ಆವೇಷದಲ್ಲಿ ಅಕ್ಕನನ್ನೇ ಕೊಂದ ಅಪ್ರಾಪ್ತೆ


Team Udayavani, Sep 19, 2017, 11:47 AM IST

akka-murder.jpg

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಅಕ್ಕನನ್ನು ಹತ್ಯೆಗೈದು ನಂತರ ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ್ದ ಅಪ್ರಾಪ್ತೆಯನ್ನು ಮೈಕೋ ಲೇಔಟ್‌ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರಾಜೇಶ್ವರಿ (20) ಹತ್ಯೆಗೀಡಾದವರು. ಈ ಸಂಬಂಧ 17 ವರ್ಷದ ಅಪ್ರಾಪ್ತೆಯನ್ನು ಬಂಧಿಸಿರುವ ಪೊಲೀಸರು, ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರ ಮೂಲದ ಯುವತಿಯರು ಸಂಬಂಧದಲ್ಲಿ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು.

ಕೆಲ ವರ್ಷಗಳ ಹಿಂದೆ ಒಟ್ಟಿಗೆ ನಗರಕ್ಕೆ ಬಂದಿದ್ದ ಇವರು, ಬಿಟಿಎಂ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಮನೆ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ರಾಜೇಶ್ವರಿ ಯುವಕನೊಬ್ಬನ ಜತೆ ಫೋನ್‌ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಈ ಬಗ್ಗೆ ರಾಜೇಶ್ವರಿಯನ್ನು ಪ್ರಶ್ನಿಸಿದ್ದ ಬಂಧಿತೆ, ಇದೇ ವಿಚಾರಕ್ಕೆ ಆಕೆಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕತ್ತು ಹಿಸುಕಿ ಕೊಲೆ: ಅಕ್ಕ ರಾಜೇಶ್ವರಿ ಹುಡುಗನೊಬ್ಬನ ಜತೆ ಯಾವಾಗಲೂ ಪೋನಿನಲ್ಲಿ ಮಾತನಾಡುತ್ತಿದ್ದಳು. ಈ ಬಗ್ಗೆ ತಂಗಿಗೆ ಅಸಮಾಧಾನವಿತ್ತು. ಇದೇ ವಿಷಯವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಸೆ.10ರಂದು ರಾಜೇಶ್ವರಿ ಫೋನಿನಲ್ಲಿ ಮಾತನಾಡುವಾಗ ಅಪ್ರಾಪ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದೇ ವಿಷಯವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಇದು ವಿಕೋಪಕ್ಕೆ ಹೋದಾಗ ಆರೋಪಿತ ಅಪ್ರಾಪ್ತೆ, ರಾಜೇಶ್ವರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದರು.

ಅಸ್ವಾಭಾವಿಕ ಸಾವು: ಆವೇಶದಲ್ಲಿ ಅಕ್ಕನನ್ನು ಕೊಂದ ಅಪ್ರಾಪ್ತೆ, ಸ್ವಲ್ಪ ಹೊತ್ತು ಮನೆಯಿಂದ ಹೊರಗೆ ಹೋಗಿದ್ದಾಳೆ. ಬಳಿಕ ಮನೆಗೆ ಬಂದ ಆಕೆ, ಅಕ್ಕ ಸತ್ತಿದ್ದಾಳೆಂದು ಹೇಳಿ, ಸುತ್ತಮುತ್ತಲ ಮನೆಯವರನ್ನೆಲ್ಲಾ ಸೇರಿಸಿ “ಅಕ್ಕ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ತಿಳಿಸಿದ್ದಾಳೆ. ಮೃತಳ ಪೋಷಕರು ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಂಬಿ ಸುಮ್ಮನಾಗಿದ್ದರು. ಅಲ್ಲದೇ ಪೊಲೀಸರು ಕೂಡ “ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಪೋರ್ಸ್ಡ್ ಮಾರ್ಟಮ್‌ ಸುಳಿವು: ಇತ್ತ ಅಕ್ಕನ ಅಂತ್ಯಕ್ರಿಯೆ ಮುಗಿಸಿ ಕುಟುಂಬದೊಂದಿಗೆ ಅಪ್ರಾಪ್ತೆ ಹಿಂದೂಪುರಕ್ಕೆ ತೆರಳಿದ್ದಳು. ಮತ್ತೂಂದೆಡೆ ರಾಜೇಶ್ವರಿಯ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, “ಕುತ್ತಿಗೆ ಹಿಸುಕಿ ರಾಜೇಶ್ವರಿಯನ್ನು ಕೊಲೆ ಮಾಡಲಾಗಿದೆ’ ಎಂದು ವರದಿ ನೀಡಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು, ಅನುಮಾನದ ಮೇಲೆ ಅಪ್ರಾಪ್ತೆಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆಸಿಕೊಂಡಿದ್ದರು. ನಂತರ ನಡೆದ ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಅಪ್ರಾಪ್ತೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೈಕೋ ಲೇಔಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.