ನನ್ನನ್ನು ಹ್ಯಾಟ್ರಿಕ್‌ ಹೀರೋ ಎಂದು ಕರೆಯಬೇಡಿ


Team Udayavani, Sep 19, 2017, 10:25 AM IST

Bharjari-1.jpg

“ಅದ್ಧೂರಿ’, “ಬಹದ್ದೂರ್‌’ ಈಗ “ಭರ್ಜರಿ’. ಇದು ಧ್ರುವ ಸರ್ಜಾ ನಟಿಸಿರುವ ಮೂರು ಸಿನಿಮಾಗಳು. ಮೂರಕ್ಕೆ ಮೂರು ಸಿನಿಮಾಗಳು ಗೆದ್ದಿವೆ. ಮೊನ್ನೆಯಷ್ಟೇ ತೆರೆಕಂಡ “ಭರ್ಜರಿ’ ಚಿತ್ರ ಕೂಡಾ ಹಿಟ್‌ಲಿಸ್ಟ್‌ ಸೇರಿದೆ. ಮೊದಲ ದಿನವೇ ಆರು ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುವ ಮೂಲಕ ಧ್ರುವ ಸರ್ಜಾ ಕೂಡಾ ದೊಡ್ಡ ಓಪನಿಂಗ್‌ಗೆ ಸಾಕ್ಷಿಯಾಗಿದ್ದಾರೆ. ಸತತವಾಗಿ ಮೂರು ಸಿನಿಮಾಗಳು ಹಿಟ್‌ ಆದರೆ, ಆ ಹೀರೋಗೆ “ಹ್ಯಾಟ್ರಿಕ್‌ ಹೀರೋ’ ಎಂದು ಚಿತ್ರರಂಗದ ಮಂದಿ, ಅಭಿಮಾನಿಗಳು ಕರೆಯುತ್ತಾರೆ.

ಈಗಾಗಲೇ “ಹ್ಯಾಟ್ರಿಕ್‌ ಹೀರೋ’ ಎಂಬ ಬಿರುದು ಶಿವರಾಜಕುಮಾರ್‌ ಅವರಿಗೆ ಇದೆ. ಈಗ ಧ್ರುವ ಸರ್ಜಾ ಅವರನ್ನು ಕೂಡಾ ಅಭಿಮಾನಿಗಳು “ಹ್ಯಾಟ್ರಿಕ್‌ ಹೀರೋ’ ಎಂದು ಕರೆಯಲಾರಂಭಿಸಿದ್ದಾರೆ. ಆದರೆ, ಧ್ರುವ ಸರ್ಜಾ ಮಾತ್ರ ಅಭಿಮಾನಿಗಳಲ್ಲಿ “ನನ್ನನ್ನು ಹ್ಯಾಟ್ರಿಕ್‌ ಹೀರೋ’ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಹಾಗಂತ ಅಭಿಮಾನಿಗಳು ಬೇಸರವಾಗಬೇಕಿಲ್ಲ. ಧ್ರುವ ಅವರನ್ನು “ಹ್ಯಾಟ್ರಿಕ್‌ ಆ್ಯಕ್ಷನ್‌ ಪ್ರಿನ್ಸ್‌’  ಎಂದು ಕರೆಯಬಹುದು. 

ಅಷ್ಟಕ್ಕೂ, ಧ್ರುವ “ಹ್ಯಾಟ್ರಿಕ್‌ ಹೀರೋ’ ಎಂದು ಕರೆಯಬೇಡಿ ಎನ್ನಲು ಕಾರಣ ಶಿವರಾಜ ಕುಮಾರ್‌ ಅವರ ಮೇಲಿನ ಅಭಿಮಾನ. ಧ್ರುವ ಸರ್ಜಾ, ಶಿವರಾಜಕುಮಾರ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಜೊತೆಗೆ ಅವರ ಅಭಿಮಾನಿ ಕೂಡಾ. ಈಗ ಶಿವರಾಜಕುಮಾರ್‌ ಅವರ ಬಿರುದನ್ನು ತಾನಿಟ್ಟುಕೊಳ್ಳೋದು ಸರಿಯಲ್ಲ ಎಂಬ ಕಾರಣಕ್ಕೆ “ಹ್ಯಾಟ್ರಿಕ್‌ ಆ್ಯಕ್ಷನ್‌ ಪ್ರಿನ್ಸ್‌’ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

“ನಮ್ಮ ಹೀರೋ ಧ್ರುವಗೆ “ಹ್ಯಾಟ್ರಿಕ್‌ ಹೀರೋ’ ಎಂದು ಕರೆಯೋದು ಇಷ್ಟವಿಲ್ಲ. ಏಕೆಂದರೆ ಅವರು ಕೂಡಾ ಶಿವರಾಜಕುಮಾರ್‌ ಅವರ ಅಭಿಮಾನಿ. ಹಾಗಾಗಿ, ಹ್ಯಾಟ್ರಿಕ್‌ ಆ್ಯಕ್ಷನ್‌ ಪ್ರಿನ್ಸ್‌ ಎಂದು ಕರೆಯಬಹುದು’ ಎನ್ನುವುದು ನಿರ್ದೇಶಕ ಚೇತನ್‌ ಮಾತು. ಸದ್ಯ “ಭರ್ಜರಿ’ ಚಿತ್ರ ಗೆದ್ದ ಖುಷಿಯಲ್ಲಿರುವ ಧ್ರುವ ಅವರ ಮುಂದಿನ ಚಿತ್ರ “ಪೊಗರು’. ಈ ಚಿತ್ರವನ್ನು ನಂದಕಿಶೋರ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ಹೇಳುವಂತೆ “ಭರ್ಜರಿ’ ಚಿತ್ರ ಮೂರು ದಿನಕ್ಕೆ 16 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.

ಎಲ್ಲಾ ಕಡೆಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದ್ದು, ವಾರಾಂತ್ಯದಲ್ಲಿ ಚಿತ್ರ 25 ಕೋಟಿ ರೂಪಾಯಿ ಕಲೆಕ್ಟ್ ಮಾಡಲಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಪ್ರದರ್ಶನವಾಗದ ಊರ್ವಶಿ, ರೆಕ್ಸ್‌ಗಳಲ್ಲೂ “ಭರ್ಜರಿ’ ಪ್ರದರ್ಶನ ಕಂಡಿದೆ. ಜೊತೆಗೆ ಮುಂಬೈನಲ್ಲೂ ಚಿತ್ರ ಬಿಡುಗಡೆಯಾಗಿದೆ. ನಿರ್ಮಾಪಕ ಶ್ರೀನಿವಾಸ್‌ ಎರಡು ತಿಂಗಳು ಬಿಟ್ಟು, “ಭರ್ಜರಿ’ ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲಿದ್ದು, ಈಗಾಗಲೇ ಡಬ್ಬಿಂಗ್‌ ಕಾರ್ಯ ಮುಕ್ತಾಯವಾಗಿದೆಯಂತೆ. ತಮಿಳಿನಿಂದ ರೀಮೇಕ್‌ ರೈಟ್ಸ್‌ಗೆ ಬೇಡಿಕೆ ಬರುತ್ತಿದೆಯಂತೆ. 

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.