ಕುರಿಗಳಿಗೆ ಸೊಳ್ಳೆ ಪರದೆಯ ಹೊದಿಕೆ !
Team Udayavani, Sep 20, 2017, 10:49 AM IST
ಹೊಸಪೇಟೆ: ಪ್ರಾಣಿಗಳನ್ನು ಸೊಳ್ಳೆ ಕಾಟದಿಂದ ತಪ್ಪಿಸಲು ಕೂಡಾ ಸೊಳ್ಳೆ ಪರದೆ ಕೂಡಾ ಬಳಕೆ ಮಾಡಲಾಗುತ್ತಿದ್ದು, ಕುರಿಗಾಹಿಗಳು ತಮ್ಮ ಕುರಿಗಳನ್ನು ಸೊಳ್ಳೆಯ ಕಾಟದಿಂದ ತಪ್ಪಿಸಲು ಸೊಳ್ಳೆ ಪರದೆ ಬಳಕೆ ಮಾಡುವ ಪದ್ಧತಿ ಆರಂಭಿಸಿದ್ದಾರೆ.
ಹಂಪಿ ಪ್ರದೇಶದ ಅಕ್ಕ-ತಂಗಿಯರ ಗುಂಡಿನ ಬಳಿ ಬೀಡು ಬಿಟ್ಟಿರುವ ಕುರಿಗಾಹಿಗಳು, ಸಾವಿರಾರು ರೂಪಾಯಿ ಖರ್ಚು
ಮಾಡಿ ಕುರಿಗಳಿಗೆ ಸೊಳ್ಳೆ ಪರದೆ ನಿರ್ಮಿಸಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ವಲಸೆ ಬಂದು ಹಂಪಿ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕುರಿಗಾಹಿ ಕುಟಂಬಗಳು ಪರದೆ ಬಳಕೆ ಮಾಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ತಮ್ಮೊಂದಿಗೆ ಹಗಲಿರುಳು ಜೀವಿಸುತ್ತಿರುವ ಕುರಿಗಳಿಗೆ ಈ ವರ್ಷ ವಿಪರೀತ ಸೊಳ್ಳೆ ಕಾಟವಿದೆ ಎಂಬುದನ್ನು ಅರಿತ ಶಂಕರ, ಲಕ್ಷ್ಮಣ ಹಾಗೂ ಸಹದೇವ ಎಂಬುವರು ಸಾವಿರಾರು ರೂಪಾಯಿ ಖರ್ಚು ಮಾಡಿ ಸೊಳ್ಳೆ ಪರದೆ ನಿರ್ಮಿಸಿದ್ದಾರೆ.
ಸೊಳ್ಳೆ ಕಾಟದಿಂದ ರಾತ್ರಿ ಇಡೀ ನಿದ್ರೆಯಿಲ್ಲದೇ ಕುರಿಗಳು ದಿಕ್ಕುತಪ್ಪಿ ನಡೆದಾಡುತ್ತವೆ. ನಡೆದಾಡಲು ಪರದಾಡುತ್ತಿದ್ದವು.
ಮೊದಲು ನಮಗೆ ಅರಿವಿಗೆ ಬಂದಿರಲಿಲ್ಲ. ಮೈ ತುಂಬ ಕೂದಲು ಇರುವ ಕುರಿಗಳಿಗೆ ಸೊಳ್ಳೆ ಕಚ್ಚಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇವು. ಹಿರಿಯರ ಸಲಹೆಯಂತೆ ಪ್ರಥಮ ಬಾರಿಗೆ ಕುರಿಗಳಿಗೆ ಸೊಳ್ಳೆ ಪದರೆಯನ್ನು ನಿರ್ಮಿಸಿದ್ದೇವೆ. ಇದರಿಂದ ಅವು ಯಾವುದೇ ಸದ್ದು ಇಲ್ಲದಂತೆ ರಾತ್ರಿ ನಿದ್ರೆ ಮಾಡುತ್ತವೆ. ಇಲ್ಲಿ ಮಾತ್ರವಲ್ಲ ಜಿಲ್ಲಾದ್ಯಂತ ಸಂಚಾರಿ ಕುರಿಗಾಹಿಗಳು ಸೊಳ್ಳೆ ಪರದೆಯಿಂದ ತಮ್ಮ ಕುರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
ಕುರಿಗಳ ಫೋಷಣೆಗೆ ಹಾಗೂ ಅಲೆದಾಡುವ ನಮಗೆ ಈ ವರ್ಷ ಸೊಳ್ಳೆಗಳ ಕಾಟಕ್ಕೆ ಕುರಿಗಳು ಪರದಾಡುತ್ತಿವೆ. ಕುರಿಗಳಿಗೆ ಸೊಳ್ಳೆ ಪರದೆ ಮೂಲಕ ಅವುಗಳಿಗೆ ರಕ್ಷಣೆ ನೀಡಿದ್ದು, ಸೊಳ್ಳೆ ಪರದೆಯೊಳಗೆ ಸುಖವಾಗಿ ಕುರಿಗಳು ನಿದ್ರೆ ಮಾಡುತ್ತಿವೆ.
ಶಂಕರ,ಕುರಿಗಾಹಿ.
ನಮ್ಮ ದೇಶದಲ್ಲಿ ಸೊಳ್ಳೆ ಕಡಿತದಿಂದ ಕುರಿಗಳಿಗೆ ಯಾವುದೇ ಕಾಯಿಲೆ ಬರುವುದಿಲ್ಲ. ಕುರುಡು ನೊಣದಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಕಾಟದಿಂದ ಕುರಿಗಳಿಗೆ ರಾತ್ರಿ ನಿದ್ರೆ ಇಲ್ಲದಂತಾಗಿ ನಿಶಕ್ತಿ ಹೊಂದಬಹುದು. ಸೊಳ್ಳೆ ಪರದೆ ನಿರ್ಮಾಣ ಮಾಡುವುದರಿಂದ ವಿಷ ಜಂತುಗಳ ಹಾವಳಿ ಹಾಗೂ ಕಾಡು ಪ್ರಾಣಿಗಳ ಹಾವಳಿ ಸ್ವಲ್ಪ ಮಟ್ಟಿಗೆ ತಡೆಯಬಹುದು.
ಡಾ| ಬಸವರಾಜ ಬೆಣ್ಣಿ,
ಸಹಾಯಕ ನಿದೇರ್ಶಕರು, ಪಶು ಸಂಗೋಪನಾ ಇಲಾಖೆ.
ಪಿ.ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.