ಹೊಸ ಮನೆಗಾಗಿ ಕನವರಿಸುತ್ತಿರುವ ವೃದ್ಧೆ
Team Udayavani, Sep 18, 2017, 10:05 AM IST
ಕಿನ್ನಿಗೋಳಿ: ಸುಮಾರು 40 ವರ್ಷಗಳಿಂದ ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣ ಮುಂಭಾಗದಲ್ಲಿ (ಅಂದಿನ ಅಶೋಕ ಚಿತ್ರಮಂದಿರ) ಪ್ಲಾಸ್ಟಿಕ್ ಛಾವಣಿಯಿರುವ ಸುಬ್ಬಮ್ಮನ ಚಿಕ್ಕ ಗುಡಿಸಲು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಮತದಾರರ ಗುರುತು ಚೀಟಿ ಇದೆ, ಆಧಾರ್ ಕಾರ್ಡ್ ಕೂಡ ಮಾಡಿಸಿದ್ದಾರೆ. ಈ “ಮನೆ’ಗೆ ಸಂಖ್ಯೆಯೂ ಇದೆ, ಪಡಿತರ ಚೀಟಿ ಇದೆ, ವೃದ್ಧಾಪ್ಯ ವೇತನವೂ ಬರುತ್ತದೆ. ಆದರೆ, ಪುಟ್ಟದೊಂದು ಹೊಸ ಮನೆ ಕಟ್ಟಿಕೊಳ್ಳುವ ಅವರ ಕನಸು ನನಸಾಗಲೇ ಇಲ್ಲ. ಸುಮಾರು 45 ವರ್ಷಗಳ ಹಿಂದೆ ದೂರದ ತಮಿಳುನಾಡಿನಿಂದ ಕೆಲಸ ಅರಸಿ ಮಂಗಳೂರಿಗೆ ಬಂದಿದ್ದ ಸುಬ್ಬಮ್ಮ ಹಾಗೂ ಪೊನ್ನಯ್ಯ ದಂಪತಿ, ಬಂಗಾರದ ಅಂಗಡಿಯವರ ಅಂಗಳದ ಕಸದಿಂದ ಬಂಗಾರ ಆರಿಸುವ ಕುಲ ಕಸುಬು ಮಾಡುತ್ತಿದ್ದರು. ಕಿನ್ನಿಗೋಳಿ ರಾಜಾಂಗಣದ ಮುಂಭಾಗದಲ್ಲಿ ಡೇರೆ ಹಾಕಿ ಠಿಕಾಣಿ ಹೂಡಿದ್ದರು. ಸಂಸಾರ ಶುರುವಾಯಿತು. ಸುಮಾರು 15 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಸುಬ್ಬಮ್ಮನಿಂದ ಮಕ್ಕಳೂ ದೂರವಾದರು. ಈಗ ಆಕೆಗೆ ಈ ಡೇರೆಯೇ ಸರ್ವಸ್ವ.
ಮನವಿ ಮಾಡಿದರೂ ಪ್ರಯೋಜನ ಇಲ್ಲ
ಇಂದಿರಾ ಗಾಂಧಿ, ರಾಮಕೃಷ್ಣ ಹೆಗಡೆ ಕಾಲದಿಂದ ಚುನಾವಣೆಯಲ್ಲಿ ಮತ ಕೇಳಲು ಬರುವವರೆಲ್ಲ ಮನೆ ಕಟ್ಟಿಕೊಡುವುದಾಗಿ ಹೇಳುತ್ತಿದ್ದರೂ ಈವರೆಗೂ ಈ ವೃದ್ಧೆಯ ನೋವಿಗೆ ಸ್ಪಂದಿಸಿದವರಿಲ್ಲ. ಮನೆಯ ಬಗ್ಗೆ ಮಂಡಲ ಪಂಚಾ ಯತ್ ಇದ್ದ ಸಂದರ್ಭದಿಂದಲೂ ಮನವಿ ಮಾಡಲಾಗಿದೆ. ಪಕ್ಕದವರು ಜಾಗದ ವಿಷಯದಲ್ಲಿ ತಕರಾರು ತೆಗೆದಿದ್ದರಿಂದ ನ್ಯಾಯಾಲಯಕ್ಕೆ ಅಲೆದಾಡಿ ಅವರ ಮುಪ್ಪು ಇನ್ನಷ್ಟು ಹೆಚ್ಚಿದೆ. ಈಗ ಗುಡಿಸಲಿಗೆ ಹೊದಿಸಿರುವ ಪ್ಲಾಸ್ಟಿಕ್ ಹಾಳೆ ಹರಿದಿದೆ. ಹೊಸ ಹಾಳೆ ಹಾಕಿಸುವಂತೆ ಹೇಳಿ ಪಂಚಾಯತ್‌ನಿಂದ ಹಣ ಕೊಟ್ಟು ಒಂದು ತಿಂಗಳು ಕಳೆಯಿತು.
ಪ್ಲಾಸ್ಟಿಕ್ ಹೊದಿಸಲು ಜನ ಸಿಗದ ಕಾರಣ ಮಳೆ ನೀರೆಲ್ಲ ಗುಡಿಸಲಿನೊಳಗೆ ಸೋರುತ್ತಿದೆ. ಇರುವ ಈ ಮುರುಕಲು ಆಸರೆಯೂ ಯಾವಾಗ ಕುಸಿದು ಬೀಳುವುದೋ ಎಂಬ ಆತಂಕದಲ್ಲಿದ್ದಾರೆ ಸುಬ್ಬಮ್ಮ.
ಮನೆ ಕೊಡಲು ವ್ಯವಸ್ಥೆ
ಪ್ರಸ್ತುತ ಸುಬ್ಬಮ್ಮ ವಾಸ ಮಾಡುತ್ತಿರುವ ಸ್ಥಳ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲಿ ಮನೆ ಕಟ್ಟಲು ಅವಕಾಶ ನೀಡುವಂತಿಲ್ಲ. ಅದಕ್ಕಾಗಿ ಗ್ರಾ.ಪಂ. ವ್ಯಾಪ್ತಿಯ ಕೆಮ್ಮಡೆಯಲ್ಲಿ ಸರಕಾರಿ ಜಾಗವಿದ್ದು, ಅದನ್ನು ನಿವೇಶನ ರಹಿತರಿಗೆ ಕಾದಿರಿಸಲಾಗಿದೆ. ಅದರಲ್ಲಿ ಆದ್ಯತೆಯ ಮೇರೆಗೆ ಮನೆ ಕೊಡಲು ವ್ಯವಸ್ಥೆ ಮಾಡಲಾಗುವುದು.
ರಮ್ಯಾ, ಪಿಡಿಒ, ಮೆನ್ನಬೆಟ್ಟು ಗ್ರಾ.ಪಂ.
ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.