ಭಾರತ ಸೇನೆ ವಿರುದ್ಧ ಅಣ್ವಸ್ತ್ರ ಬಳಸುತ್ತೇವೆ : ಪಾಕ್ ಬೆದರಿಕೆ
Team Udayavani, Sep 21, 2017, 11:17 AM IST
ನ್ಯೂಯಾರ್ಕ್ : “ನಮ್ಮ ಬಳಿ ಕಿರು ವ್ಯಾಪ್ತಿಯ ಅಣ್ವಸ್ತ್ರಗಳಿವೆ ಮತ್ತು ನಾವದನ್ನು ಭಾರತೀಯ ಸೇನೆಯ ವಿರುದ್ಧ ಬಳಸುತ್ತೇವೆ’ ಎಂದು ಪಾಕ್ ಪ್ರಧಾನಿ ಶಾಹೀದ್ ಖಕಾನ್ ಅಬ್ಟಾಸಿ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಉನ್ನತ ಚಿಂತನ ಚಾವಡಿ “ವಿದೇಶ ಬಾಂಧವ್ಯಗಳ ಮಂಡಳಿ” ಯೊಂದಿಗೆ ಮಾತನಾಡಿದ ಪಾಕ್ ಪ್ರಧಾನಿ ಅಬ್ಟಾಸಿ ಅವರು “ಭಾರತವು ಪಾಕ್ ವಿರುದ್ಧ ಆರಂಭಿಸಿರುವ ಶೀತಲ ಆರಂಭದ ತಂತ್ರಗಾರಿಕೆಗೆ ಪ್ರತಿಯಾಗಿ ನಾವು ಕಿರು ವ್ಯಾಪ್ತಿಯ ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ನಮ್ಮ ವ್ಯೂಹಾತ್ಮಕ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಹೊಂದಿರುವ ಪ್ರಾಧಿಕಾರವೇ ಈ ಕಿರು ವ್ಯಾಪ್ತಿಯ ಅಣ್ವಸ್ತ್ರಗಳ ಮೇಲೂ ನಿಯಂತ್ರಣ ಹೊಂದಿದೆ’ ಎಂದು ಹೇಳಿದರು.
ವಿಶ್ವಾದ್ಯಂತದ ನಾಯಕರಿಂದ ಏಕ ಪ್ರಕಾರದ ಖಂಡನೆಗೆ ಗುರಿಯಾಗಿರುವ ಉತ್ತರ ಕೊರಿಯದ ಅಣ್ವಸ್ತ್ರ ಬೆದರಿಕೆಗಳು ಹೆಚ್ಚುತ್ತಿರುವ ನಡುವೆಯೇ ಪಾಕ್ ಪ್ರಧಾನಿ ಅಬ್ಟಾಸಿ ಅವರಿಂದ ಭಾರತಕ್ಕೆ ಈ ಬೆದರಿಕೆ ಬಂದಿರುವುದು ಗಮನಾರ್ಹವಾಗಿದೆ.
ಅಮೆರಿಕಕ್ಕೆ ಪಾಕ್ ಅಣ್ವಸ್ತ್ರಗಳಿಗಿಂತಲೂ ಅವುಗಳ ಸುರಕ್ಷೆಯ ಬಗ್ಗೆಯೇ ಹೆಚ್ಚಿನ ಕಳವಳ ಇದೆ. ಅಂತೆಯೇ ಪಾಕಿಸ್ಥಾನಕ್ಕೆ ತನ್ನ ಅಣ್ವಸ್ತ್ರಗಳ ಮೇಲೆ ನಿಜವಾದ ನಿಯಂತ್ರಣ ಇದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದು ಚಿಂತನ ಚಾವಡಿಯ ನಿರ್ವಾಹಕ ಡೇವಿಡ್ ಸ್ಯಾಂಗರ್ ಹೇಳಿದಾಗ, ಅಬ್ಟಾಸಿ ಅವರು, “ಪಾಕ್ ಅಣ್ವಸ್ತ್ರಗಳು ಸುರಕ್ಷಿತ ಮತ್ತು ಭದ್ರವಾಗಿವೆ’ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Parliment: ವಯನಾಡ್ ಲೋಕಸಭಾ ಸದಸ್ಯೆಯಾಗಿ ಇಂದು ಪ್ರಿಯಾಂಕಾ ಶಪಥ ಸಾಧ್ಯತೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Chennai: ಐಶ್ವರ್ಯ ರಜನಿಕಾಂತ್, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್
information Technology Appointment: ಬೆಂಗಳೂರಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.