ಕಾಸು ಕೊಡುವ ‘ಕೋಸು’

Team Udayavani, Sep 18, 2017, 1:30 PM IST

18-ISIRI-1.jpg

ಹೂ ಕೋಸಿನ ಪರಿಚಯವಿಲ್ಲದ ಜನರೇ ಇಲ್ಲ ಅನ್ನಬಹುದು. ಇದು  ರಾಜ್ಯದ ಸಾವಿರಾರು ರೈತರ ಪಾಲಿಗೆ ಕಾಸು ನೀಡುವ ತರಕಾರಿ. ಈ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರಷ್ಟೇ ಬೆಳೆಯುವತ್ತಾ ಒಲವು ತೋರಬಹುದಾಗಿದೆ. ಒಂಚೂರು ಅನುಭವದ ಕೊರತೆಯಾದರೂ ನಷ್ಟ ಕಟ್ಟಿಟ್ಟ ಬುತ್ತಿ.  ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಹುಬೇಡಿಕೆ  ಗಳಿಸಿರುವ ಕೋಸನ್ನು ಬೆಳೆದೇ ಸುಂದರ ಬದುಕನ್ನು ಕಟ್ಟಿಕೊಂಡ ಬ್ಯಾಟಪ್ಪ ಬಂಗಾರಪೇಟೆಯವರು ಕಥೆ ಕೇಳಿ. 

ಬ್ಯಾಟಪ್ಪ ಬಂಗಾರುಪೇಟೆ ತಾಲೂಕಿನ ಸಿದ್ದರಹಳ್ಳಿಯವರು.   ಇವರು ಒಂದು ಎಕರೆಯಲ್ಲಿ ಬೆಳೆದಿರುವ ಇಪ್ಪತ್ತು ಸಾವಿರ ಬುಡಗಳು ಪ್ರತಿ ವರ್ಷ ಒಂದೂವರೆ ಲಕ್ಷ ರೂಪಾಯಿ ಆದಾಯವನ್ನು ನೀಡುತ್ತಿವೆ. ಇವರ ನಾಟಿ ವಿಧಾನ ಇತರರಿಗಿಂತ ಭಿನ್ನ. ಉಳುಮೆ ಮಾಡಿ ನಂತರ ಗದ್ದೆಗೆ ಸಾವಯವ ಗೊಬ್ಬರವನ್ನು ಬೆರೆಸುತ್ತಾರೆ. ಒಂದು ವಾರಗಳ ಕಾಲ ಭೂಮಿಗೆ ಹನಿ ನೀರಾವರಿಯನ್ನು ನೀಡಿ ಭೂಮಿಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತಾರೆ. ನಂತರ, ಸಸಿಯೊಂದಕ್ಕೆ ಅರವತ್ತು ಪೈಸೆಯಂತೆ ನೀಡಿ ಪಕ್ಕದ ಬೆಳೆಗಾರನೋರ್ವ ಸೂಚಿಸಿದ ನರ್ಸರಿಯೊಂದರಿಂದ ಸ್ಥಳೀಯ ತಳಿಯ  ಖರೀದಿಸಿ ತಂದಿದ್ದಾರೆ. ಬೆಳಗ್ಗೆ ಬೇಗ ಎದ್ದು ಸೂರ್ಯನ ಕಿರಣ ಸೋಕುವ ಮುನ್ನ ಎರಡು ಅಡಿ ಅಂತರ ಬಿಟ್ಟು ಸಾಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಸಿಯಿಂದ ಸಸಿಗೆ ಒಂದು ಅಡಿ ಅಂತರ ಬಿಟ್ಟು ಜೂನ್‌ನಲ್ಲಿ ನಾಟಿ ಮಾಡಿದ್ದಾರೆ.

ಎರಡು ದಿನಕ್ಕೊಮ್ಮೆ ಎರಡು ಗಂಟೆಗಳ ಕಾಲ ಹನಿ ನೀರಾವರಿ ವಿಧಾನದ ಮೂಲಕ ಸಸಿಗಳಿಗೆ ನೀರುಣಿಸಿದ್ದಾರೆ. ತಿಂಗಳಿಗೆ ಒಂದು ಬಾರಿ ರಾಸಾಯನಿಕ ಗೊಬ್ಬರ  ನೀಡಿದರೆ, ವಾರದಲ್ಲೆರಡು ಬಾರಿ ಹನಿ ನೀರಾವರಿ ಪೈಪ್‌ ಮೂಲಕ ಸಾವಯವ ಗೊಬ್ಬರವನ್ನು ನೀಡಿದ್ದರಿಂದ ಪಕ್ಕದ ಗದ್ದೆಯಲ್ಲಿರುವ ಕೋಸಿಗಿಂತ ನಾಲ್ಕು ದಿನ ಮುಂಚಿತವಾಗಿಯೇ ಬೆಳೆ ಕೈಗೆ ಬಂದಿದೆ. ಹದಿನೈದು ದಿನದ ಕಾಯಿಯಿಂದ ಆರಂಭವಾಗಿ ಈ ಬೆಳೆ ಮಾರಾಟಕ್ಕೆ ಸಿದ್ಧವಾಗುವ ಎಪ್ಪತ್ತೆ„ದನೇ ದಿನದವರೆಗೂ ಕೋಸಿಗೆ ಕೀಟ, ಹುಳಗಳು ಬಾಧಿಸದಂತೆ ಜಾಗರೂಕತೆ ವಹಿಸಬೇಕಾದುದು ಇಲ್ಲಿ ಮುಖ್ಯ. ವಾರದಲ್ಲೊಂದು ಬಾರಿ ಕೀಟನಾಶಕ ಸಿಂಪಡಿಸುವ ಮೂಲಕ ಹಸಿರು ಹುಳದ ಬಾಧೆ  ಬೆಳೆಗೆ ತಾಗದಂತೆ ನೋಡಿಕೊಂಡಿದ್ದಾರೆ. ಎಲೆ ಮತ್ತು ಹೂವನ್ನು ಜೊತೆಗೇ ಕಟಾವು ಮಾಡಲಾಗುತ್ತದೆ. ಕಟಾವಾದ ನಂತರ ಹದಿನೈದು ದಿನಗಳವರೆಗೆ ಹೂವು ಹಾಳಾಗದಿರುವುದು ಇದರ ವಿಶೇಷ. ಒಂದು ಬುಡದಲ್ಲಿ ಒಂದೇ ಹೂವು ಬರುತ್ತದೆ.  ಒಂದೊಂದು ಕೋಸು ಒಂದರಿಂದ ಒಂದುವರೆ ಕೆ.ಜಿ. ತೂಗುತ್ತಿದ್ದು ಕೆ.ಜಿ.ಗೆ ಹದಿನೈದರಿಂದ ಇಪ್ಪತ್ತು ರೂ. ಬೆಲೆ ಇದೆ .  ಕೋಲಾರದ ವ್ಯಾಪಾರಿಗಳು ಗದ್ದೆಗೆ ಬಂದು ಖರೀದಿ ಮಾಡುತ್ತಾರೆ. ಒಂದು ಎಕರೆಯಲ್ಲಿ ನಾಟಿಗೆ ಎಲ್ಲಾ ಖರ್ಚು ಸೇರಿ ರೂ. 60 ಸಾವಿರ ಖರ್ಚು ತಗಲಿದರೆ ಇವರು ಅದರಿಂದ ಒಂದುವರೆ ಲಕ್ಷ ರೂ. ಆದಾಯವನ್ನು ಪಡೆಯುವ ಮೂಲಕ ಮಾದರಿ ಬೆಳೆಗಾರರೆನಿಸಿಕೊಂಡಿದ್ದಾರೆ. 

ಕೋಸು ತೆಗೆದ ನಂತರ ಕೊತ್ತಂಬರಿ, ಕ್ಯಾಬೇಜ್‌ ಹೀಗೆ ಋತುಗಳಿಗನುಗುಣವಾಗಿ ಬಹು ವಿಧದ ತರಕಾರಿಗಳನ್ನು ಬೆಳೆಯುವುದು ಇವರ ಜಾಣತನ. ಮಾಹಿತಿಗೆ- 8453649944. (ರಾತ್ರಿ 7ರಿಂದ 8 ಮಾತ್ರ) 

ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.