ವೆಂಕಟ್ ಈಗ ದುರಹಂಕಾರಿ
Team Udayavani, Sep 19, 2017, 12:07 PM IST
ವೆಂಕಟ್ಗೆ ಮಾಧ್ಯಮ ಮುಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳೋದೆಂದರೆ ಏನೋ ಒಂದು ಖುಷಿ. ಹಾಗಾಗಿ, ಪ್ರತಿ ವರ್ಷ ಮಾಧ್ಯಮ ಮುಂದೆ ಬಂದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ತಮ್ಮ ಸಿನಿಮಾ ಬಗ್ಗೆ ಮಾತನಾಡುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ ವೆಂಕಟ್.
ಈ ಹಿಂದೆ “ಹುಚ್ಚ ವೆಂಕಟ್’, “ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾಗಳನ್ನು ಮಾಡಿರುವ ವೆಂಕಟ್ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಅದು “ದುರಹಂಕಾರಿ’. ಹೀಗೊಂದು ವಿಚಿತ್ರ ಟೈಟಲ್ನಡಿ ವೆಂಕಟ್ ಸಿನಿಮಾ ಮಾಡಲು ಹೊರಟಿದ್ದಾರೆ.
ವೆಂಕಟ್ ಸಿನಿಮಾ ಎಂದ ಮೇಲೆ ನಿರ್ಮಾಣ, ನಿರ್ದೇಶನ, ಸಂಭಾಷಣೆ ಸೇರಿದಂತೆ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಅವರೇ ಇರುತ್ತಾರೆ. ಈ ಹಿಂದಿನ ಎರಡು ಸಿನಿಮಾಗಳಲ್ಲಿ ತಂದೆ-ತಾಯಿ ಸೆಂಟಿಮೆಂಟ್, ಲವ್, ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ವೆಂಕಟ್ ಈಗ “ದುರಹಂಕಾರಿ’ಯಲ್ಲೂ ಅದನ್ನೇ ಮುಂದುವರೆಸಿದ್ದಾರೆ.
ಅದು ಹೊಸ ಗೆಟಪ್ನಲ್ಲಿ. ಹೌದು, ವೆಂಕಟ್ “ದುರಹಂಕಾರಿ’ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಅವರ ಗೆಟಪ್ ಕೂಡಾ ಬದಲಾಗಿದೆ. ಎಂದಿನ ತಮ್ಮ ಕುರುಚಲು ಗಡ್ಡವನ್ನು “ಸಿಂಗಂ’ ಸ್ಟೈಲ್ಗೆ ಬದಲಿಸಿದ್ದಾರೆ. ಇಷ್ಟು ದಿನ “ನನ್ ಮಗಂದ್, ಎಕ್ಕಡಾ’ ಎಂದು ಕಣ್ಣುಗುಡ್ಡೆಯನ್ನು ದೊಡ್ಡದು ಮಾಡಿ, ಅವಾಜ್ ಹಾಕುತ್ತಿದ್ದ ವೆಂಕಟ್ ಈಗ ಮೈ ಮೇಲೆ ಖಾಕಿ ಹಾಕಿಕೊಂಡು ಅದೇ ಅವಾಜ್ನ್ನು ಮುಂದುವರೆಸಲಿದ್ದಾರೆ.
ಈ ಹಿಂದೆ ತಮ್ಮ “ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾವನ್ನು “ಬಾಹುಬಲಿ-2′ ಚಿತ್ರ ಎದುರು ಬಿಡುಗಡೆ ಮಾಡಿದ್ದರು. ಆದರೆ, ಅವರ ಸಿನಿಮಾಕ್ಕೆ ಮಾಧ್ಯಮ ಮಂದಿಯಿಂದ ಹಿಡಿದು ಯಾರೊಬ್ಬರು ಹೋಗದ ಕಾರಣ, ಮಾಧ್ಯಮ ಮಂದಿಗೆ ಬೈಯ್ದು ಕೊನೆಗೆ ಕ್ಷಮೆ ಕೇಳಿದ್ದ ವೆಂಕಟ್ ಈ ಬಾರಿ ಏನೇನೋ ಅವಂತಾರ ಮಾಡಿಕೊಳ್ಳುತ್ತಾರೋ ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.