ಮಳೆಯ ನಡುವೆ ಭಾರತ ಜಯಭೇರಿ


Team Udayavani, Sep 18, 2017, 6:00 AM IST

PTI9_17_2017_000155B.jpg

ಚೆನ್ನೈ: ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ತಂಡದ ಅಮೋಘ ಆಟದ ಪ್ರದರ್ಶನ ಪ್ರವಾಸಿ ಆಸ್ಟ್ರೇಲಿಯ ವಿರುದ್ಧವೂ ಮುಂದುವರಿದಿದೆ. ಮಳೆಯಿಂದ ತೊಂದರೆ ಗೊಳಗಾದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ಆಸ್ಟ್ರೇಲಿಯ ವಿರುದ್ಧ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 26 ರನ್ನಿನಿಂದ ಜಯ ಸಾಧಿಸಿದೆ.

ಆರಂಭಿಕ ಕುಸಿತದ ಬಳಿಕದ ಬಳಿಕ ಹಾರ್ದಿಕ್‌ ಮತ್ತು ಧೋನಿ ಅವರ ಸಾಹಸದ ಬ್ಯಾಟಿಂಗ್‌ನಿಂದ ಭಾರತ 7 ವಿಕೆಟಿಗೆ 281 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಆಬಳಿಕ ಸುರಿದ ಮಳೆಯಿಂದಾಗಿ ಆಸ್ಟ್ರೇಲಿಯ ಗೆಲ್ಲಲು 21 ಓವರ್‌ಗಳಲ್ಲಿ 164 ರನ್‌ ಗಳಿಸುವ ಗುರಿ ನಿಗದಿಪಡಿಸಲಾಯಿತು. ಬೌಲಿಂಗ್‌ನಲ್ಲೂ ಮಿಂಚಿದ ಹಾರ್ದಿಕ್‌ ಪಾಂಡ್ಯ ಸಹಿತ ಕುಲದೀಪ್‌ ಮತ್ತು ಚಾಹಲ್‌ ಅವರ ಉತ್ತಮ ದಾಳಿಯಿಂದಾಗಿ ಆಸ್ಟೇಲಿಯ ನಿಗದಿತ 21 ಓವರ್‌ಗಳಲ್ಲಿ 9 ವಿಕೆಟಿಗೆ 137 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಆರಂಭಿಕ ಡೇವಿಡ್‌ ವಾರ್ನರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಜೇಮ್ಸ್‌ ಫಾಕ್ನರ್‌ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 39 ರನ್‌ ಗಳಿಸಿದ ಮ್ಯಾಕ್ಸ್‌ವೆಲ್‌ ಗರಿಷ್ಠ ಸ್ಕೋರರ್‌ ಎನಿಸಿಕೊಂಡರೆ ಫಾಕ್ನರ್‌ 32 ರನ್‌ ಗಳಿಸಿ ಔಟಾಗದೆ ಉಳಿದರು.

ಚಾಹಲ್‌ 30 ರನ್ನಿಗೆ 3 ವಿಕೆಟ್‌ ಕಿತ್ತರೆ ಕುಲದೀಪ್‌ ಮತ್ತು ಹಾರ್ದಿಕ್‌ ತಲಾ ಎರಡು ವಿಕೆಟ್‌ ಕಿತ್ತರು.11ಕ್ಕೆ 3ರಿಂದ 281ಕ್ಕೆ 7…: ನಥನ್‌ ಕೋಲ್ಟರ್‌ ನೈಲ್‌ ಅವರ ಸ್ವಿಂಗ್‌ ದಾಳಿಗೆ ತತ್ತರಿಸಿ 6 ಓವರ್‌ ಒಳಗೆ 11 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡು ಸಂಕಟದಲ್ಲಿದ್ದ ಭಾರತ, ಅಂತಿಮವಾಗಿ 7 ವಿಕೆಟಿಗೆ 281 ರನ್‌ ತನಕ ಸಾಗಿದ್ದೇ ಒಂದು ಸಾಹಸಗಾಥೆ. ಅರ್ಥಾತ್‌, ಭಾರತ ಮೊದಲ 3 ವಿಕೆಟ್‌ಗಳಿಂದ ಕೇವಲ 11 ರನ್‌ ಗಳಿಸಿದರೆ, ಉಳಿದ 4 ವಿಕೆಟ್‌ಗಳ ನೆರವಿನಿಂದ 270 ರನ್‌ ಪೇರಿಸಿತು.

ಟೀಮ್‌ ಇಂಡಿಯಾದ ಈ ಅಮೋಘ ಚೇತರಿಕೆಯ ಶ್ರೇಯಸ್ಸು ಹಾರ್ದಿಕ್‌ ಪಾಂಡ್ಯ, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರಿಗೆ ಸಲ್ಲಬೇಕು. ಅಜಿಂಕ್ಯ ರಹಾನೆ (5), ವಿರಾಟ್‌ ಕೊಹ್ಲಿ (0) ಮತ್ತು ಮನೀಷ್‌ ಪಾಂಡೆ (0) ಅವರ ಈ ವಿಕೆಟ್‌ಗಳು ಹನ್ನೊಂದರ ಮೊತ್ತದಲ್ಲೇ ಉದುರಿ ಹೋದವು. ಕೋಲ್ಟರ್‌ ನೈಲ್‌ 7 ಎಸೆತಗಳ ಅಂತರದಲ್ಲಿ ಈ 3 ವಿಕೆಟ್‌ಗಳನ್ನು ಬೇಟೆಯಾಡಿದ್ದರು. ಕಳೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಿಂದ ಹೊರಗುಳಿದಿದ್ದ ಕೋಲ್ಟರ್‌ ನೈಲ್‌ ಪಾಲಿಗೆ ಇದು ಭರ್ಜರಿ ಪುನರಾಗಮನವಾಗಿತ್ತು. ಆದರೆ ಮತ್ತೂಬ್ಬ ವೇಗಿ ಪ್ಯಾಟ್‌ ಕಮಿನ್ಸ್‌ ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಕಮಿನ್ಸ್‌ ಆಸೀಸ್‌ ಸರದಿಯ ಏಕೈಕ “ವಿಕೆಟ್‌ ಲೆಸ್‌ ಬೌಲರ್‌’ ಆಗಿದ್ದರು. 

ಆದರೆ ಮೊದಲ 3 ವಿಕೆಟ್‌ ಬೇಟೆಯ ಬಳಿಕ ಕೋಲ್ಟರ್‌ ನೈಲ್‌ ಮ್ಯಾಜಿಕ್‌ ನಡೆಯಲಿಲ್ಲ. ಮಧ್ಯಮ ವೇಗಿ ಮಾರ್ಕಸ್‌ ಸ್ಟೊಯಿನಿಸ್‌ 2, ಜೇಮ್ಸ್‌ ಫಾಕ್ನರ್‌ ಮತ್ತು ಆ್ಯಡಂ ಝಂಪ ತಲಾ ಒಂದು ವಿಕೆಟ್‌ ಕಿತ್ತರು. ಕಮಿನ್ಸ್‌, ಕೋಲ್ಟರ್‌ ನೈಲ್‌ ಹೊರತುಪಡಿಸಿ ಉಳಿದವರೆಲ್ಲರೂ ದುಬಾರಿಯಾಗಿ ಪರಿಣಮಿಸಿದರು.

ಪಾಂಡ್ಯ ಬ್ಯಾಟಿಂಗ್‌ ಪವರ್‌: 64ಕ್ಕೆ 4, 87ಕ್ಕೆ 5 ವಿಕೆಟ್‌… ಈ ರೀತಿಯಾಗಿ ಕುಸಿಯುತ್ತಲೇ ಹೋದ ಭಾರತಕ್ಕೆ ನೂರೈವತ್ತರ ಗಡಿಯೂ ಮರೀಚಿಕೆಯಾಗುವ ಸಾಧ್ಯತೆ ಇತ್ತು. ಆದರೆ ಕೆಳ ಕ್ರಮಾಂಕದ ಆಟಗಾರರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಭಾರತ ಸವಾಲಿನ ಮೊತ್ತ ಪೇರಿಸುವಂತಾಯಿತು.

ಬಹೂಪಯೋಗಿ ಆಲ್‌ರೌಂಡರ್‌ ಆಗಿ ಬೆಳೆಯುತ್ತಿರುವ ಹಾರ್ದಿಕ್‌ ಪಾಂಡ್ಯ ಆಸೀಸ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 83 ರನ್‌ ಸಿಡಿಸಿದರು. 66 ಎಸೆತಗಳ ಈ ಸ್ಫೋಟಕ ಆಟದ ವೇಳೆ 5 ಬೌಂಡರಿ, 5 ಸಿಕ್ಸರ್‌ ಸಿಡಿಯಲ್ಪಟ್ಟವು. ಇದರಲ್ಲಿ 4 ಸಿಕ್ಸರ್‌ ಝಂಪ ಎಸೆತಗಳಲ್ಲಿ ಗಗನಕ್ಕೆ ಚಿಮ್ಮಿದವು. ಈ ವೇಳೆ “ಹ್ಯಾಟ್ರಿಕ್‌ ಸಿಕ್ಸರ್‌’ ಕೂಡ ದಾಖಲಾಯಿತು. ಅವರ ಒಂದು ಓವರಿನಲ್ಲಿ ಪಾಂಡ್ಯ 24 ರನ್‌ ದೋಚಿದರು. ಕುಸಿತ ಕಂಡು ಹತಾಶರಾಗಿದ್ದ ಭಾರತದ ಅಭಿಮಾನಿಗಳಿಗೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಪಾಂಡ್ಯ ಬ್ಯಾಟಿಂಗಿನ ರಸದೌತಣವನ್ನೇ ಉಣಿಸಿದರು. ಇದು ಪಾಂಡ್ಯ ಅವರ 3ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್‌.

ಮಾಜಿ ನಾಯಕ ಧೋನಿ 66ನೇ ಅರ್ಧ ಶತಕದೊಂದಿಗೆ ತಂಡದ ನೆರವಿಗೆ ನಿಂತರು. ಅವರ ಕೊಡುಗೆ 79 ರನ್‌. 88 ಎಸೆತ ಎದುರಿಸಿದ ಧೋನಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಬಾರಿಸಿ ಅಂತಿಮ ಓವರಿನಲ್ಲಿ ಔಟಾದರು. ಧೋನಿ-ಪಾಂಡ್ಯ ಜತೆಯಾಟದಲ್ಲಿ 6ನೇ ವಿಕೆಟಿಗೆ 118 ರನ್‌ ಸಂಗ್ರಹಗೊಂಡಿತು.

ಕೊನೆಯಲ್ಲಿ ಧೋನಿ-ಭುವನೇಶ್ವರ್‌ 7ನೇ ವಿಕೆಟಿಗೆ 8.5 ಓವರ್‌ಗಳಿಂದ 72 ರನ್‌ ಒಟ್ಟುಗೂಡಿಸಿ ಕಾಂಗರೂಗಳಿಗೆ ಕಗ್ಗಂಟಾದರು. ಭುವಿ ಗಳಿಕೆ 30 ಎಸೆತಗಳಿಂದ ಅಜೇಯ 32 ರನ್‌ (5 ಬೌಂಡರಿ). ಕೇದಾರ್‌ ಜಾಧವ್‌ 54 ಎಸೆತಗಳಿಂದ 40 ರನ್‌ ಹೊಡೆದರು (5 ಬೌಂಡರಿ).

ಸ್ಕೋರ್‌ಪಟ್ಟಿ
ಭಾರತ

ಅಜಿಂಕ್ಯ ರಹಾನೆ    ಸಿ ವೇಡ್‌ ಬಿ ನೈಲ್‌    5
ರೋಹಿತ್‌ ಶರ್ಮ    ಸಿ ನೈಲ್‌ ಬಿ ಸ್ಟೊಯಿನಿಸ್‌    28
ವಿರಾಟ್‌ ಕೊಹ್ಲಿ    ಸಿ ಮ್ಯಾಕ್ಸ್‌ವೆಲ್‌ ಬಿ ನೈಲ್‌    0
ಮನೀಷ್‌ ಪಾಂಡೆ    ಸಿ ವೇಡ್‌ ಬಿ ನೈಲ್‌    0
ಕೇದಾರ್‌ ಜಾಧವ್‌    ಸಿ ಕಾರ್ಟ್‌ರೈಟ್‌ ಬಿ ಸ್ಟೊಯಿನಿಸ್‌    40
ಎಂ.ಎಸ್‌. ಧೋನಿ    ಸಿ ವಾರ್ನರ್‌ ಬಿ ಫಾಕ್ನರ್‌    79
ಹಾರ್ದಿಕ್‌ ಪಾಂಡ್ಯ    ಸಿ ಫಾಕ್ನರ್‌ ಬಿ ಝಂಪ    83
ಭುವನೇಶ್ವರ್‌ ಕುಮಾರ್‌    ಔಟಾಗದೆ    32
ಕುಲದೀಪ್‌ ಯಾದವ್‌    ಔಟಾಗದೆ    0
ಇತರ        14
ಒಟ್ಟು  (50 ಓವರ್‌ಗಳಲ್ಲಿ 7 ವಿಕೆಟಿಗೆ)    281
ವಿಕೆಟ್‌ ಪತನ: 1-11, 2-11, 3-11, 4-64, 5-87, 6-205, 7-277.
ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌        10-1-44-0
ನಥನ್‌ ಕೋಲ್ಟರ್‌ ನೈಲ್‌        10-0-44-3
ಜೇಮ್ಸ್‌ ಫಾಕ್ನರ್‌        10-1-67-1
ಮಾರ್ಕಸ್‌ ಸ್ಟೊಯಿನಿಸ್‌        10-0-54-2
ಆ್ಯಡಂ ಝಂಪ        10-0-66-1
ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌    ಸಿ ಧೋನಿ ಬಿ ಕುಲದೀಪ್‌    25
ಹಿಲ್ಟನ್‌ಕಾರ್ಟ್‌ರೈಟ್‌    ಬಿ ಬುಮ್ರಾ    1
ಸ್ಟೀವನ್‌ ಸ್ಮಿತ್‌    ಸಿ ಬುಮ್ರಾ ಬಿ ಪಾಂಡ್ಯ    1
ಟ್ರ್ಯಾವಿಸ್‌ ಹೆಡ್‌    ಸಿ ಧೋನಿ ಬಿ ಪಾಂಡ್ಯ    5
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಪಾಂಡ್ಯ ಬಿ ಚಾಹಲ್‌    39
ಮಾರ್ಕಸ್‌ ಸ್ಟೊಯಿನಿಸ್‌    ಸಿ ಬದಲಿಗ ಬಿ ಕುಲದೀಪ್‌    3
ಮ್ಯಾಥ್ಯೂ ವೇಡ್‌    ಸ್ಟಂಪ್ಡ್ ಧೋನಿ ಬಿ ಚಾಹಲ್‌    9
ಜೇಮ್ಸ್‌  ಫಾಕ್ನರ್‌    ಔಟಾಗದೆ    32
ಪ್ಯಾಟ್‌ ಕಮಿನ್ಸ್‌    ಸಿ ಬುಮ್ರಾ ಬಿ ಚಾಹಲ್‌    9
ನಥನ್‌ ಕೋಲ್ಟನ್‌ ನೈಲ್‌    ಸಿ ಜಾಧವ್‌ ಬಿ ಕುಮಾರ್‌    2
ಆ್ಯಡಂ ಝಂಪ    ಔಟಾಗದೆ    5
ಇತರ:        6
ಒಟ್ಟು (21 ಓವರ್‌ಗಳಲ್ಲಿ 9 ವಿಕೆಟಿಗೆ)    137
ವಿಕೆಟ್‌ ಪತನ: 1-15, 2-20, 3-29, 4-35, 5-76, 6-76, 7-93, 8-109, 9-127
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-25-1
ಜಸ್‌ಪ್ರೀತ್‌ ಬುಮ್ರಾ        4-0-20-1
ಹಾರ್ದಿಕ್‌ ಪಾಂಡ್ಯ        4-0-28-2
ಕುಲದೀಪ್‌ ಯಾದವ್‌        4-0-33-2
ಯುಜ್ವೇಂದ್ರ ಚಾಹಲ್‌        5-0-30-3

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.