ಲಂಕಾ: ನೂತನ ಕ್ರಿಕೆಟ್ ಆಯ್ಕೆ ಸಮಿತಿ
Team Udayavani, Sep 20, 2017, 12:03 PM IST
ಕೊಲಂಬೊ: ಶ್ರೀಲಂಕಾ ಕ್ರಿಕೆಟಿನ ನೂತನ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟಿಗ ಗ್ರೇಮ್ ಲಾಬ್ರೂಯ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಭಾರತದೆದುರಿನ ಕಳೆದ ತವರಿನ ಸರಣಿಯಲ್ಲಿ ಶ್ರೀಲಂಕಾ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಸನತ್ ಜಯಸೂರ್ಯ ನೇತೃತ್ವದ ಆಯ್ಕೆ ಸಮಿತಿ ರಾಜೀನಾಮೆ ಸಲ್ಲಿಸಿತ್ತು. ನೂತನ ಆಯ್ಕೆ ಸಮಿತಿಯ ಉಳಿದ ಸದಸ್ಯರೆಂದರೆ ಗಾಮಿನಿ ವಿಕ್ರಮ ಸಿಂಘೆ, ಜೆರಿಲ್ ವೂಟರ್, ಅಸಂಕಾ ಗುರುಸಿನ್ಹ ಮತ್ತು ಸಜಿತ್ ಫೆರ್ನಾಂಡೊ. ಇವರಲ್ಲಿ ಗುರುಸಿನ್ಹ ಶ್ರೀಲಂಕಾ ತಂಡದ ಮ್ಯಾನೇಜರ್ ಕೂಡ ಆಗಿದ್ದಾರೆ.
53ರ ಹರೆಯದ ಗ್ರೇಮ್ ಲಾಬ್ರೂಯ್ 1986-1992ರ ಅವಧಿಯಲ್ಲಿ ಶ್ರೀಲಂಕಾ ಪರ 9 ಟೆಸ್ಟ್ ಹಾಗೂ 44 ಏಕದಿನ ಪಂದ್ಯಗಳನ್ನಾಡಿದ್ದಾರೆ. ಮಧ್ಯಮ ವೇಗಿಯಾಗಿದ್ದ ಅವರು ಕ್ರಮವಾಗಿ 27 ಹಾಗೂ 45 ವಿಕೆಟ್ ಉರುಳಿಸಿದ್ದಾರೆ. “ನನಗೆ ಈ ಮೊದಲು 4 ಸಲ ಆಯ್ಕೆ ಸಮಿತಿ ಸೇರುವಂತೆ ಮಂಡಳಿ ಕೇಳಿಕೊಂಡಿತ್ತು. ಆದರೆ 4 ಸಲವೂ ನಾನು ಈ ಆಹ್ವಾನವನ್ನು ನಿರಾಕರಿಸಿದ್ದೆ. ಈ ಸಲ ಒಪ್ಪಿದೆ. ಯಾರಾದರೂ ಇದನ್ನು ನಿಭಾಯಿಸಬೇಕಿತ್ತು. ಈ ಅವಕಾಶ ನನ್ನದೇ ಆಗಲಿ ಎಂಬ ನಿರ್ಧಾರಕ್ಕೆ ಬಂದೆ’ ಎಂಬುದಾಗಿ ಲಾಬ್ರೂಯ್ ಪ್ರತಿಕ್ರಿಯಿಸಿದ್ದಾರೆ.
ಲಾಬ್ರೂಯ್ ಆಯ್ಕೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮೋಹನ್ ಡಿ’ಸಿಲ್ವ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.