ಐ ಸೇವರ್ನಲ್ಲಿ ರೆಟಿನೋಪತಿ ತಪಾಸಣೆ ಯಂತ್ರ
Team Udayavani, Sep 20, 2017, 12:29 PM IST
ಹುಬ್ಬಳ್ಳಿ: ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಣ್ಣಿನ ಒಳಪೊರೆ (ರೆಟಿನೋಪತಿ)ಪತ್ತೆ ಮಾಡುವ ಅತ್ಯಾಧುನಿಕ ಯಂತ್ರವನ್ನು ನಗರದ ಐ ಸೇವರ್ ನೇತ್ರ ತಪಾಸಣೆ ಹಾಗೂ ಕನ್ನಡಕ ಮಾರಾಟ ಮಳಿಗೆ ತರಿಸಿದ್ದು, ದಕ್ಷಿಣ ಭಾರತದಲ್ಲೇ ಈ ಸೌಲಭ್ಯ ಹೊಂದಿದ ಮೊದಲ ಸಂಸ್ಥೆಯಾಗಿದೆ.
ಜರ್ಮನ್‌ನ ಕಾರ್ಲ್ ಝೈಸ್ ಕಂಪನಿ ವಿಸೌಸ್‌ಕೌಟ್ ಎಂಬ ನೂತನ ಯಂತ್ರ ಆವಿಷ್ಕಾರಗೊಳಿಸಿದ್ದು, ಇಲ್ಲಿನ ದೇಶಪಾಂಡೆ ನಗರದ ಐ ಸೇವರ್ ಸಂಸ್ಥೆ ಈ ಯಂತ್ರವನ್ನು ಜನರ ಬಳಕೆಗಾಗಿ ಖರೀದಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಲ್ ಝೈಸ್ ಕಂಪೆನಿ ಅಧಿಕಾರಿ ಶ್ರೀನಿವಾಸನ್ ಪಾರ್ಥಸಾರಥಿ ಮಾತನಾಡಿ, ಕಾರ್ಲ್ ಝೈಸ್ ಕಂಪೆನಿ ಒಟ್ಟು ಆರು ವಿಭಾಗಗಳನ್ನು ಹೊಂದಿದೆ.
ಕ್ಯಾಮೆರಾಗಳಿಗೆ ಬಳಸುವ ಲೆನ್ಸ್, ಮೊಬೈಲ್, ಲ್ಯಾಪ್‌ಟಾಪ್‌ಗ್ಳಿಗೆ ಬಳಸುವ ಚಿಪ್‌ಗ್ಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಭಾರಿ ಯಶಸ್ಸು ಕಂಡ ಬಾಹುಬಲಿ ಸಿನಿಮಾದ ಚಿತ್ರೀಕರಣಕ್ಕೆ ನಮ್ಮ ಕಂಪೆನಿಯ ಲೆನ್ಸ್‌ಗಳನ್ನು ಬಳಸಲಾಗಿದೆ. ಅದೇ ರೀತಿ ನೇತ್ರ ತಪಾಸಣೆ ಸಲಕರಣೆಗಳನ್ನು ಕಂಪೆನಿ ತಯಾರಿಸುತ್ತಿದೆ ಎಂದು ತಿಳಿಸಿದರು.
ರೆಟಿನೋಪತಿ ತಪಾಸಣೆ ಯಂತ್ರ ಈಗಾಗಲೇ ಉತ್ತರ ಭಾರತದಲ್ಲಿ ನಾಲ್ಕು, ಪಶ್ಚಿಮದ ಭಾಗದಲ್ಲಿ ಎರಡು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಗೆ ನೀಡಿದ್ದೇವೆ. ಯಂತ್ರ 4.50ಲಕ್ಷ ರೂ. ವೆಚ್ಚದ್ದಾಗಿದ್ದು, ವಿವಿಧ ಪ್ಯಾಕೇಜ್‌ಗಳೊಂದಿಗೆ ಇದನ್ನು ನೀಡಲಾಗಿದೆ ಎಂದರು. ಐ ಸೇವರ್ನ ಸಿಇಒ ಕುನಾಲ್ ಶಾಹ ಮಾತನಾಡಿ, ದೇಶದಲ್ಲಿ ಸುಮಾರು 126 ಮಿಲಿಯನ್‌ನಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.
ಇದರಲ್ಲಿ ಸುಮಾರು 37 ಮಿಲಿಯನ್‌ನಷ್ಟು ಜನರು ದೃಷ್ಟಿ ನಷ್ಟದ ಅಪಾಯದಲ್ಲಿದ್ದಾರೆ. ರೆಟಿನೋಪತಿ ಗೊತ್ತಿಲ್ಲದ ರೀತಿಯಲ್ಲಿ ಅಪಾಯ ತಂದೊಡ್ಡುವುದಾಗಿದೆ. ನಿಯಮಿತ ನೇತ್ರ ತಪಾಸಣೆಯಿಂದ ಸಮಸ್ಯೆ ನಿವಾರಣೆ ಸಾಧ್ಯ. ದೇಶದಲ್ಲಿ ಸುಮಾರು 39 ಮಿಲಿಯನ್‌ನಷ್ಟು ಅಂಧರಿದ್ದು, ಇವರಲ್ಲಿ ಶೇ.80ರಷ್ಟು ಜನರಿಗೆ ಚಿಕಿತ್ಸೆ ಮೂಲಕ ದೃಷ್ಟಿ ನೀಡಬಹುದಾಗಿದೆ ಎಂದು ಹೇಳಿದರು. ಪ್ರಕಾಶ ಶಾಹ, ಮಂಜು, ಪ್ರಸನ್ನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.