ಮದ್ರಸಾ ನೀರಿಗೆ ಪಾಷಾಣ ಬೆರಕೆ: ಅನ್ಸಾರಿ ಪತ್ನಿ ದೂರು
Team Udayavani, Sep 19, 2017, 7:50 AM IST
ನವದೆಹಲಿ: ತಾವು ನಡೆಸುತ್ತಿರುವ ಮದರಸಾದ ನೀರಿನ ಟ್ಯಾಂಕ್ಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಇಲಿ ಪಾಷಾಣ ಬೆರೆಸಿದ್ದಾರೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ಆರೋಪಿಸಿದ್ದಾರೆ.
ಕಳೆದ ರಾತ್ರಿ ನಮ್ಮ ಮದರಸಾದ ಬಾಲಕ ನೀರು ತುಂಬಿಸಿ ಕೊಳ್ಳಲು ಟ್ಯಾಂಕ್ ಬಳಿ ಹೋದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಟ್ಯಾಂಕಿನೊಳಗೆ ಏನನ್ನೋ ಬೆರೆಸುತ್ತಿರುವುದನ್ನು ನೋಡಿದ್ದಾನೆ. ಅಲ್ಲದೇ ಅವರು ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಆ ಹುಡುಗನಿಗೆ ಬೆದರಿಕೆ ಹಾಕಿದ್ದರು. ಆದರೂ ಬಾಲಕ ತಾನು ಕಂಡದ್ದನ್ನು ಮದರಸಾದ ವಿದ್ಯಾರ್ಥಿ ನಿಲಯದ ವಾರ್ಡನ್ಗೆ ಹೇಳಿದ್ದಾನೆ. ವಾರ್ಡನ್ ಮತ್ತಿತರರು ಟ್ಯಾಂಕ್ ಬಳಿ ಹೋದಾಗ ಅವರಿಗೆ ಹಲವಾರು ಇಲಿ ಪಾಷಾಣ ಮಾತ್ರೆಗಳು ಕಂಡುಬಂದಿವೆ ಎಂದಿದ್ದಾರೆ.
ಈ ಕುರಿತು ದೂರು ದಾಖಲಿಸಿರುವ ಪೊಲೀಸರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಲ್-ನೂರ್ ದತ್ತಿ ಸಂಸ್ಥೆ ನಡೆಸುವ ಈ ಮದರಸಾ ಅಲಿಗಢ ದಲ್ಲಿದೆ. ಇಲ್ಲಿ 4,000 ಮಕ್ಕಳು ಕಲಿಯುತ್ತಿದ್ದಾರೆ. “ಅಮಾಯಕ ಮಕ್ಕಳ ಜೀವಕ್ಕೆ ಅಪಾಯ ಉಂಟುಮಾಡುವ ಹೇಡಿತನದ ಕೃತ್ಯ ಬಗ್ಗೆ ಕೇಳಿ ಆಘಾತ ಉಂಟಾಯಿತು’ ಎಂದಿದ್ದಾರೆ ಸಲ್ಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.