ಮೋಡೆಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿ. ಶತವಾರ್ಷಿಕ ಮಹಾಸಭೆ


Team Udayavani, Sep 19, 2017, 4:15 PM IST

16-Mum08a.jpg

ಮುಂಬಯಿ: ವ್ಯವಹಾರದೊಂದಿಗೆ ಸಂಬಂಧಗಳನ್ನು ಬೆಳೆಸಿ ಮುನ್ನಡೆಯುವ ಮೋಡೆಲ್‌ ಬ್ಯಾಂಕ್‌ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ನೀಡುವಲ್ಲಿ ಯಶ ಕಂಡಿದೆ. ಪ್ರಸ್ತುತ 21 ಶಾಖೆಗಳನ್ನು ಹೊಂದಿರುವ ಮೋಡೆಲ್‌ ಬ್ಯಾಂಕ್‌ ತನ್ನ ಸ್ಥಿರ ಬೆಳವಣಿಗೆ ಕಾಯ್ದಿರಿಸಿ ಜಾಗತಿಕ ಹಣದುಬ್ಬರದ ನಡುವೆಯೂ ಅಭಿವೃದ್ಧಿ ಕಂಡಿರುವುದು ಅಭಿನಂದನೀಯ. ಆಧುನಿಕ ಬ್ಯಾಂಕಿಂಗ್‌ ಸ್ಪರ್ಧೆಯಲ್ಲೂ ಬ್ಯಾಂಕ್‌ ಮುನ್ನಡೆ ಸಾಧಿಸುತ್ತಿರುವುದಕ್ಕೆ ಗ್ರಾಹಕರ ಅನನ್ಯ ಸಹಯೋಗವೇ ಕಾರಣ. ವೃತ್ತಿಪರ ಆಡಳಿತ, ಆರ್ಥಿಕ ತಳಹದಿ ಮತ್ತು ಆಧುನಿಕ ತಂತ್ರಜ್ಞಾನದಿಂದ ಬ್ಯಾಂಕ್‌ ನಿರಂತರ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಬ್ಯಾಂಕ್‌ಗೆ ಲಭಿಸಿರುವ ಸರ್ವೋತ್ಕೃಷ್ಟ ಬ್ಯಾಂಕ್‌ ಪುರಸ್ಕಾರಗಳೇ ಸಾಕ್ಷಿ. ಬ್ಯಾಂಕ್‌ ಮಂಡಳಿ, ಸಿಬಂದಿ ವೃಂದ ಹಾಗೂ ಗ್ರಾಹಕರ ಸಹಯೋಗದೊಂದಿಗೆ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅನುಪಮ ಸೇವೆ ನೀಡಿದ ತೃಪ್ತಿ ನಮಗಿದೆ ಎಂದು ಮೋಡೆಲ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬುÉÂ. ಡಿ’ಸೋಜಾ ತಿಳಿಸಿದರು.

ಸೆ. 16ರಂದು ಮಾಹಿಮ್‌ ಪಶ್ಚಿಮದ ಸೈಂಟ್‌ ಕ್ಸೇವಿಯರ್ ಎಂಜಿನಿಯರಿಂಗ್‌ ಕಾಲೇಜು ಸಭಾಗೃಹದಲ್ಲಿ ನಡೆದ ಮೋಡೆಲ್‌ ಕೋ ಆಪರೇಟಿವ್‌ ಬ್ಯಾಂಕಿನ ಬ್ಯಾಂಕ್‌ನ 100ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗತ ಕ್ಯಾಲೆಂಡರ್‌ ಸಾಲಿನಲ್ಲಿ ಸುಮಾರು 878.53 ಕೋ. ರೂ. ಗಳ ಭದ್ರತಾ ಠೇವಣಿ ಹೊಂದಿದ್ದು, 472.82 ಕೋ. ರೂ. ಗಳ  ಮುಂಗಡ ಠೇವಣಿ, 94.10 ಕೋ. ರೂ. ಗಳ  ಸಾಂದ್ರ ಆದಾಯ ಹಾಗೂ ಸುಮಾರು 12.52 ಕೋ. ರೂ. ಗಳ ನಿವ್ವಳ ಲಾಭದೊಂದಿಗೆ ಸುಮಾರು 8.25 ಕೋ. ರೂ. ಗಳ ನೆಟ್‌ ಪ್ರಾಫಿಟ್‌ ಪಿಎಟಿಯನ್ನು ಬ್ಯಾಂಕ್‌  ಹೊಂದಿದೆ ಎಂದು ವಾರ್ಷಿಕ ಚಟುವಟಿಕೆಗಳನ್ನು ವಿವರಿಸಿದ  ಡಿ’ಸೋಜಾ ಅವರು ಶೇ. 10ರಷ್ಟು ಡಿವಿಡೆಂಡ್‌ ಘೋಷಿಸಿದರು.

ಮಹಾಸಭೆಯ ಆದಿಯಲ್ಲಿ ಮುಂಬಯಿ ಧರ್ಮಪ್ರಾಂತ್ಯದ ಬಿಷಪ್‌ ಅ| ವಂ| ಬಥೊìಲ್‌ ಬಾರೆಟ್ಟೊ ಅಭಿವಂದನ ದಿವ್ಯಪೂಜೆ ನೆರವೇರಿಸಿ ಅನುಗ್ರಹಿಸಿ, ಹಣಕಾಸು ವಲಯಲ್ಲಿ ಶೀಘ್ರಗತಿಯಾಗಿ ಮುನ್ನಡೆಯುತ್ತಿರುವ ಮೋಡೆಲ್‌ ಬ್ಯಾಂಕ್‌ನ ಶತಕಾಲದ ಸೇವೆ ಅಭಿನಂದನೀಯ.  ಹಲವಾರು ಜನರ  ಉದ್ಯಮಗಳಿಗೆ ಸ್ಪಂದಿಸಿ ಸ್ವಉದ್ಯಮಿಗಳಾಗಿ ಬೆಳೆಸಿ ಸಾಧಕಸೇವೆ ಈ ಬ್ಯಾಂಕ್‌ಗೆ ಸಲ್ಲುತ್ತಿದೆ. ಬ್ಯಾಂಕ್‌ ಇನ್ನಷ್ಟು ಪ್ರಗತಿಪಥದತ್ತ ಮುನ್ನಡೆಯಲು ಗ್ರಾಹಕರ ಯೋಗದಾನ ಅವಶ್ಯಕವಿದೆ. ತಮ್ಮೆಲ್ಲರ ಸಹಕಾರದಿಂದ ಬ್ಯಾಂಕ್‌ ಮತ್ತಷ್ಟು ಉತ್ತರೋತ್ತರವಾಗಿ ಬೆಳೆದು ಸಾಧನಾಶೀಲ ಬ್ಯಾಂಕ್‌ ಎನಿಸಲಿ    ಎಂದರು.

ಜೋನ್‌ ಜಿ.ಮೆಂಡೋನ್ಸಾ ಪೂಜೆಗೆ ಸಹಕರಿಸಿದರು. ಕೆನೆಥ್‌ ಸಿಕ್ವೇರಾ ಮತ್ತು ಬಳಗ ಭಕ್ತಿಗೀತೆಗಳನ್ನು ಹಾಡಿದರು.  ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿ’ಸಿಲ್ವಾ ಅವರು ಮಾತನಾಡಿ, ಮೋಡೆಲ್‌ ಬ್ಯಾಂಕ್‌ನ ದೀರ್ಘಾವಧಿಯ ಸೇವೆ ಅನುಪಮ. ಬ್ಯಾಂಕ್‌ನ ಮುನ್ನಡೆಯಲ್ಲಿ ಪೂರ್ವಜರ ದೂರದೃಷ್ಟಿತ್ವ, ಮುಂದಾಲೋಚನೆ, ಅನಿಯಮಿತ ಶ್ರಮವೇ ಬ್ಯಾಂಕ್‌ ಇಷ್ಟೊಂದು ಮುನ್ನಡೆಗೆ ಸಾಧ್ಯವಾಗಿದೆ. ಸರ್ವರನ್ನೂ ಸಮಾನರಾಗಿ ಕಾಣುವ ಕ್ರೈಸ್ತರು ಭೇದ-ಭಾವವಿಲ್ಲದೆ ಶ್ರಮಿಸುವ ಬಂಧುಗಳ ಸೇವೆ ಸರ್ವರಿಗೂ ಮಾದರಿ. ಮುಂದೆಯೂ ವಿಶ್ವಾಸನೀಯ ಸೇವೆಯೊಂದಿಗೆ ರಾಷ್ಟ್ರದ ಸಹಕಾರಿ ರಂಗದ ಅಗ್ರಗಣ್ಯ ಪಂಕ್ತಿಯಲ್ಲಿ ಮೆರೆಯಲಿ ಎಂದು ನುಡಿದರು.

ವೇದಿಕೆಯಲ್ಲಿ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಪೌಲ್‌ ನಝರೆತ್‌, ಸಂಜಯ್‌ ಶಿಂಧೆ, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿಸಿಲ್ವಾ, ಜೆರಾಲ್ಡ್‌ ಕಾಡೋìಜಾ, ಅಬ್ರಹಾಂ ಕ್ಲೇಮೆಂಟ್‌ ಲೊಬೋ, ಲಾರೆನ್ಸ್‌ ಡಿಸೋಜಾ, ನ್ಯಾಯವಾದಿ ಪಿಯುಸ್‌ ವಾಸ್‌, ಆ್ಯನ್ಸಿ ಡಿಸೋಜಾ, ಬ್ಯಾಂಕಿನ ಮಹಾ ಪ್ರಬಂಧಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಲಿಯಂ ಎಲ್‌.ಡಿಸೋಜಾ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ವಿನ್ಸೆಂಟ್‌ ಮಥಾಯಸ್‌,  ತೋಮಸ್‌ ಡಿ.ಲೋಬೊ ಸಂದಭೊìàಚಿತವಾಗಿ ಮಾತನಾಡಿ ಬ್ಯಾಂಕ್‌ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಬ್ಯಾಂಕ್‌ನ ಹೆಚ್ಚುವರಿ ಪ್ರಧಾನ ಪ್ರಬಂಧ‌ಕ ಹರೋಲ್ಡ್‌ ಎಂ. ಸೆರಾವೋ, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಶೇರುದಾರರು, ಹಿತೈಷಿಗಳು ಉಪಸ್ಥಿತರಿದ್ದರು. ಶೇರುದಾರರ ಪರವಾಗಿ ಸದಸ್ಯರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಬ್ಯಾಂಕ್‌ನ ಮಹಾ ಪ್ರಬಂಧಕ ಮತ್ತು ಸಿಇಒ ವಿಲಿಯಂ ಎಲ್‌.ಡಿಸೋಜಾ ಸೂಚನಾ ಪತ್ರಗಳನ್ನು ಹಾಗೂ ಸಭೆಯ ನಿರ್ಣಯಗಳ ಸಾರಾಂಶ ತಿಳಿಸಿದರು. ಸಭೆಯ ಆದಿಯಲ್ಲಿ ಗತ ಸಾಲಿನಲ್ಲಿ ಸ್ವರ್ಗಸ್ಥ ಬ್ಯಾಂಕ್‌ ಸದಸ್ಯರ ಹಾಗೂ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಡ್ವರ್ಡ್‌ ರಾಸ್ಕಿನ್ಹಾ ಕಾರ್ಯಕ್ರಮ ನಿರ್ವಹಿಸಿದರು. ವಿಲಿಯಂ ಸಿಕ್ವೇರ ವಂದಿಸಿದರು.  

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.