ಮಾಹಿತಿ ಕೊರತೆಯಿಂದ ತಲುಪದ ಆಯುರ್ವೇದ
Team Udayavani, Sep 22, 2017, 11:45 AM IST
ಬೆಂಗಳೂರು: ಮಾಹಿತಿ ಅಭಾವದಿಂದ ಜನತೆ ಆಯುರ್ವೇದದ ಮಹತ್ವ ಅರಿಯುವಲ್ಲಿ ವಿಫಲರಾಗಿದ್ದು, ಪ್ರತಿ ಶಾಲೆಗಳಲ್ಲಿ ದೇಶೀಯ ಚಿಕಿತ್ಸಾ ಪದ್ಧತಿಯನ್ನು ಶಿಸ್ತುಬದ್ಧವಾಗಿ ಬೋಧಿಸುವ ಅಗತ್ಯವಿದೆ ಎಂದು ಕೇಂದ್ರ ಆಯುಶ್ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಕೊಟೇಜ್ ಪ್ರತಿಪಾದಿಸಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷದ್ ಹಾಗೂ ಟಿಎಸ್‌ಎಸ್‌ಟಿ ಜಂಟಿಯಾಗಿ ಆಯೋಜಿಸಿದ್ದ “ಜಿಜ್ಞಾಸ ದರ್ಶನ 2017′- ಆರ್ಯುವೇದ ಶಿಕ್ಷಣ ಮತ್ತು ತರಬೇತಿಯಲ್ಲಿ ಸುಧಾರಣೆ ಎಂಬ ವಿಷಯದ ರಾಷ್ಟ್ರೀಯ ಮಟ್ಟದ ವಿಚಾರಸಂಕಿಣದಲ್ಲಿ ಮಾತನಾಡಿದ ಅವರು, ಆಧುನಿಕ ವೈದ್ಯರು ಗುಣಡಿಸಲು ಸಾಧ್ಯವಾಗದ ಪ್ರಕರಣಗಳನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಿದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಆಯುರ್ವೇದ ಕುರಿತು ನಮ್ಮಲ್ಲಿ ಮಾಹಿತಿ ಕೊರತೆ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಆಯುರ್ವೇದ ಪದ್ಧತಿ ಬೆಳವಣಿಗೆ ಮತ್ತು ಈ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗೆ ಸೂಕ್ತ ಪ್ರೋತ್ಸಾಹ ನೀಡುತ್ತಿದೆ. ಮಧ್ಯಪ್ರದೇಶ ಹಾಗೂ ಗುಜರಾತ್ ಸರ್ಕಾರ ಪ್ರಾಥಮಿಕ ಶಿಕ್ಷಣದಲ್ಲಿ ಆಯುರ್ವೇದ ಪರಿಚಯಿಸುತ್ತಿದ್ದು, ದೇಶದ ಎಲ್ಲ ಶಾಲಾ- ಕಾಲೇಜುಗಳಲ್ಲಿ ಸೀಮಿತಾವಧಿ ಕೋರ್ಸ್ ರೂಪದಲ್ಲಿ ಆಯುರ್ವೇದ ಬೋಧಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್ ವ್ಯಾಸ) ಕುಲಪತಿ ಡಾ.ಎಚ್.ಆರ್. ನಾಗೇಂದ್ರ , ಪ್ರಾಚೀನ ವೈದ್ಯಕೀಯ ಪದ್ಧತಿ ಆಯುರ್ವೇದ ಉತ್ತಮ ಫಲಿತಾಂಶ ನೀಡಿದರೂ ಆಧುನಿಕ ಸಮಾಜ ಒಪ್ಪಿಕೊಳ್ಳದಿರಲು ದತ್ತಾಂಶ ಕೊರತೆಯೇ ಮುಖ್ಯ ಕಾರಣ ಎಂದರು.
ಆಧುನಿಕ ಯುಗದಲ್ಲಿ ಫಲಿತಾಂಶಕ್ಕಿಂತ ದತ್ತಾಂಶವೇ ಮುಖ್ಯವಾಗುತ್ತದೆ. ಆದ್ದರಿಂದ ಸೂಕ್ತವಾದ ದತ್ತಾಂಶವನ್ನು ಕಲೆ ಹಾಕಿ, ಆರ್ಯುವೇದದಲ್ಲಿ ಸಂಶೋಧನೆ ನಡೆಸುವ ಅಗತ್ಯತೆ ಇದೆ. ಯೋಗದ ವಿಚಾರವಾಗಿ ಸಹ ಪಾಶ್ಚಿಮಾತ್ಯರು ಈ ಹಿಂದೆ ಅಸಡ್ಡೆ ತೋರಿಸಿದ್ದರು. ಆದರೆ, ಇಂದು ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ, ಆಧುನಿಕ ವೈದ್ಯಕೀಯ ಪದ್ಧತಿಯಿಂದ ಶೀಘ್ರವಾಗಿ ರೋಗಗಳನ್ನು ಗುಣಮುಖ ಮಾಡಬಹುದು. ಆದರೆ ಶಾಶ್ವತ ಪರಿಹಾರ ಅಸಾಧ್ಯ. ಆರ್ಯುವೇದದಲ್ಲಿ ಫಲಿತಾಂಶ ನಿಧಾನವಾದರೂ ಫಲಿತಾಂಶ ಅತ್ಯುತ್ತಮವಾಗಿದೆ. ಆಧುನಿಕ ವೈದ್ಯಕೀಯ ಪದ್ಧತಿ ದೈಹಿಕ ಕಾಯಿಲೆಗಳನ್ನು ಮಾತ್ರ ಗುಣಪಡಿಸುವ ಶಕ್ತಿ ಹೊಂದಿದೆ. ಆಯುರ್ವೇದ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಿದರು.
ಆರ್ಯುವೇದದಲ್ಲಿ ಸಹ ಅಲ್ಪಾವಧಿಯಲ್ಲಿ ಫಲಿತಾಂಶ ನೀಡುವ ಮಾತ್ರೆ ಅಥವಾ ಔಷಧವನ್ನು ತಯಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಸ್-ವ್ಯಾಸ ಸಂಶೋಧನೆ ನಡೆಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಹ ಆಯುರ್ವೇದದಲ್ಲಿ ಸಂಶೋಧನೆ ಹೆಚ್ಚಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಆಯುಶ್ ಇಲಾಖೆ ಜಂಟಿ ನಿರ್ದೇಶಕಿ ಡಾ. ಅಹಲ್ಯಾ ಶರ್ಮಾ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಉಪ ಕುಲಪತಿ ಡಾ.ಎಂ.ಕೆ. ರಮೇಶ್, ಜಿಜ್ಞಾಸಾ ಸಮಿತಿ ಅಧ್ಯಕ್ಷ ಡಾ.ಆರ್. ಕಿಶೋರ್ ಕುಮಾರ್, ಎಬಿವಿಪಿ ರಾಜ್ಯಾಧ್ಯಕ್ಷ ಡಾ. ಅಲ್ಲಮ ಪ್ರಭು, ಜಿಜ್ಞಾಸದ ರಾಷ್ಟ್ರೀಯ ಸಂಯೋಜಕ ವಿನೀತ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.