬ್ಬದ ಸಮಯದಲ್ಲಿ ತಮ್ಮ ಸಿನಿಮಾ ಬಂದರೆ ಚೆಂದ, ಅಭಿಮಾನಿಗಳನ್ನು ಖುಷಿಪಡಿಸುವ ಜೊತೆಗೆ ಹಬ್ಬದ ರಜೆಯನ್ನು ಚೆನ್ನಾಗಿ ಬಳಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕುತ್ತಾರೆ.
ಆದರೆ, ಕೆಲವೊಮ್ಮೆ ಲೆಕ್ಕಾಚಾರ ಉಲ್ಟಾ ಆಗುತ್ತದೆ. ದೊಡ್ಡ ಹಬ್ಬಗಳಿಗೂ ಯಾವುದೇ ಸ್ಟಾರ್ ಸಿನಿಮಾಗಳು ತೆರೆಕಾಣದೇ ಅಭಿಮಾನಿಗಳು ನಿರಾಸೆಯಾದ ಉದಾಹರಣೆ ಸಾಕಷ್ಟಿದೆ. ಆದರೆ, ಈ ಬಾರಿಯ ದಸರೆ ಹಬ್ಬ ಮಾತ್ರ ಸಿನಿ ಪ್ರಿಯರಿಗೆ ಸಖತ್ ಕಲರ್‌ಫುಲ್ ಹಾಗೂ ಖದರ್‌ರಿಂದ ಕೂಡಿರಲಿದೆ. ಅದಕ್ಕೆ ಕಾರಣ ಮೂವರು ಸ್ಟಾರ್ ನಟರ ಚಿತ್ರಗಳು ಒಂದು ವಾರ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಅದು ಕೇವಲ ಕನ್ನಡವಷ್ಟೇ ಅಲ್ಲ. ಕನ್ನಡ ಹಾಗೂ ತೆಲುಗು ಚಿತ್ರಗಳು.
ಹೌದು, ದಸರೆಗೆ ಅಂದರೆ ಸೆಪ್ಟೆಂಬರ್ 29ಕ್ಕೆ ಕನ್ನಡದಲ್ಲಿ ದರ್ಶನ ನಾಯಕರಾಗಿರುವ “ತಾರಕ್’ ಚಿತ್ರ ಬಿಡುಗಡೆಯಾಗುತ್ತಿದೆ. “ಮಿಲನ’ ಪ್ರಕಾಶ್ ನಿರ್ದೇಶನದ “ತಾರಕ್’ ಚಿತ್ರ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದ್ದು, ದರ್ಶನ್ ಕೂಡಾ ಹೊಸ ಲುಕ್ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇದು ಕನ್ನಡ ಸಿನಿಮಾ ವಿಷಯವಾದರೆ ಅದೇ ವಾರ ತೆಲುಗಿನಲ್ಲೂ ಸ್ಟಾರ್ ನಟನ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಅದು “ಸ್ಪೈಡರ್’. ಮಹೇಶ್ ಬಾಬು ನಾಯಕರಾಗಿರುವ “ಸ್ಪೈಡರ್’ ಚಿತ್ರ ಕೂಡಾ ಸೆಪ್ಟೆಂಬರ್ 27ಕ್ಕೆ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಂಡರೆ ಮಹೇಶ್ ಬಾಬು ಅವರ “ಸ್ಪೈಡರ್’ ಬುಧವಾರ ತೆರೆಕಾಣುತ್ತಿದೆ.
ಈ ಚಿತ್ರವನ್ನು ಎ.ಆರ್.ಮುರುಗದಾಸ್ ನಿರ್ದೇಶಿಸಿದ್ದು, ಚಿತ್ರ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವುದು ಸುಳ್ಲಲ್ಲ. ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ನಾಯಕಿ. ಬೇರೆ ಬೇರೆ ಭಾಷೆಯ ಎರಡು ದೊಡ್ಡ ಚಿತ್ರಗಳು ತೆರೆಕಾಣುತ್ತಿರುವುದರಿಂದ ಅಭಿಮಾನಿಗಳಿಗೆ ಫಸ್ಟ್ ಡೇ ಫಸ್ಟ್ ಶೋ ಯಾವ ಸಿನಿಮಾ ನೋಡೋದು ಎಂಬ ಗೊಂದಲವಾಗೋದು ಸಹಜ. ಹೀಗಾಗಿ “ತಾರಕ್’ ವರ್ಸಸ್ “ಸ್ಪೈಡರ್’ ಎನ್ನುವಂತಾಗಿದೆ.
ಇದು ಒಂದೇ ವಾರ ತೆರೆಕಾಣುತ್ತಿರುವ ಎರಡು ದೊಡ್ಡ ಸಿನಿಮಾಗಳ ವಿಷಯವಾದರೆ ಅದಕ್ಕಿಂತ ಒಂದು ವಾರ ಮುಂಚೆ ಅಂದರೆ ಸೆ.21 ರಂದು. ಅಂದು ಜೂ.ಎನ್‌ಟಿಆರ್ ನಾಯಕರಾಗಿರುವ “ಜೈ ಲವ ಕುಶ’ ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಜೂ.ಎನ್‌ಟಿಆರ್ ಕೂಡಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಕೂಡಾ ಕಲರ್‌ಫುಲ್ ಆಗಿದ್ದು, ಸಿನಿ ಪ್ರಿಯರಿಗೆ ಮೂವರು ಸ್ಟಾರ್ ನಟರ ಚಿತ್ರಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಈ ತಿಂಗಳಲ್ಲೇ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.