ಚೀನ ವಸ್ತು ಬಳಕೆ ನಿಷೇಧಿಸಿ: ಶೋಭಾ ಕರಂದ್ಲಾಜೆ


Team Udayavani, Sep 21, 2017, 12:25 PM IST

21-Maniapl-5.jpg

ಉಡುಪಿ : ಭಾರತ ಸೇರಿದಂತೆ ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನು ತನ್ನ ಕಪಿ ಮುಷ್ಟಿಗೆ ತರಲು ಚೀನ ಬಯಸುತ್ತಿದೆ. ಚೀನದ ಕಳಪೆ ಮಿಷನ್‌ಗಳ ಬಳಕೆಯನ್ನು ಭಾರತದ ಕಂಪೆನಿಗಳು ನಿಲ್ಲಿಸಬೇಕು. ಹೀಗೆ ಮುಂದುವರಿದರೆ ದೇಶ ದ ಆರ್ಥಿಕ ಸ್ಥಿತಿ ಕುಸಿಯಬಹುದು. ಹೀಗಾಗಿ ದೇಶದಲ್ಲಿ ಚೀನ ವಸ್ತುಗಳ ನಿಷೇಧ ಅತ್ಯಗತ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ  ಅಭಿಪ್ರಾಯಪಟ್ಟರು. 

ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಸಂವೇದನಾ ಫೌಂಡೇಶನ್ಸ್‌  ವತಿ ಯಿಂದ ಚೀನ ವಸ್ತು  ಬಹಿಷ್ಕಾರ, ಡ್ರಗ್ಸ್‌ ನಿಷೇಧ, ಪರಿಸರ ಜಾಗೃತಿ ಕುರಿತಾಗಿ ನಡೆದ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಬೀದಿ ನಾಟಕ  ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಅಜ್ಜರಕಾಡು ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಚೀನ ಭಾರತದ ಮೇಲೆ ಆಕ್ರಮಣಕ್ಕೆ ಯತ್ನಿಸುತ್ತಿದೆ. ದೇಶದ ಆರ್ಥಿಕ ಭದ್ರತೆಗೆ ಚೀನ ವಸ್ತುಗಳನ್ನು ಬಿಡಬೇಕು. ಕಂಪೆನಿಗಳಿಗೆ ತರುವ ಮಿಷನ್‌ಗಳ ನಿರ್ವಹಣೆಗೆ ಚೀನದ ಎಂಜಿನಿಯರ್‌ಗಳು ಆಗಮಿಸುತ್ತಾರೆ. ಅವರ ಜತೆಗೆ ಗೂಢಚಾರ  ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಯುವ ಜನತೆಯನ್ನು ಕೆಡಿಸಲು ಡ್ರಗ್ಸ್‌ ನೀಡುವ ವ್ಯ ವಸ್ಥಿತ ಜಾಲ ಹರಿದಾಡುತ್ತಿದೆ. ವಿದೇಶಿಗರ ಕೈವಾಡವಿದ್ದು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಅವರ ಗುರಿ. ದೇಶದ ಅನೇಕ ನಗರಗಳಲ್ಲಿ  ಈ  ಜಾಲವಿದೆ. ವಿದ್ಯಾರ್ಥಿಗಳೇ ಈ ಬಗ್ಗೆ ಅರಿವು ಮೂಡಿಸಿ ಅದರ ವಿರುದ್ಧ ಹೋರಾಡಬೇಕು ಎಂದರು.  ಸ್ಪರ್ಧೆಯ ತೀರ್ಪುಗಾರರಾದ ಬಾಸುಮ ಕೊಡಗು, ಉಪನ್ಯಾಸಕ ಶಮಂತ್‌ ಅವರನ್ನು ಸಮ್ಮಾನಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆ ಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಶ್ಯಾಮಲಾ ಕುಂದರ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಫೌಂಡೇಶನ್‌ನ ಉಪಾಧ್ಯಕ್ಷ ರವಿ, ನ್ಯಾಯವಾದಿ ಆನಂದ ಮಡಿವಾಳ, ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು. 

ಕಿದಿಯೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಕೆ.ಉದಯ ಕುಮಾರ್‌ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ರಾಧಾಕೃಷ್ಣ ಶೆಟ್ಟಿ ನಿರೂಪಿಸಿದರು.

ಬೀದಿ ನಾಟಕ ನಶಿಸುತಿದೆ…
ಎಲೆಕ್ಟ್ರಾನಿಕ್‌ ಮಾಧ್ಯಮ ಇಲ್ಲದ ಕಾಲದಲ್ಲಿ ಬೀದಿ ನಾಟಕದ ಮೂಲಕ ಜನತೆಗೆ ಅನೇಕ ವಿಷಯಗಳ ಅರಿವು ಮೂಡಿ ಸಲಾಗುತ್ತಿತ್ತು. ಇತ್ತೀಚೆಗೆ ಬೀದಿ ನಾಟಕ ನಶಿಸುತ್ತಿದೆ. ನೋಡುವವರು ಇದ್ದಾರೆ, ಆಡುವವರು ಕಡಿಮೆಯಾಗಿದ್ದಾರೆ. ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಬೀದಿ ನಾಟಕ  ನಡೆಸಿ ಸಮಾ ಜಕ್ಕೆ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
ಶೋಭಾ ಕರಂದ್ಲಾಜೆ, 
ಸಂಸದೆ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.