ನಗುವುದು ನಮ್ಮ ಧರ್ಮ, ನಗದಿದ್ದರೆ ಅದು ಅವರ ಕರ್ಮ!
Team Udayavani, Sep 19, 2017, 7:56 AM IST
ಮನುಷ್ಯನಿಗೆ ತುಂಬಾ ಇರಿಟೇಟ್ ಮಾಡುವುದು ಎದುರಿಗಿರುವ ವ್ಯಕ್ತಿಯ ವ್ಯಂಗ್ಯ ನಗು. ಕೆಲವರು ತಮ್ಮ ಲೋಭಿತನವನ್ನು ಮುಚ್ಚಲು ವ್ಯಂಗ್ಯವಾಗಿ ನಗುತ್ತಾರೆ. ಕೆಟ್ಟ ಆಲೋಚನೆ ತುಂಬಿಕೊಂಡಿರುವ ವ್ಯಕ್ತಿಯಿಂದ ಮಾತ್ರ ನೆಗೆಟಿವ್ ನಗು ಹೊರಬರಲು ಸಾಧ್ಯ.
ಮನುಷ್ಯ ದುಡಿಯುವುದು, ಕಷ್ಟ ಪಡುವುದು ತಾನು ಮತ್ತು ತನ್ನ ಮನೆಯವರು ನಗುನಗುತ್ತಾ ಸುಖವಾಗಿ ಇರಬೇಕು ಎಂದು. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಕೆಲವರು ನಗದೆ ಯಾವಾಗಲೂ ಗಂಟು ಮುಖ ಹಾಕಿಕೊಂಡಿರುತ್ತಾರೆ. ಕೆಲವರಿಗೆ ನಾವು ಎಷ್ಟು ತಂದುಕೊಟ್ಟರೂ ಸಾಲದು, ಎಲ್ಲದಕ್ಕೂ ಕೊಂಕು ಮಾತನಾಡಿ ಸುಮ್ಮನಾಗುತ್ತಾರೆ. ತಾವೂ ನಗುವುದಿಲ್ಲ, ಮನೆಯಲ್ಲಿರುವವರನ್ನೂ ನಗಲು ಬಿಡುವುದಿಲ್ಲ.
ನಗು ಮನುಷ್ಯರಿಗೆ ಪ್ರಕೃತಿಯಿಂದ ಸಹಜವಾಗಿ ಬಂದಿರುವ ಬಳುವಳಿ. ನಗು ನಮ್ಮಲ್ಲಿ ಪಾಸಿಟಿವ್ ಎನರ್ಜಿಯನ್ನು ತುಂಬು ತ್ತದೆ. ನಗುವುದು ಮನುಜರ ಸಹಜ ಧರ್ಮ. ನಾವು ನಮ್ಮನ್ನೇ ಗಮನಿಸಿಕೊಂಡರೆ, ನಮ್ಮ ನಗು ನಮಗೆ ಎಷ್ಟು ನೆಮ್ಮದಿಯನ್ನು ಕೊಟ್ಟಿರುತ್ತದೆ! ಯಾವುದೋ ಒಂದು ಒಳ್ಳೆ ಕೆಲಸ ಮಾಡಿದಾಗ, ನಮ್ಮನ್ನು ನಾವೇ ಕನ್ನಡಿಯಲ್ಲಿ ನೋಡಿಕೊಂಡು ನಕ್ಕು ಖಷಿಪಡು ತ್ತೇವೆ. ನಮ್ಮನ್ನು ಪ್ರೀತಿಸುವವರು ಹೊಗಳಿದಾಗಲೂ ಮೊದಲು ಓಡಿ ಬಂದು ಕನ್ನಡಿ ಮುಂದೆ ನಿಂತು ಮುಗುಳ್ನಗುತ್ತೇವೆ. ಏಕೆಂದರೆ ನಮ್ಮ ಬಗ್ಗೆ ನಮಗೆ ಹೆಮ್ಮೆಯಾಗಿರುತ್ತದೆ. ಆಗ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ.
ನಗು ಎಷ್ಟೋ ವಿಚಾರಗಳಿಗೆ ಸಮ್ಮತಿ ಸೂಚಕವಾಗಿದೆ. ದೂರದಲ್ಲಿ ನಿಂತಿರುವ ವ್ಯಕ್ತಿಯನ್ನು ಆಕರ್ಷಿಸುವ ಶಕ್ತಿ ನಗುವಿಗಿದೆ. ನಗು ನಮ್ಮೊಬ್ಬರ ಆಸ್ತಿಯಲ್ಲ. ನಾವು ನಕ್ಕರೆ ನಮ್ಮ ಸುತ್ತಮುತ್ತಲೂ ಅದರ ಪಾಸಿಟಿವ್ ಎನರ್ಜಿ ಹರಿದು ತಾವಾಗಿಯೇ ಎಲ್ಲರೂ ಮುಖ ಆರಳಿಸಿ, ತುಟಿ ಬಿರಿದು ನಗಲಾರಂಭಿಸುತ್ತಾರೆ. ಮನುಷ್ಯ ನಗುವ ಹಕ್ಕನ್ನು ಯಾರಿಂದಲೂ ಪಡೆದುಕೊಳ್ಳಬೇಕಾಗಿಲ್ಲ.
ಇತ್ತೀಚೆಗೆ ಮೊಬೈಲ್ ಪೋನ್ ಬಳಕೆ ಹೆಚ್ಚಿದ ಮೇಲಂತೂ ರಸ್ತೆಯಲ್ಲಿ ಮಾತನಾಡಿಕೊಂಡು ಹೋಗುವವರೆಲ್ಲ ವಿಧ ವಿಧ ವಾಗಿ ನಗುತ್ತಿರುತ್ತಾರೆ. ಕೆಲವರ ನಗು ಆಗತಾನೇ ಶುರುವಾಗುತ್ತಿ ರುವ ಪ್ರೇಮವನ್ನು ಸೂಚಿಸುತ್ತದೆ. ಪೋನ್‌ನಲ್ಲಿ ಮಾತನಾಡು ವಾಗಲೂ ಅವರು ನಾಚಿಕೊಳ್ಳುತ್ತಿರುತ್ತಾರೆ. ಇನ್ನು ಕೆಲವರು ಜೋಕ್ ಮಾಡಿಕೊಂಡು ಬಾಯಿತುಂಬಾ ನಗುತ್ತಿರುತ್ತಾರೆ. ಮತ್ತೆ ಕೆಲವರು ವ್ಯಂಗ್ಯ ನಗುವಿನಲ್ಲಿರುತ್ತಾರೆ. ನಾವಿರುವುದಕ್ಕಿಂತ ಸುಂದರವಾಗಿ ಕಾಣುವುದು ನಾವು ನಕ್ಕಾಗ. ನಮ್ಮ ಮುಖ ಚೆನ್ನಾಗಿಲ್ಲ, ಹಲ್ಲು ಚೆನ್ನಾಗಿಲ್ಲ, ತುಟಿ ಚೆನ್ನಾಗಿಲ್ಲ ಅಂತ ನಗದೆ ಇರಬಾರದು. ಮನಸ್ಸು ಪೂರ್ತಿಯಾಗಿ ನಗುತ್ತಿರಿ. ಅದು ನಿಮ್ಮ ಎನರ್ಜಿಯನ್ನು ದುಪ್ಪಟ್ಟುಗೊಳಿಸುತ್ತದೆ.
ವ್ಯಂಗ್ಯ ನಗು ಒಂದು ಅಸ್ತ್ರ
ಮನುಷ್ಯನಿಗೆ ತುಂಬಾ ಇರಿಟೇಟ್ ಮಾಡುವುದು, ಕೋಪ ಬರಿಸುವುದು ಎದುರಿಗಿರುವ ವ್ಯಕ್ತಿಯ ವ್ಯಂಗ್ಯ ನಗು. ಕೆಲವರು ತಮ್ಮ ಲೋಭಿತನವನ್ನು ಮುಚ್ಚಿಹಾಕಿಕೊಳ್ಳಲು ವ್ಯಂಗ್ಯವಾಗಿ ನಗುತ್ತಾರೆ. ಅದಕ್ಕೆ ಅಷ್ಟು ಪ್ರಾಮುಖ್ಯ ಕೊಡದೆ, ತಲೆ ಕೆಡಿಸಿಕೊಳ್ಳದೆ ಮುನ್ನಡೆಯಬೇಕು. ಯಾವನೇ ಒಳ್ಳೆಯ ವ್ಯಕ್ತಿ ವ್ಯಂಗ್ಯ ನಗುವನ್ನು ಅಸ್ತ್ರವನ್ನಾಗಿ ಬಳಸುವುದಿಲ್ಲ. ಕೆಟ್ಟ ಆಲೋಚನೆ ತುಂಬಿಕೊಂಡಿರುವ ವ್ಯಕ್ತಿಯಿಂದ ಮಾತ್ರ ನೆಗೆಟಿವ್ ನಗು ಹೊರಬರಲು ಸಾಧ್ಯ. ಮತ್ತೂಬ್ಬರನ್ನು ಆಡಿಕೊಂಡು, ಕೆಲವರನ್ನು ಛೇಡಿಸಿಕೊಂಡು, ಅಹಂಕಾರದಿಂದ ತಾನೇ ಎಲ್ಲ ಎಂಬ ಕ್ರೌರ್ಯದಿಂದ ಹೊರಚೆಲ್ಲುವ ನಗು ನಗುವೇ ಅಲ್ಲ. ಇದು ನಗುವನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಯಷ್ಟೆ. ನಾವು ಹೀಗೆ ವ್ಯಂಗ್ಯ ವಾಗಿ ನಕ್ಕರೆ, ಎದುರಿರುವವನಿಗೆ ಖಂಡಿತ ಬೇಜಾರಾಗುತ್ತದೆ ಎಂದು ತಿಳಿದುಕೊಂಡೇ ಕೆಲವರು ವ್ಯಂಗ್ಯವಾಗಿ ನಗುತ್ತಾರೆ. ಆದರೆ ಎದುರಿಗಿರುವವರು ಅದನ್ನೇ ಅನುಸರಿಸದೆ, ಒಂದು ಸುಂದರವಾದ ದೈವಿಕವಾದ ನಗುವನ್ನು ಹೊರಸೂಸಿದರೆ ಪಾಸಿಟಿವ್ ನಗುವಿನ ತಾಕತ್ತು ಎದುರಿರುವ ನೆಗೆಟಿವ್ ನಗುವನ್ನು ತಾನಾಗೇ ಹೊಡೆದು ಹಾಕುತ್ತದೆ.
ಬೇರೆಯವರು ನಕ್ಕರೂ ಸ್ವರ್ಗ
ನಾವು ಸಂತೋಷವಾಗಿ ನಕ್ಕಾಗ ಎಷ್ಟು ಸುಖ ಸಿಗುತ್ತದೆಯೋ ಅಷ್ಟೇ ಸುಖ ಬೇರೆಯವರು ಖುಷಿಯಿಂದ ನಗುತ್ತಿರುವು ದನ್ನು ನೋಡಿದಾಗಲೂ ಸಿಗುತ್ತದೆ. ಕೆಲವು ಹುಡುಗರು ತನ್ನ ಹುಡುಗಿ ಒಂದೇ ಒಂದು ನಗು ಹೊರಹಾಕಬಾರದಾ ಅಂತ ಕಾಯುತ್ತಿರುತ್ತಾರೆ. ಅವಳು ಕೋಪ ಮಾಡಿಕೊಂಡಿದ್ದಾಗ ಇವನ ನಗುವೂ ಮಯಾವಾಗಿರುತ್ತದೆ. ಮದುವೆಯಾದ ಗಂಡಸರೂ ಅಷ್ಟೆ; ತನ್ನ ಹೆಂಡತಿ ಯಾವಾಗಲೂ ನಗುನಗುತ್ತಾ ತನ್ನನ್ನ ಮಾತಾಡಿಸಲಿ ಅಂತ ಎದುರು ನೋಡುತ್ತಿರುತ್ತಾರೆ. ಅವಳ ಒಂದು ನಗು ಇವರಿಗೆ ದಿನ ಪೂರ್ತಿ ಕೆಲಸ ಮಾಡುವ ಶಕ್ತಿ ಕೊಡುತ್ತದೆ. ಕೆಲವು ಹೆಂಗಸರು ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಎಲ್ಲರ ಮುಂದೆ ನಗುನಗುತ್ತಾ ತಮ್ಮ ನೋವನ್ನು ಒಳಗೇ ನುಂಗಿಕೊಂಡು ಬೇರೆಯವರ ಮನಸ್ಸಿಗೆ ಸಂತೋಷ ಉಂಟುಮಾಡುತ್ತಾರೆ. ಅವರ ಒಳ್ಳೆಯತನವನ್ನು ಮೆಚ್ಚಲೇಬೇಕು. ಇತ್ತೀಚೆಗಿನ ದಿನಗಳಲ್ಲಿ ಕೆಲವರನ್ನು, ಅದರಲ್ಲೂ ಸಿಟಿಯಲ್ಲಿ ರುವ ಜನರನ್ನು ಗಮನಿಸಿದರೆ, ನಗುವುದಕ್ಕೆ ಅವರೆಷ್ಟು ಸಂಕಟ ಪಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ. ನಾವ್ಯಾಕೆ ನಗಬೇಕು ಎನ್ನುವಂತೆ, ಮುಖದಲ್ಲಿನ ಭಾವನೆಗಳನ್ನು ಬಚ್ಚಿಟ್ಟುಕೊಂಡು ತಾವೇ ಮಹಾನ್ ಬುದ್ಧಿಜೀವಿಗಳಂತೆ ಕೊರಡು ಮುಖ ಮಾಡಿಕೊಂಡಿರುತ್ತಾರೆ. ಯಾರನ್ನೇ ನಾವು ಭೇಟಿಯಾದರೂ ಒಂದು ಸಣ್ಣ ನಗುವಿನಿಂದ ಹಲೋ ಹೇಳುವುದು ಸಹಜ. ಆದರೆ ಕೆಲವೊಮ್ಮೆ ಎದುರಿರುವ ವ್ಯಕ್ತಿಗಳು ನಗುವಿಗೂ ಟ್ಯಾಕ್ಸ್ ಕಟ್ಟಬೇಕಾಗುತ್ತ ದೇನೋ ಎಂಬಂತೆ ಅರ್ಧ ತುಟಿ ಅರಳಿಸಿ ಕೃತಕ ನಗುವಿನಿಂದ ಹಲೋ ಹೇಳಿ ಆ ಕಡೆಗೆ ಮುಖ ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ನಗುವುದನ್ನೇ ಮರೆತಿದ್ದಾರೆ. ಮನೆಗೆ ಯಾರೇ ಬಂದರೂ ಅವರನ್ನು ನಗುವಿನೊಂದಿಗೆ ಬರಮಾಡಿಕೊಳ್ಳದೆ, ಮುಖ ಗಂಟು ಹಾಕಿಕೊಂಡು ಪ್ರಶ್ನೆ ಕೇಳು ತ್ತಾರೆ. ನಗುವುದನ್ನು ನಾವೇನೂ ದುಡ್ಡು ಕೊಟ್ಟು ಮಕ್ಕಳನ್ನು ತರಬೇತಿಗೆ ಕಳಿಸಿ ಕಲಿಸಬೇಕಾಗಿಲ್ಲ. ಹಸನ್ಮುಖದಿಂದ ಸ್ವಾಗತ ಮಾಡುವುದು ಕೂಡ ನಮ್ಮ ಸಂಸ್ಕಾರ ಅಲ್ಲವೇ?
ತುಂಬಾ ಓದಿದವರು ನಗುವುದಿಲ್ಲವೆ?
ಚೆಕ್ಕವಯಸ್ಸಿನಿಂದ ನಗುವುದನ್ನು ಮರೆತಿರುವವರು ದೊಡ್ಡವ ರಾದ ಮೇಲೆ ಎಲ್ಲ ಕಾಯಿಲೆಗೂ ನಗುವೇ ಮದ್ದು ಎಂಬುದು ಅರಿವಾಗಿ ಲಾಫಿಂಗ್ ಕ್ಲಬ್ ಸೇರಿಕೊಳ್ಳಬೇಕಾಗುತ್ತದೆ. ನಗು ದೇಹದ ಎಷ್ಟೋ ಕಾಯಿಲೆಗಳನ್ನು ಸಹನೀಯವಾಗಿಸು ತ್ತದೆ, ಮಾನಸಿಕ ಕಾಯಿಲೆಗಳನ್ನು ಗುಣಪಡಿಸುತ್ತದೆ. ತುಂಬಾ ನರಳುತ್ತಿರುವವರ ಪಕ್ಕ ಕುಳಿತು ನಾವೂ ನಗುತ್ತಾ ಅವರನ್ನೂ ನಗಿಸುವಂತೆ ಮಾತುಗಳನ್ನಾಡಿದರೆ ಕಾಯಿಲೆ ಎಷ್ಟೇ ಇದ್ದರೂ
ಅವರಲ್ಲೊಂದು ಶಕ್ತಿ ಸಂಚಾರವಾಗಿ ಚೇತರಿಸಿಕೊಳ್ಳಲಾರಂಭಿಸುತ್ತಾರೆ. ನಗುವನ್ನು ಹಂಚಿಕೊಳ್ಳಲು ಕಾಸು ಖರ್ಚಾಗುವುದಿಲ್ಲ ಅಂತ ನಿಮಗೂ ಗೊತ್ತು. ಆದರೂ ಕೆಲವರು ನಗಲು ಹಿಂದೆ ಮುಂದೆ ನೋಡುತ್ತಾರೆ.
ಮನೆಯಲ್ಲಿ ಕೆಲವರು ತುಂಬಾ ಓದಿ ಕೊಂಡಿರುವವರು ನಗುವುದೇ ಅಪರೂಪ. ನಾವೆಲ್ಲ ಅವರನ್ನು ನೋಡಿ ನಗದೆ, ಸದ್ದು ಮಾಡದೆ ಸುಮ್ಮನಿರ
ಬೇಕು. ಅವರು ನಮ್ಮನ್ನು ಹೆದರಿಸುವುದನ್ನು ಎಂಜಾಯ್ ಮಾಡುತ್ತಾರೆ ಅನ್ನಿಸುತ್ತದೆ. ಇನ್ನು ಕೆಲವರಿಗೆ ದೇಹ, ವಯಸ್ಸು ಬೆಳೆದಿರುತ್ತದೆ, ಆದರೆ ಬುದ್ಧಿ ಬೆಳೆದಿರುವುದಿಲ್ಲ. ಎಲ್ಲಿ, ಹೇಗೆ ಸಭ್ಯತೆಯಿಂದ ನಗಬೇಕು ಅಂತ ಗೊತ್ತಿರುವುದಿಲ್ಲ. ಕೆಲವರು ಸಮಯಾಸಮಯದ ಅರಿವೇ ಇಲ್ಲದಂತೆ ಕರ್ಕಶವಾಗಿ ನಗುತ್ತಾರೆ. ಇನ್ನು ಕೆಲವರು ಚೆಲ್ಲುಚೆಲ್ಲಾಗಿ ನಗುತ್ತಾರೆ. ಸ್ನೇಹಿತರ ಜತೆ ತಮಾಷೆ ಮಾಡಿಕೊಂಡು ನಗುವಷ್ಟು ಜೋರಾಗಿ ಆಫೀಸಿನಲ್ಲಿ, ಸಭೆಗಳಲ್ಲಿ ನಗಲು ಆಗುವುದಿಲ್ಲ. ಕೆಲವು ಸಲ ನಮ್ಮ ನಗು ನೋಡಿ ಬೇರೆಯವರು ತಪ್ಪು ತಿಳಿದುಕೊಳ್ಳುವ ಸನ್ನಿವೇಶಗಳನ್ನು ನಾವೆಲ್ಲರೂ ಎದುರಿಸಿರುತ್ತೇವೆ. ಇನ್ನು ಕೆಲವು ಸಲ ಗುಂಪಿನಲ್ಲಿ ತಮಾಷೆ ಮಾಡಿದರೆ ನಾವು ನಗುವನ್ನು ನಿಯಂತ್ರಿಸಿಕೊಳ್ಳಬೇಕಾ ಗುತ್ತದೆ. ಎಲ್ಲರಂತೆ ಬೇರೆಯವರ ಬಗ್ಗೆ ತಮಾಷೆ ಮಾಡುವ ವ್ಯಕ್ತಿತ್ವ ನಮ್ಮದಾಗಿರಬಾರದು.
ಹುಟ್ಟಿದ ಮಗುವಿನ ನಗುವನ್ನು ನೋಡಿ ನಾವು ಎಷ್ಟು ಸಂತೋಷ ಪಡುತ್ತೇವೋ ಅಷ್ಟೇ ಸಂತೋಷ ನಮ್ಮ ನಗುವನ್ನು ನೋಡಿ ಬೇರೆಯವರಿಗಾಗಬೇಕು. ನಮ್ಮ ನಗು ಬೇರೆಯವರ ನೋವಿಗೆ ಕಾರಣವಾಗಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.