ಕಪ್ಪಣ್ಣ ಅಂಗಳದಲ್ಲಿ ನವ ನಿರ್ದೇಶಕರ ನವರಾತ್ರಿ ಉತ್ಸವ
Team Udayavani, Sep 20, 2017, 4:59 PM IST
ಆ ಕಡೆ ದಸರಾಗಾಗಿ ಮೈಸೂರಿನಲ್ಲಿ ಚಿತ್ರೋತ್ಸವ ನಡೆದರೆ, ಈ ಕಡೆ ಬೆಂಗಳೂರಿನಲ್ಲೂ ಒಂದು ಚಿತ್ರೋತ್ಸವ ಸದ್ದಿಲ್ಲದೆ ಏರ್ಪಾಡಾಗಿದೆ. ಚಿತ್ತ ಚಿತ್ತಾರ ಚಿತ್ರೋತ್ಸವ ಹೆಸರಿನ ಈ ಚಿತ್ರೋತ್ಸವದಲ್ಲಿ ಒಂಬತ್ತು ದಿನಗಳ ಕಾಲ ಒಂಬತ್ತು ಜನಪ್ರಿಯ ನಿರ್ದೇಶಕರ ಚಿತ್ರೋತ್ಸವಗಳನ್ನು ಪ್ರದರ್ಶಿಸಲಾಗುತ್ತಿದೆ.
ನವ ನಿರ್ದೇಶಕ ನವರಾತ್ರಿ ಉತ್ಸವ ಇಂದಿನಿಂದ ಪ್ರಾರಂಭವಾಗಲಿದೆ. ಬಿ.ಎಸ್. ಲಿಂಗದೇವರು ನಿರ್ದೇಶನದ “ನಾನು ಅವನಲ್ಲ ಅವಳು’ ಚಿತ್ರದಿಂದ ಪ್ರಾರಂಭವಾಗುವ ಈ ಉತ್ಸವವು 29ರಂದು ಪ್ರದರ್ಶನವಾಗಲಿರುವ ಗಿರೀಶ್ ಕಾರ್ನಾಡರ “ಕಾನೂನು ಹೆಗ್ಗಡತಿ’ ಚಿತ್ರದ ಮೂಲಕ ಮುಕ್ತಾಯವಾಗಲಿದೆ.
ಕ್ಕಂತೆ ಕೆ.ಎಂ. ಚೈತನ್ಯ ನಿರ್ದೇಶನದ “ಆಕೆ’ (ಸೆ 22), ಬಿ. ಸುರೇಶ್ ನಿರ್ದೇಶನದ ಪುಟ್ಟಕ್ಕನ ಹೈವೇ (ಸೆ 23), ಟಿ.ಎನ್. ಸೀತಾರಾಂ ಅವರ “ಮತದಾನ’ (ಸೆ 24), ಪಿ. ಶೇಷಾದ್ರಿ ಅವರ “ಮುನ್ನುಡಿ’ (ಸೆ 25), ಟಿ.ಎಸ್. ನಾಗಾಭರಣರ “ಮೈಸೂರು ಮಲ್ಲಿಗೆ’ (ಸೆ 26), ಗಿರೀಶ್ ಕಾಸರವಳ್ಳಿ ನಿರ್ದೇಶನದ “ಹಸೀನಾ’ (ಸೆ 27), ಸತ್ಯಪ್ರಕಾಶ್ ನಿರ್ದೇಶನದ “ರಾಮಾ ರಾಮಾ ರೇ’ (ಸೆ 28) ಚಿತ್ರಗಳು ಪ್ರದರ್ಶನವಾಗಲಿದೆ.
ಪ್ರತಿ ಸಂಜೆ 6ಕ್ಕೆ ಚಿತ್ರ ಪ್ರದರ್ಶನವಾಗಲಿದ್ದು, ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ನವ ನಿರ್ದೇಶಕರ ನವರಾತ್ರಿ ಉತ್ಸವವು ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳಲದಲ್ಲಿ ಪ್ರದರ್ಶನವಾಗಲಿದ್ದು, ಗುರುಪ್ರಸಾದ್ ಮುದ್ರಾಡಿ ಈ ಉತ್ಸವದ ಸಂಚಾಲಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.