ಉತ್ತರಾಧಿಕಾರಿ


Team Udayavani, Sep 19, 2017, 2:15 PM IST

19-STTAE-9.jpg

ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ಈಗ ಉತ್ತರ ಕರ್ನಾಟಕದ್ದೇ ಮಾತು. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ನಾಯಕರು ಅಧಿಕಾರಕ್ಕಾಗಿ ಈಗ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಕಾಲ ಬುಡದಲ್ಲೇ ಬರುತ್ತಿದ್ದಂತೆ ಮೂರೂ ಪಕ್ಷಗಳ ದಳಪತಿಗಳು ಈ ಭಾಗದಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಕೇಂದ್ರ ರಾಜಕಾರಣಕ್ಕೆ ಉತ್ತರ ಪ್ರದೇಶ ಹೇಗೆಯೋ ಅದೇ ರೀತಿ ಕರ್ನಾಟಕದ ಪಾಲಿಗೆ ಉತ್ತರ ಕರ್ನಾಟಕವೂ ಪ್ರಾಮುಖ್ಯತೆ ಪಡೆದುಕೊಂಡಿದೆ. ಒಂದರ್ಥದಲ್ಲಿ ರಾಜ್ಯದ “ಉತ್ತರ ಪ್ರದೇಶ’! ಪ್ರಸ್ತುತ ಚರ್ಚೆಯ ವಸ್ತುವಾಗಿರುವ ಉಕ ಭಾಗದ ರಾಜಕಾರಣ, ಕ್ಷೇತ್ರವಾರು ವಿವರ, ಅಧಿಕಾರಕ್ಕಾಗಿ ನೀಡಿದ ಕೊಡುಗೆ ಸೇರಿದಂತೆ ರಾಜಕಾರಣದ ವಿವಿಧ ಮಜಲುಗಳ ವಿಸ್ತೃತರೂಪ ಇಲ್ಲಿದೆ.

ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕೆಂಬ ಉದ್ದೇಶದೊಂದಿಗೆ ಮೂರು ಪ್ರಮುಖ ಪಕ್ಷಗಳು ತಮ್ಮ
“ದಂಡ ನಾಯಕ’ರನ್ನು ಈ ಭಾಗದಿಂದಲೇ ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿವೆ. ಅಧಿಕಾರ ಹಿಡಿಯುವ ಪಕ್ಷಗಳಿಗೆ ಉತ್ತರದ ಬಲ ತನ್ನದೇ ಮಹತ್ವದ ಕೊಡುಗೆ ನೀಡುತ್ತ ಬಂದಿದೆ ಎಂಬುದನ್ನು ಚುನಾವಣಾ ಫ‌ಲಿತಾಂಶ ಇತಿಹಾಸದ ಅಂಕಿ-ಅಂಶಗಳು ಹೇಳುತ್ತಿವೆ. 

ಒಬ್ಬರು ಹಾಲಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಸುಳಿದಾಡತೊಡಗಿರುವುದು, ಉತ್ತರ ಕರ್ನಾಟಕ ರಾಜಕೀಯ ಕೇಂದ್ರಬಿಂದುವಾಗಿ ಚರ್ಚೆಗೊಳಪಡತೊಡಗಿದೆ. ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಒಟ್ಟು 13 ಜಿಲ್ಲೆಗಳನ್ನು ಉತ್ತರ ಕರ್ನಾಟಕ ಹೊಂದಿದ್ದು, ಕಳೆದ ಮೂರು ವರ್ಷಗಳ ಚುನಾವಣಾ ಇತಿಹಾಸ ನೋಡುತ್ತ ಬಂದರೆ ಅಧಿಕಾರ ಹಿಡಿದ ಹಾಗೂ ವಿಪಕ್ಷ ಸ್ಥಾನದಲ್ಲಿದ್ದ ಪಕ್ಷಗಳು ಗಳಿಸಿದ ಒಟ್ಟು ಸ್ಥಾನಗಳಲ್ಲಿ ಉತ್ತರ ಕರ್ನಾಟಕ ಶೇ.50ಕ್ಕೂ ಮೇಲ್ಪಟ್ಟು ಸ್ಥಾನ ನೀಡುತ್ತಲೇ ಬಂದಿದೆ. ಅಧಿಕಾರ ಹಿಡಿಯಬೇಕಾದರೆ  ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಸತ್ಯ ಅರಿತುಕೊಂಡೇ ಇದೀಗ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಈ ಭಾಗದ ಕಡೆ ಹೆಚ್ಚು ಗಮನ ಕೇಂದ್ರೀಕರಿಸತೊಡಗಿವೆ.

ದಂಡನಾಯಕರ ಸ್ಪರ್ಧೆ ಸದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದಲೇ ಸ್ಪರ್ಧೆಗಿಳಿಯಲಿದ್ದಾರೆಂಬ ಸುದ್ದಿ ಇದೀಗ ತೀವ್ರತೆ ಪಡೆಯತೊಡಗಿದೆ. ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ತಮ್ಮ ನಾಯಕರಿಗೆ ಈ ಭಾಗದಿಂದಲೇ ಸ್ಪರ್ಧಿಸಿ ಎಂದು ಬಹಿರಂಗ ಆಹ್ವಾನ ನೀಡುತ್ತಿರುವುದು ರಾಜಕೀಯ ಬಿಸಿಯೇರಿಸುವಂತೆ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಸ್ಪರ್ಧೆಯ ಒತ್ತಡದ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸುವ ಮೂಲಕ ರಾಜಕೀಯ ಚರ್ಚೆಗೆ ಕಿಡಿಯೊತ್ತಿಸಿದ್ದರು. ಇದೀಗ ತಾನೇನು
ಕಡಿಮೆ ಎನ್ನುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಈ ಭಾಗದಿಂದಲೇ ಸ್ಪರ್ಧೆಗಿಳಿಯುವುದಾಗಿ ಹೇಳಿರುವುದು ರಾಜಕೀಯ
ಜಿದ್ದಾಜಿದ್ದಿ ಕಿಚ್ಚು ಹೆಚ್ಚುವಂತೆ ಮಾಡಿದೆ. 

ಯಾರ್ಯಾರು ಎಲ್ಲಿ?
ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವ ಕುರಿತು ಆಯಾ ಪಕ್ಷದ
ಮುಖಂಡರು ಆಹ್ವಾನ ನೀಡಿದ್ದು, ಈ ಮೂವರು ನಾಯಕರು ಯಾವ ಜಿಲ್ಲೆ ಹಾಗೂ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಮೂವರು ನಾಯಕರಿಗೆ ಸ್ಪರ್ಧೆಗೆ ಆಹ್ವಾನ ಇದೆ. ಆಯಾ ಜಿಲ್ಲೆಯ ಮುಖಂಡರು ತಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿರುವ ಹಿಂದೆ ಜಿಲ್ಲೆಯಲ್ಲಿ ತಮ್ಮ ನಾಯಕ ಸ್ಪರ್ಧಿಸಿದರೆ ಅದರ ಪ್ರಭಾವ ಜಿಲ್ಲೆಯ ಎಲ್ಲ ಕ್ಷೇತ್ರಗಳು ಹಾಗೂ ನೆರೆಯ ಜಿಲ್ಲೆಗಳ ಕ್ಷೇತ್ರಗಳ ಮೇಲಾಗಿ ತಮ್ಮ ಆಯ್ಕೆಗೆ ಪೂರಕವಾಗಬಹುದು ಎಂಬ ಚಿಂತನೆ ಇಲ್ಲದಿಲ್ಲ. ಮೂವರು ಮುಖಂಡರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆಗಿಳಿಯಬೇಕಾದರೆ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿ, ರಾಜಕೀಯ, ಜಾತಿ, ಬೆಂಬಲ, ಗೆಲುವಿನ ಎಲ್ಲಾ ರೀತಿಯ ಲೆಕ್ಕಾಚಾರಗಳನ್ನು ಹಾಕಿಕೊಂಡು ಹಾಗೂ ಗೆಲುವಿನ ಖಾತ್ರಿಯೊಂದಿಗೆ ಕಣಕ್ಕಿಳಿಯಲು ಮುಂದಾಗುವುದು ಖಂಡಿತ.

ಸ್ಪರ್ಧೆ ಹಿಂದಿನ ಲೆಕ್ಕಾಚಾರ ಏನು?
ಉತ್ತರ ಕರ್ನಾಟಕದಲ್ಲಿ ಈ ನಾಯಕರ ಸ್ಪರ್ಧೆಗಿಳಿಯುವ ಚಿಂತನೆ ಹಿಂದೆ ಕೆಲವೊಂದು ವೈಯಕ್ತಿಕ ಕಾರಣವಿದ್ದರೂ ಪಕ್ಷಗಳ ದೃಷ್ಟಿಯಿಂದ ಈ ಭಾಗದಲ್ಲಿ ಹೆಚ್ಚಿನ ಬಲ ಲಭಿಸುವ ಲೆಕ್ಕಾಚಾರವೇ ಪ್ರಮುಖವಾಗಿದೆ. ತಮ್ಮ ಸ್ಪರ್ಧೆಯಿಂದ ಈ ಭಾಗದಲ್ಲಿ ಬರುವ ಸ್ಥಾನಗಳಿಗೆ ಕನಿಷ್ಠ 10-12 ಸ್ಥಾನ ಹೆಚ್ಚಿದರೂ ಅಧಿಕಾರ ಹಿಡಿಯಲು ಇದು ಮಹತ್ವದ ಸಹಕಾರಿ ಆಗಲಿದೆ ಎಂಬ ಲೆಕ್ಕಾಚಾರ ಮೂರು ಪಕ್ಷದ್ದಾಗಿದೆ ಎನ್ನಲಾಗಿದೆ. ಒಂದು ವೇಳೆ ಮೂವರು ನಾಯಕರು ಈ ಭಾಗದಲ್ಲಿ ಸ್ಪರ್ಧಿಸಿದ್ದೇಯಾದರೆ ಉತ್ತರ ಕರ್ನಾಟಕ ರಾಷ್ಟ್ರದ ಗಮನ ಸೆಳೆಯುವುದು ಖಂಡಿತ. 

ಪಕ್ಷ ಸಂಘಟನೆಗೆ ಒತ್ತು
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗಳಿಕೆ ನಿಟ್ಟಿನಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿವೆ. ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಬೂತ್‌ ಮಟ್ಟದ ಕಮಿಟಿ ರಚನೆ, ಪದಾಧಿಕಾರಿಗಳ ಸಮಾವೇಶ ಕೈಗೊಂಡಿದೆ. ಮುಂಬಯಿ ಕರ್ನಾಟಕ, ಹೈದರಾಬಾದ ಕರ್ನಾಟಕಕ್ಕೆ ಎಐಸಿಸಿ ಕಾರ್ಯದರ್ಶಿಗಳಾದ ಮಾಣಿಕ್ಯಂ ಠಾಕೂರ್‌ ಹಾಗೂ ಶೈಲಜಾನಾಥ್‌ ಸಾಕೆ ಅವರನ್ನು ನೇಮಿಸಿದೆ. ರಾಜ್ಯ
ಸರಕಾರ ಕೈಗೊಂಡ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ, ರೈತರ ಸಾಲ ಮನ್ನಾ ವಿವಿಧ ಸೌಲಭ್ಯಗಳ ಮನವರಿಕೆಗೆ ಸಮಾವೇಶ ಹಾಗೂ ಮನೆ ಮನೆಗಳಿಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಿಜೆಪಿ ಸಂಘಟನಾ ದೃಷ್ಟಿಯಿಂದ ತಾನೇನು ಕಡಿಮೆ ಎನ್ನುವಂತೆ ಈಗಾಗಲೇ ರೈತ ಚೈತನ್ಯ ಯಾತ್ರೆ, ವಿವಿಧ ಸಮಾವೇಶ, ಕಲಬುರ್ಗಿ, ಬಾಗಲಕೋಟೆಯಲ್ಲಿ ರಾಜ್ಯ ಕಾರ್ಯಕಾರಿಣಿ, ವಿಸ್ತಾರಕರ ಯೋಜನೆ ಮೂಲಕ ಪ್ರತಿ ವಾರ್ಡ್‌, ಬೂತ್‌ವಾರು ಸದಸ್ಯತ್ವ ನೋಂದಣಿ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾವೇಶಗಳನ್ನು ಈ ಭಾಗದಲ್ಲಿ ಕೈಗೊಳ್ಳಲು ಯೋಜಿಸಿದೆ. ಜೆಡಿಎಸ್‌ ಸಹ ಉತ್ತರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದಲೇ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರಲ್ಲದೇ, ಬೆಳಗಾವಿ, ಕಲಬುರಗಿ, ವಿಜಯಪುರ, ಹುಬ್ಬಳ್ಳಿ ಇನ್ನಿತರ ಕಡೆ ಸಮಾವೇಶಗಳನ್ನು ಕೈಗೊಂಡಿದ್ದರು. ಮುಂದಿನ ದಿನಗಳಲ್ಲಿ ಇದೇ ಭಾಗದಲ್ಲಿ ಬೃಹತ್‌ ರೈತರ ಸಮಾವೇಶಮಾಡುವುದಾಗಿಯೂ ತಿಳಿಸಿದೆ. 

ಲಿಂಗಾಯತ ಮತ ಬ್ಯಾಂಕ್‌ ಮೇಲೆ ಕಣ್ಣು
ಉತ್ತರ ಕರ್ನಾಟಕದಲ್ಲಿ ತಮ್ಮದೇ ರಾಜಕೀಯ ಪ್ರಾಬಲ್ಯ ಹೊಂದಿರುವ ಲಿಂಗಾಯತ ಮತ ಬ್ಯಾಂಕ್‌ ಮೇಲೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಣ್ಣಿಟ್ಟಿದ್ದು, ಈ ಸಮುದಾಯದ ಒಲವು ಗಳಿಸುವ ನಿಟ್ಟಿನಲ್ಲಿ ಮೂರೂ ಪಕ್ಷಗಳು ತಮ್ಮದೇ ತಂತ್ರಗಾರಿಕೆಯಲ್ಲಿ ತೊಡಗಿವೆ. ಬಿಜೆಪಿ ಸಹಜವಾಗಿಯೇ
ಲಿಂಗಾಯತ ಸಮುದಾಯ ತಮ್ಮಗೆ ಹೆಚ್ಚಿನ ಬೆಂಬಲ ನೀಡುತ್ತದೆ ಎಂದೇ ಭಾವಿಸಿದೆ. ಈ ಸಮುದಾಯದ ನಾಯಕ ಯಡಿಯೂರಪ್ಪ ಅವರ ಬೆನ್ನಿಗೆ ಸಮಾಜದ ಬೆಂಬಲ ಇದೆ ಎಂಬುದು ಅದರ ಲೆಕ್ಕಾಚಾರ. ಅದೇ ರೀತಿ ಜೆಡಿಎಸ್‌ ಸಹ ಲಿಂಗಾಯತ ಹಾಗೂ ಉತ್ತರ ಕರ್ನಾಟಕ ವಿರೋಧ 
ಪಟ್ಟ ಕಳಚುವ ನಿಟ್ಟಿನಲ್ಲಿ ಹಲವು ಯತ್ನಗಳಿಗೆ ಮುಂದಾಗಿದ್ದು, ಲಿಂಗಾಯತ ಸಮುದಾಯದ ಬಸವರಾಜ ಹೊರಟ್ಟಿ ಅವರಿಗೆ ಕಾರ್ಯಾಧ್ಯಕ್ಷ ಪಟ್ಟ ನೀಡಿದೆ. ಕಾಂಗ್ರೆಸ್‌ಗೆ ಲಿಂಗಾಯತ ಸಮುದಾಯ ಹೆಚ್ಚಿನ ಬೆಂಬಲ ನೀಡದು ಎಂಬ ಅಭಿಪ್ರಾಯ ಇತ್ತಾದರೂ, ಸರಕಾರಿ ಕಚೇರಿಗಳಲ್ಲಿ ಬಸವಣ್ಣವರ
ಭಾವಚಿತ್ರ ಕಡ್ಡಾಯ, ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ನಾಮಕರಣ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಶಿಫಾರಸು ಭರವಸೆ, ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಗೆ ಅನುದಾನ ಘೋಷಣೆ, ಹೇಮರಡ್ಡಿ ಮಲ್ಲಮ್ಮ ಜಯಂತಿ ಸರಕಾರದಿಂದ ಆಚರಣೆ, ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಎಸ್‌.ಆರ್‌.ಪಾಟೀಲರಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಪಟ್ಟ ಹೀಗೆ ವಿವಿಧ ಕಾರ್ಯಗಳಿಂದ ಲಿಂಗಾಯತ ಸಮುದಾಯದ ಮೇಲಿನ ಬಿಜೆಪಿ ಪ್ರಾಬಲ್ಯಕ್ಕೆ ಪೆಟ್ಟು ಕೊಡುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ.

ಮತ ಗಳಿಕೆಯಲ್ಲಿ ಕಾಂಗ್ರೆಸ್‌ನದ್ದೇ ಮೇಲುಗೆ
15 ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮಧ್ಯ ಮತ ಗಳಿಕೆ ಪಾಲು ನೋಡಿದಾಗ ಕಾಂಗ್ರೆಸ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಕಳೆದ ಒಂದೂವರೆ ದಶಕಗಳ ಚುನಾವಣೆಗಳ ಫ‌ಲಿತಾಂಶ ಗಮನಿಸಿದಾಗ ಕಾಂಗ್ರೆಸ್‌ ಸರಾಸರಿ ಶೇ.35-36ರಷ್ಟು ಮತ ಪಾಲು ತನ್ನದಾಗಿಸಿಕೊಂಡಿದೆ. ಬಿಜೆಪಿ ಶೇ.20-32ರಷ್ಟು ಮತ ಪಡೆದಿದೆ. 2008ರಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಧಿಕಾರ ಹಿಡಿದಾಗಲು ಶೇ.33ರಷ್ಟು ಮತ ಪಡೆದರೆ, ಕಾಂಗ್ರೆಸ್‌ ಶೇ.36ರಷ್ಟು ಮತ ಪಡೆದಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.36.6ರಷ್ಟು ಮತ ಪಡೆದು ಶೇ.1.8ರಷ್ಟು ಮತ ಪಾಲು ಹೆಚ್ಚಿಸಿಕೊಂಡಿತ್ತು. ಜೆಡಿಎಸ್‌ ಶೇ.20.2ರಷ್ಟು ಮತ ಪಡೆದು ಶೇ.1.1ರಷ್ಟು ಪಾಲು ವೃದ್ಧಿಸಿಕೊಂಡಿತ್ತು. ಬಿಜೆಪಿ ಶೇ.19.9ರಷ್ಟು ಮತ ಪಾಲು ಪಡೆದು ಶೇ.13.9ರಷ್ಟು ಮತ ಪಾಲು ನಷ್ಟ ಮಾಡಿಕೊಂಡಿತ್ತು. ಇದೇ ವೇಳೆಗೆ ಕೆಜೆಪಿ ಶೇ.9.8ರಷ್ಟು ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ಶೇ.2.7ರಷ್ಟು ಮತ ಪಡೆದಿದ್ದವು.

ಬಿಎಸ್‌ವೈ ಸ್ಪರ್ಧೆ ಎಲ್ಲಿ?
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಆ ಪಕ್ಷದ ಮುಖಂಡರು ಆಹ್ವಾನಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧೆಗಿಳಿಯುವಂತೆ ಕೋರಿದ್ದು, ಇದಕ್ಕೆ ಪೂರಕವಾಗಿ ಆ ಜಿಲ್ಲೆಯ ಕೆಲ ಮುಖಂಡರು ಕ್ಷೇತ್ರ ತ್ಯಾಗದ ಘೋಷಣೆ ಮಾಡಿದ್ದಾರೆ. ಅದೇ ರೀತಿ ಬೆಳಗಾವಿ, ವಿಜಯಪುರ, ಹಾವೇರಿ ಜಿಲ್ಲೆಗಳಿಂದಲೂ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ. ಕೆಲ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಮುಂದಾದರೆ ಬಹುತೇಕವಾಗಿ ಅವರು ಹಾವೇರಿ ಜಿಲ್ಲೆ ರಾಣಿಬೆನ್ನೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಣಿಬೆನ್ನೂರು ಕ್ಷೇತ್ರಕ್ಕೆ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ವಲಸೆ ಹೋಗಲಿದ್ದಾರೆ ಎಂಬ ಸುದ್ದಿ  ಹಬ್ಬಿಸಲಾಗಿತ್ತಾದರೂ, ಕ್ಷೇತ್ರ ತೊರೆಯುವುದಿಲ್ಲ ಎಂದು ಬೊಮ್ಮಾಯಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಣಿಬೆನ್ನೂರಿನಲ್ಲಿ ಯಡಿಯೂರಪ್ಪ ಅವರು ಸ್ಪರ್ಧೆಗೆ ಒಲವು
ತೋರಲು ಕ್ಷೇತ್ರದಲ್ಲಿ ಸಾದರ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಪ್ರಮುಖ ಕಾರಣವಾಗುವ ಸಾಧ್ಯತೆ ಇದ್ದು, ಈಗಾಗಲೇ ಕ್ಷೇತ್ರದ ವಿಸ್ತಾರಕರ ಉಸ್ತುವಾರಿಗೆ ತಮ್ಮ ಪುತ್ರ, ಶಾಸಕರ ರಾಘವೇಂದ್ರ ಅವರನ್ನು ನೇಮಿಸಿರುವುದು ಹಲವು ಚರ್ಚೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

ಸಿದ್ದು ನಡೆ ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗಿದೆ. ಈ ಹಿಂದೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರು ಬಸವರಾಜ ಪಾಟೀಲ ಅನ್ವರಿ ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋಲುಂಡಿದ್ದರು. ಅಲ್ಲದೆ ಕೊಪ್ಪಳದಲ್ಲಿ ಹಾಲುಮತ ಸಮಾಜದ ಮತದಾರರ ಸಂಖ್ಯೆ ಗಣನೀಯವಾಗಿರು ವುದರಿಂದಲೇ ಕೊಪ್ಪಳ ಜಿಲ್ಲೆಯಿಂದ ಸ್ಪರ್ಧಿಸಲು ಆಹ್ವಾನ ಸಹಜವಾಗಿದೆ. ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕರು ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಹಿರಂಗ ಆಹ್ವಾನ ನೀಡಿದ್ದರು. ಇದೀಗ ಸಚಿವ ಆರ್‌.ಬಿ.ತಿಮ್ಮಾಪುರ ಇನ್ನಿತರ ಮುಖಂಡರು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಸ್ವಂತ ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ಯೋಜಿಸಿದ್ದಾರೆನ್ನಲಾಗಿದ್ದು, ಬದಲಾದ ರಾಜಕೀಯ ಸ್ಥಿತಿಯಲ್ಲಿ ಉತ್ತರ ಭಾಗದಿಂದ ಕಣಕ್ಕಿಳಿಯುವ ಅನಿವಾರ್ಯತೆ ಸೃಷ್ಟಿಯಾದರೆ, ಒಂದು ವೇಳೆ ಬಾಗಲಕೋಟೆ ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡರೆ ಬದಾಮಿ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಹೆಚ್ಚು ಎನ್ನುತ್ತವೆ ಮೂಲಗಳು. 

ಕುಮಾರಣ್ಣನ ಆಯ್ಕೆ?
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವಿಜಯಪುರ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಸಂಘಟನಾ ಶಕ್ತಿ ಕುಂದಿದಂತಿರುವ ಜೆಡಿಎಸ್‌ಗೆ ತಮ್ಮ ದಂಡನಾಯಕ ಈ ಭಾಗದಲ್ಲಿ ಸ್ಪರ್ಧಿಸಿದರೆ
ಪಕ್ಷಕ್ಕೆ ಶಕ್ತಿ ಬರಲಿದೆ ಎಂಬ ಲೆಕ್ಕಾಚಾರ ಈ ಭಾಗದ ನಾಯಕರದ್ದಾಗಿದೆ. ಕುಮಾರಸ್ವಾಮಿಯವರು ರಾಮನಗರದಲ್ಲೇ ಸ್ಪರ್ಧಿಸಲು ಒಲವು ತೋರಿದ್ದು,
ಅಗತ್ಯ ಪೂರ್ವ ತಯಾರಿ ಇಲ್ಲದೆ ಉತ್ತರದಲ್ಲಿ ಸ್ಪರ್ಧೆ ಬೇಡ ಎಂಬುದು ಹಾಗೂ ಈ ಭಾಗದಲ್ಲಿ ಸ್ಪರ್ಧಿಸಿದರೆ ಕ್ಷೇತ್ರ ಹೊಸತು, ಗೆಲುವಿಗಾಗಿ ಚುನಾವಣೆ ಬಹುತೇಕ ಸಮಯವನ್ನು ಈ ಒಂದೇ ಕ್ಷೇತ್ರಕ್ಕೆ ಕೇಂದ್ರೀಕರಿಸಬೇಕಾಗಲಿದ್ದು, ರಾಜ್ಯದ ಇತರೆ ಕಡೆಯ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ ಎಂಬ ಅಳಕು ಅವರನ್ನು ಕಾಡುತ್ತಿದೆ. ಉತ್ತರದ ಸ್ಪರ್ಧೆ ಅನಿವಾರ್ಯವಾದರೆ ಅವರು ಬಹುತೇಕವಾಗಿ ವಿಜಯಪುರ ಜಿಲ್ಲೆಯಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕ ಭಾಗದ ಮತದಾರರಿಗೆ ಹತ್ತಿರವಾಗಲು ಯತ್ನಿಸಿದ್ದಾರೆ. ಮುಂದಿನ ನಡೆ ಇನ್ನೂ ನಿಗೂಢವಾಗಿದೆ. 

ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಒಂದು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಳಿದ ಆರು ಕ್ಷೇತ್ರಗಳಲ್ಲಿ ಸಿಎಂ ಎಲ್ಲಿಯಾದರೂ ಸ್ಪರ್ಧಿಸಲಿ. ಸಿಎಂ ನೀಡಿದ ವಿವಿಧ ಭಾಗ್ಯಗಳು, ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್‌ಗೆ ಪೂರಕವಾಗಿವೆ. 2013ರಲ್ಲಿ ಉ.ಕ.ದಲ್ಲಿ 57 ಸ್ಥಾನ ಗೆದ್ದಿದ್ದೆವು. 2018ರಲ್ಲಿ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಬರಲಿದ್ದು, ಸಿಎಂ ಸ್ಪರ್ಧೆಯಿಂದ ಇದರ ವೇಗ ಹೆಚ್ಚಲಿದೆ. 
ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ

ಯಡಿಯೂರಪ್ಪ ಅವರು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸಬೇಕು, ಬಾಗಲಕೋಟೆ ಜಿಲ್ಲೆಗೆ ಮೊದಲಾದ್ಯತೆ ನೀಡಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಅವರು ಸಿಎಂ ಆಗುವುದರಿಂದ ನಮ್ಮ ಜಿಲ್ಲೆ ಸಿಎಂ ಕ್ಷೇತ್ರ ಎನ್ನಿಸಿಕೊಳ್ಳಲಿದೆ. 
ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಉಪಾಧ್ಯಕ್ಷರು.

ಮೂವರೂ ನಾಯಕರು ಅವರವರ ಕ್ಷೇತ್ರಗಳಲ್ಲಿ ನಿಲ್ಲುವುದು ಬಿಟ್ಟು ಉತ್ತರ ಕರ್ನಾಟಕಕ್ಕೆ ಯಾಕೆ ಬರುತ್ತಿದ್ದಾರೆಂಬುದೇ ಜನರನ್ನು ಕಾಡುವ ಪ್ರಶ್ನೆಯಾಗಿದೆ. ಲಿಂಗಾಯತ, ವೀರಶೈವ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು ದಿಲ್ಲಿ ನಾಯಕರ ಸೂಚನೆಯಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರ ಓಲೈಕೆಗೆ ಬಿಎಸ್‌ವೈ ಈ ಭಾಗದ ಸ್ಪರ್ಧೆಗೆ ಮುಂದಾಗಿರಬೇಕು. ಸಿಎಂ, ಬಿಎಸ್‌ವೈ ಹಿಂದುಳಿದ ಕ್ಷೇತ್ರದಲ್ಲಿ ಸ್ಪರ್ಧಿಸಲಿ.
ಬಸವರಾಜ ಹೊರಟ್ಟಿ, ಜೆಡಿಎಸ್‌ ಕಾರ್ಯಾಧ್ಯಕ್ಷ

●ಮಾಹಿತಿ : ಅಮರೇಗೌಡ ಗೋನವಾರ ನಿರ್ವಹಣೆ : ಚನ್ನು ಮೂಲಿಮನಿ

ಟಾಪ್ ನ್ಯೂಸ್

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.