ವಿಲೀನ ಬಗ್ಗೆ ನೀವೇ ನಿರ್ಧರಿಸಿ
Team Udayavani, Sep 18, 2017, 8:50 AM IST
ಹೊಸದಿಲ್ಲಿ: “ನಿಮ್ಮ ನಿಮ್ಮ ಆಡಳಿತ ಮಂಡಳಿಗಳಲ್ಲಿ ಪರಸ್ಪರ ವಿಲೀನದ ಬಗ್ಗೆ ಚರ್ಚೆಗಳನ್ನು ಆರಂಭಿಸಿ.’ ಹೀಗೆಂದು ಕೇಂದ್ರ ಸರಕಾರ ಬ್ಯಾಂಕ್ಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ಬ್ಯಾಂಕ್ಗಳು ಕೂಡ ಕೇಂದ್ರ ವಿತ್ತ ಸಚಿವಾಲಯದಿಂದ ಇಂಥ ಸೂಚನೆ ಬಂದಿರುವುದನ್ನು ಖಚಿತಪಡಿಸಿವೆ.
ಆದರೆ ಇದು ವರೆಗೆ ಯಾವುದೇ ಬ್ಯಾಂಕ್ಗಳ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಪ್ರಕ್ರಿಯೆ ಶುರು ಮಾಡಿಲ್ಲವೆಂದು “ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಈ ವರ್ಷದ ಎಪ್ರಿಲ್ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಐದು ಬ್ಯಾಂಕ್ಗಳು ವಿಲೀನ ಗೊಂಡ ಪ್ರಕ್ರಿಯೆ ಮುಕ್ತಾಯದ ಬಳಿಕ ಇದು ಅತಿ ದೊಡ್ಡ ಪ್ರಕ್ರಿಯೆ.
ಸರಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಾಗಿರುವಂತೆಯೇ ಮತ್ತು ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳಿಗೆ ಅನುಮೋದನೆ ನೀಡಿದ ಬಳಿಕ ಈ ಸೂಚನೆ ನೀಡಲಾಗಿದೆ. ಜೂನ್ ಅಂತ್ಯಕ್ಕೆ 41 ಬ್ಯಾಂಕ್ಗಳ ಅನುತ್ಪಾದಕ ಆಸ್ತಿ ಮೌಲ್ಯ 8,28,000 ಕೋಟಿ ರೂ. ಇತ್ತು. ಮಾರ್ಚ್ ಅಂತ್ಯಕ್ಕೆ 7,65,000 ಕೋಟಿ ರೂ. ಇತ್ತು. ಅಂದರೆ 3 ತಿಂಗಳ ಅವಧಿಯಲ್ಲಿ ಎನ್ಪಿಎ ಪ್ರಮಾಣ 63 ಸಾವಿರ ಕೋಟಿ ರೂ. ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.