ರಾಹುಲ್ ಗಾಂಧಿ, ಯೆಚೂರಿ ವಿರುದ್ಧ ಮಾನನಷ್ಟ ದಾವೆ
Team Udayavani, Sep 19, 2017, 7:10 AM IST
ಮುಂಬಯಿ /ಹೊಸದಿಲ್ಲಿ: ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್ಎಸ್ಎಸ್ ಕೈವಾಡ ಇದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಆರ್ಎಸ್ಎಸ್ ಕಾರ್ಯಕರ್ತ, ನ್ಯಾಯವಾದಿ ಧ್ರಿತುಮಾನ್ ಜೋಶಿ ಮುಂಬ ಯಿಯ ಸ್ಥಳೀಯ ಕೋರ್ಟ್ನಲ್ಲಿ ಮೊಕ ದ್ದಮೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ಅ. 22ರಂದು ನಡೆಯುವ ಸಾಧ್ಯತೆ ಇದೆ.
ದೂರಿನಲ್ಲಿ ರಾಹುಲ್ ಮತ್ತು ಯೆಚೂರಿ ಸಂಘಟನೆ ವಿರುದ್ಧ ಮಾಡಿರುವ ಆರೋಪ ಗಳನ್ನು ಉಲ್ಲೇಖೀಸಿದ್ದಾರೆ. ಅವರಿಬ್ಬರ ಹೇಳಿಕೆಗಳು ಮಾನಹಾನಿಕರವಾಗಿವೆ. ಜತೆಗೆ ಅದು ಕ್ಷುಲ್ಲಕ ಹೇಳಿಕೆ ಎಂದು ಜೋಶಿ ಪ್ರತಿ ಪಾದಿಸಿದ್ದಾರೆ. ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರಬೇಕೆಂದೇ ಅವರು ಅಂಥ ಹೇಳಿಕೆ ನೀಡಿದ್ದಾರೆಂದು ದೂರಿದ್ದಾರೆ. ರಾಹುಲ್ ವಿರುದ್ಧ ಈಗಾಗಲೇ ಮಹಾರಾಷ್ಟ್ರದ ಭಿವಂಡಿ ಜಿಲ್ಲಾ ಕೋರ್ಟಲ್ಲಿ ಸಂಘಟನೆ ವಿರುದ್ಧ ಮಾಡಿದ ಬೇರೊಂದು ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.