ಮಂಗಳೂರಿನ ರೂಪಮೌಳಿಗೆ ಮಿಸೆಸ್ ಗ್ಲೋಬಲ್ ಪ್ರಶಸ್ತಿ
Team Udayavani, Sep 21, 2017, 12:42 PM IST
ಮಂಗಳೂರು : ಮಂಗಳೂರಿನಲ್ಲಿ ಹುಟ್ಟಿ ಬೆಳೆದ ರೂಪಮೌಳಿ ಈಗ “ಮಿಸೆಸ್ ಗ್ಲೋಬಲ್ ಇಂಟರ್ನ್ಯಾಶನಲ್ ಕ್ಲಾಸಿಕ್- 2017′ ಪ್ರಶಸ್ತಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 30 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.ಸ್ಪರ್ಧಿಗಳಿಗೆ ಐಸ್ಬ್ರೇಕರ್, ಟ್ಯಾಲೆಂಟ್, ಫೋಟೋಶೂಟ್, ಸಮೂಹ ಚರ್ಚೆ, ಆಶುಭಾಷಣ, ರಾಷ್ಟ್ರೀಯ ವಸ್ತ್ರ ವಿನ್ಯಾಸ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ವಸ್ತ್ರ ವಿನ್ಯಾಸದಲ್ಲಿ ಅವರು ನವಿಲು ಬಣ್ಣದ ರೇಷ್ಮೆ ವಸ್ತ್ರ ಧರಿಸಿ ಭಾರೀ ಮೆಚ್ಚುಗೆಗೆ ಪಾತ್ರರಾದರು. ಅವರು ಮಿಸೆಸ್ ಫೋಟೋಜೆನಿಕ್ ಮತ್ತು ಜೂರೀಸ್ ಚಾಯ್ಸ ಎಂಬ ಎರಡು ಉಪಪ್ರಶಸ್ತಿಗಳನ್ನು ಪಡೆದರು.
ರೂಪಮೌಳಿ ಅವರು ಮಂಗಳೂರಿನ ಆನಂದ ಹೆಗ್ಡೆ- ಸುಗಂಧಿ ಹೆಗ್ಡೆ ದಂಪತಿಯ ಪುತ್ರಿ. ಸೈಂಟ್ ಆ್ಯನ್ಸ್ ಕೆನರಾ ಪ.ಪೂ. ಕಾಲೇಜ್; ಬಳಿಕ ಬೆಂಗಳೂರಿನಲ್ಲಿ ಪದವಿ ಓದಿ ಸ್ವಲ್ಪಕಾಲ ಸರಕಾರದ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಈಗ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಅವರ ಪತಿ ಇಂದುಮೌಳಿ ಸ್ನಾತಕೋತ್ತರ ಪದವೀಧರ. ಈ ದಂಪತಿಯ ಪುತ್ರ ನಿಪುಣ್ ಮೌಳಿ ಎಂಜಿನಿಯರಿಂಗ್ ಪದವೀಧರರಾಗಿದ್ದು ಅಮೆರಿಕದಲ್ಲಿ ಎಂಎಸ್ ಓದುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.