ಮೊಬೈಲ್‌ ಏಕಾದಶಿ


Team Udayavani, Sep 19, 2017, 2:22 PM IST

19-JOSH-1.jpg

ಸೂರ್ಯನ ಬೆಳಕನ್ನು ನೋಡುವ ಮೊದಲೇ ಮೊಬೈಲ್‌ ಬೆಳಕನ್ನು ನೋಡುವ ಕಾಲ ಇದು. ಮೊಬೈಲ್‌ ಇಲ್ಲದೆ ಒಂದು ಕ್ಷಣ ಬದುಕಿರೋದಿಲ್ಲ ಎನ್ನುವ ಸ್ಥಿತಿಗೆ ಬಂದುಬಿಟ್ಟಿದ್ದೇವೆ ನಾವೆಲ್ಲ. ಆದರೂ ಇಲ್ಲೊಬ್ಬಳು ಹುಡುಗಿ ಮೊಬೈಲ್‌ ಇಲ್ಲದೆ ಒಂದು ದಿನ ಬದುಕು ಸಾಗಿಸಿದ್ದಳು. ಆ ಅನುಭವ ಹೇಗಿತ್ತು?

ಇನ್ನೇನು ಈ ದಿನ ಮುಗಿಯಲು ಎರಡೇ ಎರಡು ನಿಮಿಷ ಬಾಕಿ. ಮೊಬೈಲ್‌ ಮೇಲೇಕೋ ಕೋಪ ಬಂದಿತ್ತು. ನಾಳೆ ಇಡೀ ದಿನ ನಾನು ಮೊಬೈಲ್‌ ಬಳಸುವುದಿಲ್ಲ ಎಂದು ತೀರ್ಮಾನಿಸಿಬಿಟ್ಟೆ. ಹಾಗೆ ಶಪಥ ತೊಟ್ಟೇ ಹಾಸಿಗೆ ಮೇಲೆ ಮಲಗಿದ್ದೆ. ಕಣ್ತುಂಬಾ ನಿದ್ದೆ ಆವರಿಸಿಕೊಂಡಿತು. ಬೆಳಗ್ಗೆ ಸಾಮಾನ್ಯವಾಗಿ ನಾನು ಏಳುವುದು 9 ಗಂಟೆಗೆ. ಆದರೆ, ಅಲಾರಂ ಇಟ್ಟುಕೊಳ್ಳದ ಕಾರಣ ಏಳುವಾಗ 9.40 ಆಗಿತ್ತು! ಅಯ್ಯೋ, 10 ಗಂಟೆಗೆ ಬಾಯ್‌ಫ್ರೆಂಡ್‌ಗೆ ಸಿಗುತ್ತೇನೆ ಎಂದಿದ್ದು ನೆನಪಾಗಿ, ಥಟ್ಟನೆ ಬೆಡ್ಡಿನ ಪಕ್ಕದಲ್ಲಿ ಸ್ವಿಚ್ಡ್ ಆಫ್ ಆಗಿದ್ದ ಮೊಬೈಲ್‌ ಅನ್ನು ನೋಡಿದೆ. ಅದು ನಗುತ್ತಾ, “ನನ್ನನ್ನು ನಂಬಿದ್ರೆ ಹೀಗೆಲ್ಲ ಆಗ್ತಿತ್ತಾ?’ ಅಂತ ಅಣಕಿಸಿದಾಗ, ಅದರ ಮೇಲೆ ಕೋಪ, ನನ್ನ ವ್ರತದ ಮೇಲಿನ ನಂಬಿಕೆ ಇನ್ನೂ ಹೆಚ್ಚಾಯಿತು.

ಚಕಚಕನೆ ಸ್ನಾನ ಮುಗಿಸಿದೆ. ಕನ್ನಡಿ ಮುಂದೆಯೂ ಲಗುಬಗೆಯಲ್ಲಿ ಸಿಂಗಾರಗೊಂಡೆ. ತಡವಾಯ್ತು, ಕ್ಯಾಬ್‌ ಬುಕ್‌ ಮಾಡೋಣವೆಂದರೆ, ಮತ್ತೆ ಅದೇ ಮೊಬೈಲನ್ನು ಮುಟ್ಟಬೇಕಲ್ಲ! ನಾನು ಹಾಗೆ ಮಾಡಲಿಲ್ಲ. ಇವತ್ತು ಆಟೋದಲ್ಲಿಯೇ ಹೋಗೋದು ಅಂತ ನಿರ್ಧರಿಸಿ, ರಸ್ತೆಗೆ ಬಂದೆ. ಹತ್ತು ಆಟೋಗಳನ್ನು ಅಡ್ಡಹಾಕಿದ ಮೇಲೆ ಹನ್ನೊಂದನೇ ಆಟೋ ನನ್ನನ್ನು ಹತ್ತಿಸಿಕೊಂಡಿತು. “ಅಣ್ಣಾ, ಸೀದಾ ಮಲ್ಲೇಶ್ವರಂಗೆ ಹೋಗಿ’ ಅಂದೆ. ಆಟೋ ಚಾಲಕನೂ ನನ್ನಂತೆಯೇ ಹೊಸಬ. ಅವನಿಗೆ ದಾರಿ ಗೊತ್ತಿಲ್ಲ. ಗೂಗಲ್‌ ಮ್ಯಾಪ್‌ ಇದ್ದಿದ್ದರೆ, ಅನುಕೂಲ ಆಗ್ತಿತ್ತು ಅಂತನ್ನಿಸಿತು. ಆಟೋ ಹೊರಟಿತ್ತು.

ಇಂಥ ಪಯಣಗಳಲ್ಲಿ ನಾನು ಸೋಷಿಯಲ್‌ ಮೀಡಿಯಾ, ಇಲ್ಲವೇ ಆ್ಯಪ್‌ಗ್ಳ ಮೇಲೆ ಕಣ್ಣಾಡಿಸುತ್ತೇನೆ. ಜಗತ್ತಿನ ಏನೇ ಸುದ್ದಿಗಳಿದ್ದರೂ ಬೆರಳ ತುದಿಯ ಸ್ವೆ„ಪಿಂಗ್‌ನಲ್ಲಿ ಗೊತ್ತಾಗಿ ಹೋಗುತ್ತೆ. ಆದರೆ, “ಮೊಬೈಲ್‌ ಏಕಾದಶಿ’ಯ ಪ್ರಯುಕ್ತ ನಾನು ದಿನಪತ್ರಿಕೆಯನ್ನೇ ಕೈಗೆತ್ತಿಕೊಳ್ಳಬೇಕಾಗಿಬಂತು. ಓದು ಎಂದಿನಂತೆಯೇ ಚುರುಕುಗಣ್ಣಿನಿಂದ ಸಾಗಿತ್ತು.

ಅವರಿವರ ಬಳಿ ರಸ್ತೆಯನ್ನು ಕೇಳುತ್ತಾ, ಮಲ್ಲೇಶ್ವರಂ ತಲುಪುವಾಗ 30 ನಿಮಿಷವೇ ಕಳೆದಿತ್ತು. ನನ್ನ ಬಳಿ ಚೇಂಜ್‌ ಇರಲಿಲ್ಲ. ಆಟೋದವನಿಗೆ 500 ರೂ. ಕೊಟ್ಟೆ. “ಬೆಳ್‌ಬೆಳಗ್ಗೆ ದೊಡ್ಡ ನೋಟು ಕೊಟ್ರೆ ಹೇಗೆ? ಪೇಟಿಎಂ ಮಾಡಿ’ ಅಂದುಬಿಟ್ಟ ಆಟೋದವನು. ಮತ್ತೆ ಪೇಚಿಗೆ ಸಿಲುಕಿದ್ದೆ.

ನನ್ನ ಹುಡುಗನಿಗೆ ಬಿಳಿ ಗುಲಾಬಿ ಬಹಳ ಇಷ್ಟ. ಇಲ್ಲೆಲ್ಲಿ ಹತ್ತಿರ ಮಾರ್ಕೆಟ್‌ ಇದೆ? ನನಗೆ ಅದು ಗೊತ್ತಿಲ್ಲ. ಗೂಗಲ್‌ ಅಸಿಸ್ಟಂಟ್‌ನಲ್ಲಿ ಹುಡುಕಿದ್ದಿದ್ದರೆ, ಮೂರೇ ಸೆಕೆಂಡಿನಲ್ಲಿ ನನ್ನ ಹುಡುಕಾಟಕ್ಕೆ ಪರಿಹಾರ ಸಿಕ್ಕಿರೋದು. ಮೊದಲೇ ತಡವಾಗಿದೆ ಎಂದು ವಾಚ್‌ ನೋಡಿದೆ. ನನ್ನ ಹುಡುಗ ಇದೇ ಮಾಲ್‌ನ ಎದುರೇ ಇರಬೇಕಿತ್ತು. “ಇಲ್ಲಿಯೇ ಭೇಟಿ ಆಗೋಣ’ ಅಂತ ನಿನ್ನೆ ಹೇಳಿದ್ದೆ. ಕಾದೂ ಕಾದು, ಹೋಗಿದ್ದಾನಾ ಗೂಬೆ!? ಯಾರನ್ನು ಕೇಳ್ಳೋದು! ಅದೂ ಒಬ್ಬ ಹುಡುಗನ ಕುರಿತು. ನನ್ನಂಥ ಹುಡುಗಿಗೆ ಅದು ಕಸಿವಿಸಿಯ ಸಂಗತಿ. ನಾನು ಇಷ್ಟೆಲ್ಲ ಒದ್ದಾಡುತ್ತಿರುವಾಗ, ನನ್ನ 4000 ಎಂಎಎಚ್‌ ಬ್ಯಾಟರಿ ಸಾಮರ್ಥಯದ ಮೊಬೈಲ್‌ ಮಾತ್ರ ಮನೆಯಲ್ಲಿ ಆರಾಮಾಗಿ ನಿದ್ರಿಸುತ್ತಿತ್ತು.

ಹುಡುಗನಿಗೆ ಟೈಮ್‌ ಕೊಟ್ಟು, ಕೈ ಕೊಟ್ನಾ ಅಂತ ಬೇಸರವಾಗಿ ಮಾಲ್‌ನಲ್ಲಿಯೇ ಅತ್ತಿತ್ತ ಹೆಜ್ಜೆ ಹಾಕಿದೆ. ಹಿತವಾದ ಸಂಗೀತ ಕೇಳಿಬರುತ್ತಿತ್ತು. ಅದರ ಮೋಡಿಗೆ ತಲೆದೂಗಿದೆ. ನನ್ನ ಮೊಬೈಲ್‌ನಲ್ಲೂ ಇಂಥದ್ದೇ ಅಥವಾ ಇದಕ್ಕಿಂತ ಚೆಂದದ ಹಾಡುಗಳಿದ್ದವಲ್ಲ ಎಂಬ ನೆನಪು ಮತ್ತೆ ನುಗ್ಗಿಬಂತು. ಕಾದೂ ಕಾದು ಸೋತೆ. “ನನ್ನ ಹುಡುಗ ನನ್ನನ್ನೂ ಇದೇ ರೀತಿ ಕಾದು, ಹೋದನೇನೋ. ಫೋನು ಕೂಡ ಮಾಡುವ ಹಾಗಿಲ್ಲವಲ್ಲ’ ಎಂದು ಬೇಸರದಲ್ಲಿ ಕಾಲೇಜಿಗೆ ಹೊರಟೆ.

ಅಲ್ಲಿ ನೋಡಿದರೆ, ನನ್ನನ್ನು ಎಲ್ಲರೂ ಹೊಗಳ್ಳೋರೆ! “ಎಷ್ಟ್ ಚೆಂದ ಡ್ರೆಸ್‌ ಹಾಕಿದ್ದೀಯ. ಒಂದು ಸೆಲ್ಫಿ ತಗೊಂಡ್‌ ಫೇಸ್‌ಬುಕ್‌ಗೆ ಹಾಕ್ಕೊಳೇ’ ಎಂಬ ಅವರ ಪುಕ್ಕಟೆ ಸಲಹೆ ಕೇಳಿ ಪುನಃ ಮೊಬೈಲನ್ನು ನೆನೆದೆ. 

ಕ್ಲಾಸಿನಲ್ಲಿ ಹುಡುಗಿಯರು ಕದ್ದು ಕದ್ದು ಮೊಬೈಲ್‌ ಬಳಸುತ್ತಿದ್ದಾಗ, ಪೀರಿಯಡ್‌ ನಡುವೆ “ಸಾರಿ… ಒನ್‌ ಮಿನಿಟ್‌… ಹೆಲೋ…’ ಎನ್ನುತ್ತಾ ಪಾಠವನ್ನು ಅರ್ಧಕ್ಕೆ ನಿಲ್ಲಿಸಿ ಮೊಬೈಲ್‌ ಎತ್ತಿಕೊಂಡು ಹೋಗುವ ಲೆಕ್ಚರರ್‌ರನ್ನು ನೋಡಿದಾಗಲೆಲ್ಲ ನನ್ನ ಮೊಬೈಲ್‌ ಕಣ್ಮುಂದೆ ಬರುತ್ತಲೇ ಇತ್ತು. ಸೆಲ್ಫಿ ಕ್ಯಾಮೆರಾದಲ್ಲಿ ಮುಂಗುರಳನ್ನು ಸರಿಸಿಕೊಳ್ಳುವ ಹುಡುಗಿಯರನ್ನು ಕಂಡು, ಈ ವ್ರತ ನನ್ನನ್ನು ಚಕ್ರವ್ಯೂಹಕ್ಕೆ ತಳ್ಳಿದೆಯಲ್ಲ ಎಂದು ಒಂದು ಕ್ಷಣ ಟೆನÒನ್‌ ಆಯ್ತು.

ತರಗತಿ ಮುಗೀತು. ಹೊರಗೆ ಬಂದಾಗ ಜೋರು ಮಳೆ. “ಈ ಮಳೆಯಲ್ಲಿ ಎಲ್ಲಾದರೂ, ಬಿಸಿ ಬಿಸಿ ಬಿರಿಯಾನಿ ಸಿಗುತ್ತಾ?’ ಅಂತ ಕೇಳಿತು ಮನಸ್ಸು. ಅಂಥ ಹೋಟೆಲ್‌ ಹುಡುಕಲೂ ಮೊಬೈಲ್‌ ಬೇಕಲ್ಲ! “ಎಷ್ಟು ಸ್ಟಾರ್‌ ಕೊಟ್ಟಿದ್ದಾರೆ? ರೇಟಿಂಗ್ಸ್‌ ಎಷ್ಟಿದೆ? ಅಲ್ಲೆಷ್ಟು ಬಿರಿಯಾನಿ ವೆರೈಟಿಗಳಿವೆ?’  - ಇಂಥ ಪ್ರಶ್ನೆಗಳನ್ನು ಬೀದಿಯಲ್ಲಿನ ಜನರ ಬಳಿ ಕೇಳಿ, ತಿಳಿಯಲಾಗುವುದಿಲ್ಲವಲ್ಲ! ಬದುಕು ಡಿಜಿಟಲ್‌ ಆಗಿಬಿಟ್ಟಿದೆ.

ಕೊನೆಗೆ ಏನೋ ಸಿಕ್ಕಿದ್ದನ್ನು ತಿಂದುಕೊಂಡು, ಬಸ್ಸನ್ನು ಹತ್ತಿ, ನನ್ನ ಪಿ.ಜಿ. ರೂಮಿಗೆ ಹೋದೆ. ಬಾಗಿಲು ತೆರೆದ ತಕ್ಷಣ, ಮೊಬೈಲ್‌ ನನ್ನನ್ನು ದುರುಗುಟ್ಟುತ್ತಾ, “ಎಷ್ಟು ಸೊಕ್ಕು ನಿಂಗೆ?’ ಎಂದು ಧಿಮಾಕಿನಲ್ಲಿ ಕೇಳಿದಹಾಗಿತ್ತು ಅದರ ನೋಟ. ಆದರೆ, ನನಗೆ ಅದರ ಮೇಲೇನೋ ಪ್ರೀತಿ ಉಕ್ಕಿತು. ಹೋಗಿ ತಬ್ಬಿಕೊಳ್ಳಲು ತಯಾರಾದೆ. ನನ್ನೊಳಗೆ ಯಾವುದೋ ಧ್ವನಿ ಎಚ್ಚರಿಸಿತು; “ಮೊಬೈಲ್‌ ಏಕಾದಶಿ’ ಮುಗಿಯಲು ಇನ್ನೂ 2 ತಾಸು ಇದೆಯಲ್ಲ, ಅದ್ಹೇಗೆ ಇಷ್ಟ್ ಬೇಗ ಮುಟ್ಟುತೀ?’ ಎಂಬ ಅಂತರಂಗದ ಪ್ರಶ್ನೆ.

ಮತ್ತೆ ರಾತ್ರಿ ನಾನು ಮೊಬೈಲ್‌ನಲ್ಲಿ ಅಲಾರಾಂ ಇಟ್ಟುಕೊಳ್ಳದೆ, ದಿಂಬಿಗೆ ತಲೆ ಆನಿಸಿದೆ. ಇಷ್ಟು ದಿನ ಮೊಬೈಲ್‌ ಪರದೆಯ ನೀಲಿ ಬೆಳಕು ನೋಡುತ್ತಲೇ, ನಿದ್ದೆಗೆ ಜಾರುತ್ತಿದ್ದ ಕಣೊYಂಬೆಗಳಲ್ಲೂ ಏನೋ ಸಂಕಟ. ಕೊನೆಗೂ ನಿದ್ದೆ ಬಂತು. ಆದರೆ, ಮರುದಿನ ಸೂರ್ಯನ ಬೆಳಕು ಮೊಗದ ಮೇಲೆ ಬೀಳುವ ಮೊದಲೇ ಮೊಬೈಲ್‌ ಬೆಳಕನ್ನು ನೋಡಿದ್ದೆ!

ಕೀರ್ತನಾ ತೀರ್ಥಹಳ್ಳಿ

ಟಾಪ್ ನ್ಯೂಸ್

BBK11: ಮಂಜಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್

Naxal BIG

Maoist; 15 ಲಕ್ಷ ರೂ.ಇನಾಮು ಹೊಂದಿದ್ದ ಮಾವೋವಾದಿ ಕಮಾಂಡರ್ ಆಂತರಿಕ ಕಲಹದಲ್ಲಿ ಹ*ತ್ಯೆ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಮಂಜಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

11(1

Udupi: ಇಲ್ಲಿ ಹೊಂಡಗಳೇ ಸ್ಪೀಡ್‌ ಬ್ರೇಕರ್‌ಗಳು!

10-uv-fusion

Rainy Season: ಮೊಬೈಲ್‌ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.