ಕೈಲು ಮುಹೂರ್ತ; ಕೊಡಗಿನ ರಕ್ಷಣೆ ಎಲ್ಲರ ಹೊಣೆ: ವೀಣಾ
Team Udayavani, Sep 19, 2017, 5:45 PM IST
ಮಡಿಕೇರಿ: ಕೊಡವರು ತಮ್ಮ ಜಮೀನನ್ನು ಇತರರಿಗೆ ಮಾರಾಟ ಮಾಡುವ ಬದಲು ಕೊಡಗಿನ ಮೂಲ ನಿವಾಸಿ ಕೊಡವರಿಗೆ ಮಾರಾಟ ಮಾಡುವ ಮೂಲಕ ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳ ಬೇಕೆಂದು ವಿಧಾನ ಪರಿಷತ್ತು ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ ಕರೆ ನೀಡಿದ್ದಾರೆ.
ನಗರದ ಕೊಡವ ಸಮಾಜದಲ್ಲಿ ನಡೆದ ಕೈಲು ಮುಹೂರ್ತ ಹಬ್ಟಾಚರಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಮಾಜದ ಹಿರಿಯರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ಬಿಟ್ಟು ಹೊರಗೆ ನೆಲೆಸಿರುವ ಕೊಡವರುಮತ್ತೆ ತವರು ಜಿಲ್ಲೆ ಕೊಡಗಿಗೆ ಆಗಮಿಸಿ ನೆಲೆಸುವಂತಾಗಬೇಕು. ಆ ಮೂಲಕ ಕೊಡಗನ್ನು ಕೊಡಗಾಗಿಯೇ ಉಳಿಸಲು ಪ್ರತಿ ಯೊಬ್ಬ ಕೊಡವ ಜನಾಂಗದವರು ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.
ಉದ್ಯೋಗ, ಶಿಕ್ಷಣ ಮತ್ತು ಜೀವನ ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಂದ ಬಹುತೇಕ ಕೊಡವರು ಇಂದು ಹೊರ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಕೊಡವರು ಕೊಡಗಿನಲ್ಲಿಯೇ ನೆಲೆಗೊಳ್ಳುವಂತಾದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಸಮಾಜದಿಂದ ಕೊಡವ ಸಮಾಜದ ನೂತನ ಕಟ್ಟಡ, ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಕೆಲಸಗಳಿಗೆ ಸರಕಾರದಿಂದ ಅನುದಾನ ಕೇಳಲು ಮುಖ್ಯಮಂತ್ರಿಗಳ ಬಳಿ ಸಮಾಜದ ನಿಯೋಗವನ್ನು ಕರೆದೊಯ್ಯುವುದಾಗಿ ಮತ್ತು ವಿಧಾನ ಪರಿಷತ್ತು ನಿಧಿಯಿಂದ 10 ಲಕ್ಷ ರೂ. ಅನುದಾನವನ್ನು ನೀಡು ವುದಾಗಿಯೂ ಭರವಸೆ ನೀಡಿದರು.
ಜಿಲ್ಲೆಯಲ್ಲಿರುವ ಉಳಿದ ಜನಾಂಗದವರನ್ನು ದ್ವೇಷಿಸದೆ ಪರಸ್ಪರ ಅನ್ಯೋನ್ಯವಾಗಿದ್ದುಕೊಂಡು ನಮ್ಮ ಜನಾಂಗದ ಗೌರವವನ್ನು ಉಳಿಸಿಕೊಳ್ಳಬೇಕೆಂದು ವೀಣಾ ಅಚ್ಚಯ್ಯ ಹೇಳಿದರು.
ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗಿನಲ್ಲಿ ಜನಸಂಖ್ಯೆ ಕಡಿಮೆ ಇದ್ದುದರಿಂದಲೇ ಹಿಂದೆ ಇದ್ದ ಮೂರು ವಿಧಾನಸಭಾ ಕ್ಷೇತ್ರದ ಸಂಖ್ಯೆ ಇಂದು ಎರಡಾಗಿದೆ. ಹೀಗಾಗಿ ಸರಕಾರದಿಂದ ಬರುವ ಅನುದಾನವೂ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕೊಡವರಲ್ಲಿ ಪರಸ್ಪರ ಒಗ್ಗಟ್ಟು ಕಡಿಮೆಯಾಗುತ್ತಿದೆ. ನಮ್ಮಲ್ಲಿರುವ ಈ ಒಡಕನ್ನು ನಿಯಂತ್ರಿಸಲು ನಾವೇ ಪ್ರಯತ್ನಿಸಬೇಕು ಹಾಗೂ ಸಮಾಜದಲ್ಲಿರುವ ಬಡ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸುವಂತಹ ಕಾರ್ಯವನ್ನು ಸಮಾಜದ ವತಿ ಯಿಂದ ನಡೆಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಇಂದು ಬಹುತೇಕ ಮಂದಿ ಕೊಡಗಿನಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟ ಮಾಡಿ, ಹೊರ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ನೆಲೆಸುತ್ತಿರುವುದು ಆತಂಕಕಾರಿಯಾಗಿದೆ. ಆಸ್ತಿಯನ್ನು ಮಾರಾಟ ಮಾಡಬೇಕು ಎಂದಾದದಲ್ಲಿ ಅದನ್ನು ಕೊಡಗಿನವರಿಗೆ ಮಾರಾಟ ಮಾಡಿ ಎಂದು ಸುನಿಲ್ ಸುಬ್ರಮಣಿ ಮನವಿ ಮಾಡಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೊಂಗಂಡ ಎಸ್. ದೇವಯ್ಯ ಮಾತನಾಡಿ, ಕೊಡಗಿನಲ್ಲಿ ಮೊದಲು ಆರಂಭವಾದ ಕೊಡವ ಸಮಾಜ ಎಂಬ ಹೆಮ್ಮೆಯಿದೆ, ಈ ಸಮಾಜಕ್ಕೆ ಹಿರಿಯ ಣ್ಣನ ಸ್ಥಾನಮಾನವಿದೆ ಎಂದರು.
ಆದರೆ ಸಮಾಜದ ಅಭಿವೃ ದ್ಧಿಯ ಹಾದಿಯಲ್ಲಿ ಹಲವು ಅಡೆತಡೆಗಳು ಎದುರಾಗಿದೆ. ಇವುಗಳನ್ನೆಲ್ಲ ಎದುರಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜ ಬಾಂಧವರ ನೆರವು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮ್ಮಾನ ಕಾರ್ಯಕ್ರಮ
ಅಂತಾರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರ ಪಾಡೆಯಂಡ ಚರ್ಮಣ್ಣ, ರಾಷ್ಟ್ರಮಟ್ಟದ ಷಟ್ಲ ಬ್ಯಾಡ್ಮಿಂ ಟನ್ ಪಟು ಪೆಮ್ಮಡಿಯಂಡ ಪಾಯಲ್ ಕಾವೇರಮ್ಮ, ಎನ್.ಸಿ.ಸಿ.ಯಲ್ಲಿ ರಾಜ್ಯ ರಾಷ್ಟ್ರ ಮಟ್ಟಲ್ಲಿ ಸಾಧನೆಗೈದ ಪುತ್ತೆರಿರ ನಂಜಪ್ಪ ಇವರುಗಳನ್ನು ಇದೇ ಸಂದರ್ಭ ಸಮ್ಮಾನಿಸಿ ಗೌರವಿಸಲಾಯಿತು.
ಕ್ರೀಡಾಕೂಟ
ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕೊಡವ ಸಮಾಜದ ಪದಾಧಿಕಾರಿಗಳು, ಪುರುಷ ಹಾಗೂ ಮಹಿಳಾ ಸದಸ್ಯರು, ಮಕ್ಕಳು ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ತೆಂಗೆ ಪೋರ್, ತಲೆ ಮೇಲೆ ಪುಸ್ತಕವಿಟ್ಟು ಓಟ, ಮಕ್ಕಳು ಚೆಕ್ಕುಲಿಗೆ ನೆಗೆದು ತಿನ್ನುವ ಸ್ಪರ್ಧೆ, ತೆಂದಿನ ಕಾಯಿಗೆ ಚೆಂಡು ಎಸೆಯುವ, ಬಾಟಿÉಗೆ ರಿಂಗ್ ಎಸೆಯುವ, ಬಲೂನ್ ಒಡೆಯುವ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಯಲ್ಲಿ ಪಾಲ್ಗೊಂಡು, ಸಂತೋಷ ಕೂಟಕ್ಕೆ ಹೆಚ್ಚಿನ ಮೆರುಗನ್ನುನೀಡಿದರು.
ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣ ವಟ್ಟೀರ ಚಿಣ್ಣಪ್ಪ ಸ್ವಾಗತಿಸಿದರು, ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಅರೆಯಡ ಪಿ.ರಮೇಶ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಕೊಡವ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕ್ರೀಡಾಕೂಟದ ವಿಜೇತರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಬಡುವಂಡ ಮುತ್ತಪ್ಪ (ಪ್ರ), ಪೊನ್ನಚೆಟ್ಟಿರ ಸುರೇಶ್ ಸುಬ್ಬಯ್ಯ (ದ್ವಿ), ಮಹಿಳೆಯರ ವಿಭಾಗದಲ್ಲಿ ಪೆಮ್ಮುಡಿಯಂಡ ಪಾಯಲ್(ಪ್ರ), ಮೂವೇರ ವಸಂತಿ ಜಯರಾಂ(ದ್ವಿ). ಪುರುಷರಲ್ಲಿ 60 ವರ್ಷ ವಯಸ್ಸಿನವರಿಗೆ ಪುಸ್ತಕವನ್ನು ತಲೆಮೇಲಿಟ್ಟು ಓಡುವ ಸ್ಪರ್ಧೆಯಲ್ಲಿ ಚಂಡಿರ ಸುಬ್ಬಯ್ಯ (ಪ್ರ), ಮೇದುರ ರವಿ ಕಾವೇರಪ್ಪ(ದ್ವಿ), ಕುಪ್ಪಿಗೆ ರಿಂಗ್ ಹಾಕುವ ಸ್ಪರ್ಧೆಯಲ್ಲಿ ನೆರವಂಡ ತುಳಸಿ(ಪ್ರ), ಬಲ್ಯಮಂಡ ಮುತ್ತಮ್ಮ(ದ್ವಿ), ಜಿಗಿದು ಚಕ್ಕುಲಿ ತಿನ್ನುವ ಸ್ಪರ್ಧೆಯಲ್ಲಿ 7ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ) ಪೆಮ್ಮಚಂಡ ಪೂರ್ಣ(ಪ್ರ), ಬೊಳ್ಳಾಜಿರ ದೇಚಮ್ಮ ಮತ್ತು ಮಾಚಿಮಂಡ ಧನ್ವಿ(ದ್ವಿ), ತೆಂಗಿನ ಕಾಯಿಗೆ ಚೆಂಡು ಎಸೆಯುವ ಸ್ಪರ್ಧೆ(10ನೇ ತರಗತಿಯೊಳಗಿನ ಬಾಲಕರ ವಿಭಾಗದಲ್ಲಿ) ತಾಪಂಡ ಹರ್ಷಿತ್ ಪೊನ್ನಪ್ಪ, (10ನೇ ತರಗತಿಯೊಳಗಿನ ಬಾಲಕಿಯರ ವಿಭಾಗದಲ್ಲಿ) ಅಯ್ಯಂಡ ವಿದಿತ್, ಪೆಮ್ಮಂಡ ಪುಣ್ಯ (ಪ್ರ) ಸ್ಥಾನ ಗಳಿಸಿದರು.
ಕಾಲೇಜ್ ಮತ್ತು ಸಾರ್ವಜನಿಕರ ವಿಭಾಗದಲ್ಲಿ ತೊತ್ತಿಯಂಡ ಸುಮಿ ಗಣೇಶ್ ಮತ್ತು ಬಲ್ಯಂಡ ಪೊನ್ನಪ್ಪ(ಪ್ರ), ತೆಂಗೆಪೋರ್ ಸ್ಪರ್ಧೆಯಲ್ಲಿ (10ನೇ ತರಗತಿಯೊಳ ಗಿನ ಬಾಲಕರ ವಿಭಾಗದಲ್ಲಿ) ತಾಪಂಡ ಲಿಕಿತ್ ಅಯ್ಯಪ್ಪ (ಪ್ರ), ಚಿಕ್ಕ ಮಕ್ಕಳ ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಬೊಳ್ಳಾಜಿರ ಬೋಪಣ್ಣ ಅಯ್ಯಪ್ಪ (ಪ್ರ), ತಾಪಂಡ ಹರ್ಷಿತ್ ಪೊನ್ನಪ್ಪ (ದ್ವಿ) ಸ್ಥಾನ ಗಳಿಸಿದರು.
ಹಿರಿಯ ನಾಗರಿಕ ಪುರುಷರಿಗೆ ಕಾಯಿನ್ಸ್‌ನು° ನೀರಿನಿಂದ ತೆಗೆಯುವ ಸ್ಪರ್ಧೆಯಲ್ಲಿ ಕೊರವಂಡ ದೇಚಮ್ಮ ಬೋಪಣ್ಣ(ಪ್ರ), ಪುರುಷರ ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಸಣ್ಣುವಂಡ ಅಯ್ಯಣ್ಣ (ಪ್ರ), ಚಾಮೆರ ಚೀಯಣ° (ದ್ವಿ) ಮಹಿಳಾ ವಿಭಾಗದಲ್ಲಿ ಕುಂಡ್ಯೋಳಂಡ ಬೋಜಮ್ಮ (ಪ್ರ), ಮೂವೇರ ರಾಣಿ ಸುಬ್ಬಯ್ಯ (ದ್ವಿ) ವಾಲಗಾರರ ಓಟದಲ್ಲಿ ರಾಜಮಣಿ (ಪ್ರ),ಮೋಹನ (ದ್ವಿ) ಹಾಗೂ ಜವರ (ತೃ) ಸ್ಥಾನ ಗಳಿಸಿದರು. ಬಹುಮಾನಗಳನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ವಿಜೇತರರಿಗೆ ವಿತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.