ಜಗಳವಾಡಿ ಮನೆ ಬಿಟ್ಟವಳು 2 ವರ್ಷದ ನಂತ್ರ ಊರು ಸೇರಿದಳು

Team Udayavani, Sep 20, 2017, 11:20 AM IST

20-Chikamangaluru-1.jpg

ಎನ್‌.ಆರ್‌.ಪುರ: ಮನೆಯಲ್ಲಿ ಜಗಳ ಮಾಡಿಕೊಂಡು ಕಳೆದ ಎರಡೂವರೆ ವರ್ಷದ ಹಿಂದೆ ಊರು ತೊರೆದಿದ್ದ ಮಹಿಳೆಯೊಬ್ಬರು ಕೊನೆಗೂ ಮರಳಿ ತನ್ನ ಮನೆ ಸೇರಿದ್ದಾರೆ.

ತಮಿಳುನಾಡು ಮೂಲದ ಸೆಲ್ವಿ ವೆಂಕಟೇಶ್‌ ಕಳೆದ 15 ದಿನದ ಹಿಂದೆ ಎನ್‌.ಆರ್‌.ಪುರಕ್ಕೆ ಬಂದಿದ್ದು ಸೋಮವಾರ ಇವರನ್ನು ಸಂಬಂಧಿಕರ ಸುಪರ್ದಿಗೆ ನೀಡಲಾಯಿತು.

ತಮಿಳುನಾಡಿನ ಕಡಲೂರು ಜಿಲ್ಲೆ ವಿರುವಾಚಲಂ ತಾಲೂಕಿನ ನೈವೇಟಿಯ ಸೆಲ್ವಿ ಮನೆಯಲ್ಲಿ ಜಗಳವಾಡಿ ಊರು ಬಿಟ್ಟು ಬಂದಿದ್ದರು. ಬರಿ ಕಾಲಿನಲ್ಲಿ ಊರಿಂದ ನಡೆಯುತ್ತ ಹೊರಟ ಈಕೆ ಕರ್ನಾಟಕದ ಕೆಲವು ಭಾಗಗಳಲ್ಲಿ ಸುತ್ತಾಡಿದ್ದಾಳೆ. ಯಾರ ಬಳಿಯೂ ಹಣ ಕೇಳದೆ, ಹಸಿದಾಗ ಊಟ ಕೇಳುತ್ತಾ,ಸುಮಾರು 680 ಕಿ.ಮೀ ದೂರ ನಡೆದ ಈಕೆ ಕಳೆದ 15 ದಿನದ ಹಿಂದೆ ಎನ್‌.ಆರ್‌. ಪುರಕ್ಕೆ ಬಂದು ಇಲ್ಲಿಯೇ ಉಳಿದಿದ್ದರು.

ಈ ಮಹಿಳೆಯನ್ನು ಗಮನಿಸಿದ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ, ಭಾರತೀಯ ಮಾನವ ಹಕ್ಕು ಸಂರಕ್ಷಣಾ ಸದಸ್ಯರು ಮತ್ತಿಮರದ ಅನಾಥಶ್ರಮಕ್ಕೆ ಸೇರಿಸಲು ಮುಂದಾಗಿದ್ದಾರೆ. ಆಗ ಈಕೆ ಮನೆ ಬಿಟ್ಟು ಬಂದಿದ್ದು ವಾಪಸ್‌ ಊರಿಗೆ ತೆರಳಲು ಆಗದ ಸ್ಥಿತಿಯ ಬಗ್ಗೆ ವಿವರಿಸಿದ್ದಾಳೆ.

ಈ ಮಹಿಳೆಯನ್ನು ಅವರ ಮನೆಗೆ ಸೇರಿಸುವ ನಿರ್ಧಾರ ಕೈಗೊಂಡ ಸಂಘಟನೆಗಳ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.ಮಾನವ ಹಕ್ಕು ಸಂರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷೆ ಜುಬೇದಾ ಮನೆ ತೊರೆದು ಬಂದ ಮಹಿಳೆಯ ಫೋಟೋ ಹಾಗೂ ವಿವರವನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ನಲ್ಲಿ ಪ್ರಕಟಿಸಿದ್ದರು. ತಮಿಳುನಾಡಿನಲ್ಲಿರುವ
ಜುಬೇದಾರವರ ಸ್ನೇಹಿತರು ಇದನ್ನು ನೋಡಿ ಮಹಿಳೆಯ ಊರನ್ನು ಪತ್ತೆಹಚ್ಚಿ ಅವರ ಸಂಬಂಧಿಕರಿಗೆ ನಡೆದಿರುವ ವಿಚಾರ ತಿಳಿಸಿದ್ದಾರೆ.

ಅದರಂತೆ ಸೆಲ್ವಿ ಅವರ ಸಂಬಂಧಿಕರು ಸೋಮವಾರ ಎನ್‌.ಆರ್‌.ಪುರಕ್ಕೆ ಆಗಮಿಸಿ ತಮ್ಮೊಂದಿಗೆ ಕರೆದುಕೊಂಡು ಊರಿಗೆ ತೆರಳಿದ್ದಾರೆ. 12 ದಿನಗಳ ಕಾಲ ಸೆಲ್ವಿಯ ಲಾಲನೆ ಪೋಷಣೆ ಮಾಡಿದ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆಯ
ತಾಲೂಕು ಅಧ್ಯಕ್ಷ ಮತ್ತು ತಂಡದವರು, ಆಟೋ ಹರೀಶ್‌ ಮತ್ತು ಜುಬೇದಾರವರಿಗೆ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ. 12 ದಿನಗಳ ಕಾಲ ಆ ಅನಾಥ ಮಹಿಳೆಗೆ ಊಟ, ತಿಂಡಿ ವ್ಯವಸ್ಥೆ ಮಾಡಿಕೊಟ್ಟ ಪಿ.ಎಸ್‌.ಐ ರವಿ ನಿಡಗಟ್ಟರನ್ನುಧ್ರುವತಾರೆ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ದೇವರಾಜ್‌, ಆಯೋಗದ ಮಹಿಳಾ ಅಧ್ಯಕ್ಷೆ ಜುಬೇದಾ ಅಭಿನಂದಿಸಿದರು.

ಟಾಪ್ ನ್ಯೂಸ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.