ಬಿಸಿಗಾಳಿಯ ಫ್ಯಾನ್‌


Team Udayavani, Sep 20, 2017, 3:03 PM IST

20-Z-8.jpg

ಚಿಕ್ಕಮಕ್ಕಳಾಗಿದ್ದಾಗ ಚಡ್ಡಿ ದೋಸ್ತುಗಳ ಚಡ್ಡಿ ಜಾರಿದ ಹೊತ್ತಿನಲ್ಲಿ ಶೇಮ್‌ ಶೇಮ್‌ ಎಂದು ಕೇಕೆ ಹಾಕಿ ನಗುತ್ತಾ ಆಡಿಕೊಳ್ಳುತ್ತಿದ್ದೆವು. ವಿಪರ್ಯಾಸ ಏನು ಅಂದರೆ ಈ ಮಕ್ಕಳಾಟ ದೊಡ್ಡವರನ್ನೂ ಬಿಟ್ಟಿಲ್ಲ ಅನ್ನೋದು. ಈ ಶೇಮ್‌ ಮಾಡುವ ಪ್ರವೃತ್ತಿ ಆನ್‌ಲೈನಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೊಂದು ಹೆಸರೂ ಇದೆ - “ಬಾಡಿ ಶೇಮಿಂಗ್‌’. ಬಾಡಿ ಶೇಮಿಂಗಿಗೆ ಗಂಡು ಹೆಣ್ಣೆಂಬ ಭೇದ ಬಾವ ಇಲ್ಲವಾದರೂ ಇತ್ತೀಚಿನ ನಿದರ್ಶನಗಳನ್ನು ಗಮನಿಸಿದರೆ ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಿರುವವರು ಹೆಣ್ಮಕ್ಕಳೇ ಎನ್ನುವುದು ವಿದಿತ. ಬಟ್ಟೆ, ಮೈ ಬಣ್ಣ, ಬೆವರು, ಎಲ್ಲವೂ ಶೇಮಿಂಗಿನ ವಸ್ತುಗಳಾಗಿವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಒಂದೊಂದು ಇಮೇಜನ್ನು ಸಂಪಾದಿಸಿಕೊಂಡಿರುತ್ತಾರೆ. ಅದರ ಆಧಾರದ ಮೇಲೆಯೇ ಅಭಿಮಾನಿಗಳು ಅವರನ್ನು ಆರಾಧಿಸುತ್ತಿರುತ್ತಾರೆ. ಸ್ಥಾಪಿತ ಇಮೇಜಿಗೆ ಧಕ್ಕೆ ಒದಗಿದಾಗ ಅದೇ ಅಭಿಮಾನಿ ಆರಾಧ್ಯ ದೈವಕ್ಕೆ ವಿರುದ್ಧವಾಗಿ ತಿರುಗಿ ಬೀಳುತ್ತಾರೆ. ಈ ಕುರಿತಾದ ಕೆಲ ಕತೆಗಳು ಇಲ್ಲಿವೆ-

ಸನಾ ಜತೆ ಧರ್ಮಾಂಧರ ದಂಗಲ್‌!
ಅಪ್ಪನ ಕನಸನ್ನು ತನ್ನ ಕನಸಾಗಿಸಿಕೊಂಡು ಕುಸ್ತಿಯಲ್ಲಿ ಮೆಡಲ್‌ ಗೆಲ್ಲುವ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಫಾತಿಮಾ ಸನಾ ಶೇಖ್‌. “ದಂಗಲ್‌’ ಸಿನಿಮಾದ ಆ ಒಂದು ಪಾತ್ರದಿಂದ ಭಾರತೀಯರ ಮನೆ ಮಗಳಾಗಿಹೋಗಿದ್ದ ಫಾತಿಮಾಳನ್ನು ಈ ಒಂದು ವಿಷಯಕ್ಕೆ ಜನರು ಕ್ಷಮಿಸಲಿಲ್ಲ. ವಿಷಯ ಏನಪ್ಪಾ³ ಅಂದರೆ “ಥಗ್ಸ್‌ ಆಫ್ ಹಿಂದೂಸ್ತಾನ್‌’ ಹಿಂದಿ ಚಿತ್ರದ ಶೂಟಿಂಗ್‌ ಮಾಲ್ಡೀವ್ಸ್‌ನಲ್ಲಿ ನಡೆದಿತ್ತು. ಅಮಿತಾಭ್‌, ಆಮೀರ್‌ ಖಾನ್‌ ಜೊತೆಗೆ ಫಾತಿಮಾ ಕೂಡಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ವಿರಾಮದ ವೇಳೆ ಅಲ್ಲಿನ ಬೀಚ್‌ನಲ್ಲಿ ಅರೆಬರೆ ಸ್ವಿಮ್‌ಸೂಟ್‌ನಲ್ಲಿ ಫಾತಿಮಾ ತೆಗೆಸಿಕೊಂಡ ಫೋಟೋ ಕೆಲ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಯಿತು. ಅವಳ ಧರ್ಮಕ್ಕೆ ವಿರುದ್ಧವಾದ ಕೆಲಸವಿದು ಎಂದು ಕೆಲವರು ಬಗೆದರು. ಪವಿತ್ರ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಅನೇಕರಿಗೆ ಕ್ಷಮಿಸಲಾರದ ತಪ್ಪಾಗಿ ಕಂಡಿತ್ತು. ಆಮೇಲೆ ಸಿನಿಮಾದವರು ಆ ಫೋಟೋ 2 ತಿಂಗಳು ಹಿಂದೆ ತೆಗೆದಿದ್ದೆಂದು ಹೇಳಿದರೂ ಕಾಮೆಂಟುಗಳು ನಿಂತಿರಲಿಲ್ಲ.

ಮಿಥಾಲಿಯ ಬೋಲ್ಡ್‌ ಸೆಲ್ಫಿ!
ಮಹಿಳೆಯರ ವಿಶ್ವಕಪ್‌ ನಡೆದಿತ್ತು. ಮಹಿಳಾ ಕ್ರಿಕೆಟರ್‌ ಒಬ್ಬರನ್ನು ಸಂದರ್ಶಿಸುತ್ತಿದ್ದ ಒಬ್ಬ ಪತ್ರಕರ್ತ “ನಿಮಗೆ ಯಾವ ಪುರುಷ ಕ್ರಿಕೆಟರ್‌ ಇಷ್ಟ?’ ಎಂಬ ಪ್ರಶ್ನೆ ಎಸೆದಿದ್ದ. ಆ ಪ್ರಶ್ನೆಗೆ ಉತ್ತರಿಸುವುದಕ್ಕೆ ಬದಲಾಗಿ ಆ ಆಟಗಾರ್ತಿ “ಇದೇ ಪ್ರಶ್ನೆಯನ್ನು ಪುರುಷ ಕ್ರಿಕೆಟರ್‌ಗಳ ಬಳಿಯೂ ಯಾವತ್ತಾದರೂ ಕೇಳಿದ್ದೀರಾ?’ ಎಂದು ಕೇಳಿ ಪತ್ರಕರ್ತ ಮಹಾಶಯ ಅಲ್ಲಿಂದ ಕಾಲ್ಕಿಳುವಂತೆ ಮಾಡಿದ್ದಳು. ಆ ಕ್ರಿಕೆಟರ್‌ ಬೇರಾರೂ ಅಲ್ಲ. ಭಾರತದ ಮಹಿಳಾ ಕ್ರಿಕೆಟ್‌ ತಂಡದ “ಕ್ಯಾಪ್ಟನ್‌ ಕೂಲ್‌’ ಎಂದೇ ಹೆಸರಾದ ಮಿಥಾಲಿ ರಾಜ್‌. ಇಂತಿಪ್ಪ ಮಿಥಾಲಿ ಇತ್ತೀಚಿಗೆ ಒಂದು ಪಾರ್ಟಿಗೆ ಹೊರಟಿದ್ದರು. ತಂಡದ ಕೆಲ ಸಹ ಆಟಗಾರ್ತಿಯರೂ ಜೊತೆಯಿದ್ದರು. ಕಾರ್ಯಕ್ರಮಕ್ಕೆ ಹೋಗುವ ಮುನ್ನ ನಾಲ್ವರೂ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಸ್ಪಾಗೆಟ್ಟಿ ಟಾಪ್‌ ತೊಟ್ಟು ಮಿಂಚುತ್ತಿದ್ದ ಮಿಥಾಲಿ ಆ ಫೋಟೋವನ್ನು ಶೇರ್‌ ಮಾಡಿದಾಗ ಅನೇಕರು ಕೆರಳಿದ್ದರು. ಆಕೆಯ ಹಿಂದಿನ ಸಾಧನೆ ಎಲ್ಲವನ್ನೂ ಮರೆತು, “ನೀನು ಭಾರತೀಯಳಾಗಿ ಹೀಗೆ ಮೈ ತೋರಿಸೋ ಬಟ್ಟೆ ತೊಟ್ಟಿದ್ದೀಯಾ?’ ಎಂಬರ್ಥದಲ್ಲಿ ಕಾಮೆಂಟುಗಳ ಸುರಿಮಳೆಯನ್ನೇ ಸುರಿಸಿದರು. ಇನ್ನು ಕೆಲವರು “ಛೇ, ನೀನು ಇಂಥವಳೆಂದು ಅಂದುಕೊಂಡಿರಲಿಲ್ಲ’ ಎಂದು ಎಮೋಷನಲ್‌ ಬ್ಲ್ಯಾಕ್‌ವೆುಲ್‌ ಅನ್ನೂ ಮಾಡಿದರು.

ದೇವೊಂ ಕೆ ಪಾರ್ವತಿ ಬಿಕಿನಿ ತೊಟ್ಟಾಗ…
ಬಾಲಿವುಡ್‌ನ‌ಲ್ಲಿ ಒಂದು ಟ್ರೆಂಡ್‌ ಇದೆ. ವಿದೇಶಿ ಬೀಚ್‌ಗೆ ಪ್ರವಾಸಕ್ಕೆಂದು ಹೋದಾಗ ತೆಗೆದ ಪ್ರೈವೇಟ್‌ ಫೋಟೋಗಳನ್ನು ಶೇರ್‌ ಮಾಡುವುದು. ಇದರಿಂದ ಪುಕ್ಕಟೆ ಪ್ರಚಾರವೂ ದೊರಕುವುದರಿಂದ ಸಾಕಷ್ಟು ನಟ- ನಟಿಯರು ಈ ಪದ್ಧತಿಯನ್ನು ಫಾಲೋ ಮಾಡುತ್ತಾರೆ. ಆದರೆ, ನಟಿ ಕಿರುತೆರೆ ಸೋನಾರಿಕಾ ಭಡೋರಿಯಾ, ತಾನು ಮಾರಿಷಸ್‌ ಬೀಚ್‌ನಲ್ಲಿ ಸ್ವಿಮ್‌ ಸೂಟ್‌ ತೊಟ್ಟು ಅಡ್ಡಾಡುವ ಫೋಟೋಗಳನ್ನು ಶೇರ್‌ ಮಾಡಿದಾಗ ಮಾತ್ರ ಐಡಿಯಾ ಉಲ್ಟಾ ಹೊಡೆಯಿತು. ಅವಳ ಇಡೀ ಅಭಿಮಾನಿ ಸಮೂಹ ಅವಳ ವಿರುದ್ಧ ತಿರುಗಿ ಬಿದ್ದಿತ್ತು. ಅವಳು ಅದನ್ನು ನಿರೀಕ್ಷಿಸಿಯೇ ಇರಲಿಲ್ಲ. ಇಲ್ಲೊಂದು ವಿಚಾರ ಹೇಳಬೇಕು. ಸೋನಾರಿಕಾಳನ್ನು ಭಾರತದಾದ್ಯಂತ ಮನೆಮಾತಾಗಿಸಿದ್ದು ಹಿಂದಿಯ “ದೇವೋಂ ಕೆ ದೇವ್‌ ಮಹಾದೇವ್‌’ ಎಂಬ ಪೌರಾಣಿಕ ಧಾರಾವಾಹಿ. ಸೊನಾರಿಕಾ ನಿರ್ವಹಿಸುತ್ತಿದ್ದ ಪಾತ್ರ ಇನ್ನಾವುದೂ ಅಲ್ಲ, ಸಾûಾತ್‌ ಪಾರ್ವತಿ ದೇವಿಯದು! ಆಕೆಯನ್ನು ಪೌರಾಣಿಕ ಪಾತ್ರದಲ್ಲಿ ನೋಡಿ ಇಷ್ಟಪಟ್ಟಿದ್ದ ಕೆಲ ಅಭಿಮಾನಿಗಳಿಗೆ ಆಕೆಯ ಹೊಸ ಬಿಚ್ಚಮ್ಮನ ಇಮೇಜು ಸಹ್ಯವಾಗಿರಲಿಲ್ಲ. “ಇಂದಿನ ಆಧುನಿಕ ಪ್ರಪಂಚದಲ್ಲಿಯೂ ಜನರು ಈ ರೀತಿ ಯೋಚಿಸುತ್ತಿದ್ದಾರೆ ಎಂದು ತಿಳಿದು ಶಾಕ್‌ ಆಯ್ತು’ ಎಂದಿದ್ದರು ಸೊನಾರಿಕಾ. ಈ ಸಂದರ್ಭದಲ್ಲಿ ಅವರು ಹಂಚಿಕೊಂಡ ಕೆಲ ವಿಷಯಗಳು ನಮ್ಮ ಸಮಾಜವನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಬಲ್ಲುದು. 

“ದೇವೋಂ ಕೆ ದೇವ್‌ ಮಹಾದೇವ್‌’ ಧಾರಾವಾಹಿಯ ಮುಖ್ಯ ಪಾತ್ರ ಶಿವನಾಗಿ ಕಾಣಿಸಿಕೊಂಡವರು ನಟ ಮೋಹಿತ್‌ ರೈನಾ. ಮೂಲತಃ ಮಾಡೆಲ್‌ ಆಗಿದ್ದ ಮೋಹಿತ್‌ ಅವರ ಕಟ್ಟುಮಸ್ತಾದ ದೇಹ ಶಿವನ ಪಾತ್ರಕ್ಕೆ ವಿಶೇಷ ಕಳೆಯನ್ನು ತಂದುಕೊಟ್ಟಿತ್ತು. ಅವರನ್ನು ದೇಶದಲ್ಲಿ ಫಿಟ್‌ನೆಸ್‌ ಗುರುವಾಗಿ ನೋಡುವವರೂ ಇದ್ದಾರೆ. ಅವರಿಂದ ವ್ಯಾಯಾಮ ಮತ್ತು ಡಯೆಟ್‌ ಟಿಪ್ಸ್‌ಗಳನ್ನು ಕೇಳುವವರಿಗೂ ಕೊರತೆಯಿಲ್ಲ. ಗೋಡೆಗಳಲ್ಲಿ ಆತನ ಅರೆ ಬೆತ್ತಲೆ ಫೋಟೋಗಳನ್ನು ಹಾಕಿ ಆರಾಧಿಸುವವರೂ ಇದ್ದಾರೆ. ಇನ್ನು ಹುಡುಗಿಯರಂತೂ ಮೋಹಿತ್‌ ಎಂದರೆ ಮುಗಿಬೀಳುತ್ತಾರೆ. ಫ್ಯಾಷನ್‌ ಶೋಗಳಿಗೆ ಆಹ್ವಾನಿಸುತ್ತಾರೆ. ಅಂದಹಾಗೆ, ಮೋಹಿತ್‌ಗೆ ಅಭಿಮಾನಿನಿಯರು ಇಟ್ಟಿರುವ ಅಡ್ಡಹೆಸರುಗಳನ್ನು ಕೇಳಿ- “ಹಾಟ್‌ ಶಿವ, ಸೆಕ್ಸಿ ಶಿವ. ಪುರುಷ ದೇವರಾಗಿ ಕಾಣಿಸಿಕೊಂಡ ಗಂಡಸಿಗೆ ಈ ರೀತಿಯ ಸ್ಟಾರ್‌ ಟ್ರೀಟ್‌ಮೆಂಟ್‌, ರಿಯಾಯಿತಿ ಸಿಗುತ್ತಿರುವಾಗ ಅದೇ ರೀತಿ ತನ್ನನ್ನೂ ಯಾಕೆ ನೋಡುವುದಿಲ್ಲ ಈ ಸಮಾಜ?’ ಎನ್ನುವುದು ಸೊನಾರಿಕಾ ಎತ್ತಿರುವ ಪ್ರಶ್ನೆ. 

ಅಮೃತಾ, ಈ ಬಟ್ಟೇಲಿ ನಿಮ್‌ ಗುರ್ತೇ ಸಿಗ್ಲಿಲ್ಲ!
ಅಮೃತಾ ಎಂದರೆ, ಕರ್ನಾಟಕದ ಸೊಸೆಯಂದಿರ ಕಿವಿಯೆಲ್ಲ ನೆಟ್ಟಗಾಗುತ್ತೆ! ಸ್ಟಾರ್‌ ಸುವರ್ಣ ಚಾನೆಲ್‌ನಲ್ಲಿ “ಅಮೃತವರ್ಷಿಣಿ’ ಧಾರಾವಾಹಿಯಿಂದ ಮನೆಮಾತಾದ ರಂಜಿನಿ, “ಅಮೃತಾ’ಳ ಪಾತ್ರದಿಂದ ಮಿಂಚಿದವರು. ಆ ಪಾತ್ರ ಹೇಗಿದೆಯೆಂದರೆ, ಮುಗ್ಧತೆ, ಹಿತ ಮಿತ ಮಾತು, ಸಂಪ್ರದಾಯಸ್ಥೆ… ಟೋಟಲ್ಲಾಗಿ ಹೇಳಬೇಕೆಂದರೆ “ಮಿಸೆಸ್‌ ಪರ್ಫೆಕ್ಟ್’ ಅನ್ನಬಹುದು. “ಸೊಸೆ ಅಂದ್ರೆ ಹೀಗಿರಬೇಕಪ್ಪಾ’ ಎಂದು ಕರ್ನಾಟಕದ ಅತ್ತೆಯಂದಿರಲ್ಲಿ ಕಿಚ್ಚು ಹಚ್ಚಿದ ರಂಜಿನಿಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಆದರೆ, ತೆರೆ ಮೇಲಿನ ತಮ್ಮ ಕ್ಯಾರೆಕ್ಟರ್‌ಗಿಂತ ವಾಸ್ತವದಲ್ಲಿ ತಾವೆಷ್ಟು ಉಲ್ಟಾ ಎಂಬುದನ್ನು ಮತ್ತು ಹೇಗೆ ಮ್ಯಾನೇಜ್‌ ಮಾಡುತ್ತಾರೆಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಓವರ್‌ ಟು ರಂಜಿನಿ…

“ನಮ್ಮ ತಂಡದವರೆಲ್ಲಾ ಒಮ್ಮೆ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆವು. ಅಲ್ಲಿ ಮೆಟ್ಟಿಲುಗಳ ಮೇಲೆ ಒಬ್ಬರು ಅಜ್ಜಿ ನನ್ನ ಗಂಡನ ಪಾತ್ರ ಮಾಡುವವರಿಗೆ ಕೋಲು ಹಿಡಿದುಕೊಂಡು ಹೊಡೆಯಲು ಬಂದರು. ಸುತ್ತಮುತ್ತಲಿದ್ದವರೆಲ್ಲ ಸೇರಿ ಅಜ್ಜಿಯನ್ನು ತಡೆದರು. ನಮಗೆಲ್ಲಾ ಸಖತ್‌ ಶಾಕ್‌, ಏನಾಯ್ತಪ್ಪಾ ಅಂತ. ಒಂದೇ ಸಮನೇ ಹಿಡಿಶಾಪ ಹಾಕುತ್ತಿದ್ದ ಅಜ್ಜಿಯನ್ನು ಮಾತಾಡಿಸಿದಾಗ ಅವರು ಅಳುತ್ತಾ “ಅಮೃತಾನ ಎಷ್ಟು ಗೋಳು ಹುಯ್ದುಕೊಳ್ಳುತ್ತಾನೆ ಈ ಯಪ್ಪ. ಅದ್ಕೆà ಹೊಡೆª’ ಅಂತ ಹೇಳಿದ್ದು ಕೇಳಿ ನನಗೆ ಖುಷಿ ಪಡಬೇಕೋ, ಬೇಡವೋ ತಿಳಿಯಲಿಲ್ಲ, 

ಮತ್ತೂಂದು ದಿನ ಶಾಪಿಂಗ್‌ಗೆ ಹೋಗಿದ್ದಾಗ, ಒಬ್ಬರು ನನ್ನನ್ನು ಹಾದು ಹೋಗಿ ವಾಪಸ್‌ ತಿರುಗಿ ಬಂದು “ನೀವು ಅಮೃತಾ ಅಲ್ವಾ? ಈ ಬಟ್ಟೇನಲ್ಲಿ ಪತ್ತೆ ಹಚ್ಚೋಕೇ ಆಗಲಿಲ್ಲ’ ಅಂದರು. ಆವತ್ತು ನಾನು ಜೀನ್ಸ್‌ನಲ್ಲಿ ಹೋಗಿದ್ದೆ. ಇವೆಲ್ಲದರಿಂದ ಒಂದಂತೂ ಅರ್ಥ ಆಯ್ತು, ಜನ ನನ್ನ ಕ್ಯಾರೆಕ್ಟರ್‌ ಅನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಅಂತ!

ನಿಜಹೇಳಬೇಕೆಂದರೆ, ನಾನು ನನ್ನ ಕ್ಯಾರೆಕ್ಟರ್‌ ಅಮೃತಾ ಥರ ಇಲ್ಲವೇ ಇಲ್ಲ. ಅವಳಷ್ಟು ಮುಗ್ಧವಾಗಿ, ಹೇಳಿದ್ದನ್ನೆಲ್ಲಾ ಕೇಳಿಕೊಂಡು ಇರೋದಿಲ್ಲ. ಇನ್ನೊಂದು ವಿಷ್ಯ ಏನೂಂದ್ರೆ “ಅಮೃತವರ್ಷಿಣಿ’ ಧಾರಾವಾಹಿಗೆ ಮುಂಚೆ ನಾನು ಸೀರೆ ಉಟ್ಟವಳೇ ಅಲ್ಲ. ಮಾಡ್‌ ಹುಡುಗಿಯಾಗಿದ್ದರಿಂದ ಯಾವತ್ತೂ ಜೀನ್ಸ್‌, ಟೀಸ್‌ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೆ. ಒಂದು ಸ್ಟೇಜ್‌ ಶೋ ಕಾರ್ಯಕ್ರಮದಲ್ಲಂತೂ ಜನರು “ಮೇಡಂ, ನೀವು ಸೀರೇನಲ್ಲಿಯೇ ಚೆನ್ನಾಗಿ ಕಾಣಿಸುತ್ತೀರಿ. ಇವತ್ತು ನೀವು ಸೀರೆಯಲ್ಲೇ ಬರುತ್ತೀರಿ’ ಅಂತ ತಿಳಿದಿದ್ದೆವು ಅಂದುಬಿಟ್ಟಿದ್ದರು. ಆವತ್ತು ನಾನು ಚೂಡಿದಾರ್‌ ತೊಟ್ಟಿದ್ದೆ. ತಾವು ತೆರೆಯ ಮೇಲೆ ಕಂಡ ಇಮೇಜನ್ನು ನಿಜಬದುಕಿನಲ್ಲೂ ಕಾಣಲು ಅವರು ಇಷ್ಟಪಡುತ್ತಾರೆ ಅನ್ನೋದು ಸ್ಪಷ್ಟ ಆಯ್ತು. ಹಾಗಾಗಿಯೇ, “ಮಜಾ ಟಾಕೀಸ್‌’ ಶೋನಲ್ಲಿ ನನಗೆ ಒಂದು ಮಾಡ್‌ ಹುಡುಗಿಯ ಪಾತ್ರ ಸಿಕ್ಕಾಗ ಮೊದಲು ಭಯವಾಗಿತ್ತು. “ಅಮೃತಾ’ ಪಾತ್ರವನ್ನು ಸ್ವೀಕರಿಸಿದ ಅಭಿಮಾನಿಗಳು ಮಾಡ್‌ ಅವತಾರವನ್ನು ನೋಡಿ ಏನನ್ನುವರೋ ಅಂತ. ಆದರೆ, ಹಾಗೇನೂ ಆಗಲಿಲ್ಲ. ನನ್ನನ್ನು ಸ್ವೀಕರಿಸಿದರು. ಈಗಲೂ ಜನರು “ಮೇಡಂ, ಮತ್ತೆ ಮಜಾ ಟಾಕೀಸಿಗೆ ಯಾವಾಗ ಬರುತ್ತೀರಿ?’ ಅಂತ ಕೇಳ್ತಾರೆ. ಹೀಗಾಗಿ, ಈ ಇಮೇಜ್‌ ಚೇಂಜ್‌ ವಿಷಯದಲ್ಲಿ ನಾನು ಅದೃಷ್ಟಶಾಲಿಯೆಂದೇ ತಿಳಿಯುತ್ತೇನೆ’.

ಹೋದಲ್ಲಿ ಬಂದಲ್ಲೆಲ್ಲಾ ನಾಲಿಗೆ ತೋರ್ಸು ಅಂತಾರೆ!
ದೀಪಿಕಾ ದಾಸ್‌, ಝೀ ಕನ್ನಡದ ಜನಪ್ರಿಯ ಧಾರಾವಾಹಿಯ “ನಾಗಿಣಿ’. ಸಿಟ್ಟು, ದ್ವೇಷ, ಪ್ರೀತಿ, ಅಸಹನೆ ಎಲ್ಲಾ ಭಾವಗಳನ್ನೂ ಒಟ್ಟೊಟ್ಟಿಗೇ ಹೊರಹಾಕುವ ಪಾತ್ರದಲ್ಲಿ ಜನರನ್ನು ಮೋಡಿ ಮಾಡಿರುವ ದೀಪಿಕಾಳನ್ನು ಜನರು ನಿಜ ಬದುಕಿನಲ್ಲೂ ನಾಗಿಣಿ ಎಂದೇ ತಿಳಿದಿರುವಂತೆ ತೋರುತ್ತಿದೆ. ಈ ಕುರಿತು ಅವರು ಹೇಳಿದ್ದು… 

– ಜನ ಎಷ್ಟೊಂದು ಮುಗ್ಧರಿರುತ್ತಾರೆ ಎಂದರೆ ಹೊರಗಡೆ ಎಲ್ಲಾದರೂ ನನ್ನನ್ನು ನೋಡಿದರೆ, ದೇವರನ್ನು ಕಂಡಂತೆ ಆಡ್ತಾರೆ. ಇನ್ನೂ ಕೆಲವರು ಹಾವು ಕಂಡಂತೆ ಬೆಚ್ಚಿ ಬಿದ್ದು ನನ್ನನ್ನೇ ದಿಟ್ಟಿಸಿ ನೋಡ್ತಾರೆ. ಆದರೆ, ಹೋದಲ್ಲಿ ಬಂದಲ್ಲೆಲ್ಲಾ ಜನರು “ನಾಲಿಗೆ ತೋರಿಸಿ’ ಎಂದು ಪೀಡಿಸುತ್ತಾರಲ್ಲಾ… ಆಗ ಕಿರಿಕಿರಿ ತುಸು ಕಿರಿಕಿರಿ ಆಗುತ್ತೆ. ಪಾಪ, ಕೆಲ ವಯಸ್ಸಾದವರು ನಾನೇ ಹಾವಿನ ನಾಲಿಗೆಯಂತೆ ಮಾಡುತ್ತೇನೆ ಅನ್ಕೊಂಡಿದ್ದಾರೆ. ಅಂಥವರು ಕೇಳಿದಾಗ ಬೇಜಾರಾಗುವುದಿಲ್ಲ. ಆದರೆ, ಎಷ್ಟೋ ಜನ ಬೇಕು ಬೇಕೂಂತ, ನನ್ನನ್ನು ಪೀಡಿಸಲೆಂದೇ “ಈಗ ಹಾವಿನ ರೀತಿ ನಾಲಿಗೆ ತೆರೆಯಿರಿ, ನೋಡೋಣ’ ಎಂದು ಸವಾಲು ಹಾಕ್ತಾರೆ. ಆಗ ಸ್ವಲ್ಪ ಸಿಟ್ಟು ಬರುತ್ತೆ. 

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.