ಕುತೂಹಲ ಕೆರಳಿಸಿದ ಕಮಲ್-ಕೇಜ್ರಿ ಭೇಟಿ
Team Udayavani, Sep 22, 2017, 1:15 PM IST
ಚೆನ್ನೈ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಮುಂಜಾನೆ ಚೆನ್ನೈಗೆ ತೆರಳಿ ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್‌ರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಬಹುಭಾಷಾ ನಟನ ರಾಜಕೀಯ ನಡೆ ನಿಗೂಢವಾಗುತ್ತಾ ಸಾಗಿದೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಕಮಲ್ ಹಾಸನ್ ಭೇಟಿ ಮಾಡಿರುವ ಎರಡನೇ ಹೈ ಪ್ರೊಫೈಲ್ ರಾಜಕಾರಣಿ ಕೇಜ್ರಿವಾಲ್. ಸೆಪ್ಟೆಂಬರ್ ಆರಂಭದಲ್ಲೇ ತಿರುವನಂತಪುರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಕಮಲ್, ನಂತರ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಕೂಡ ನಟನ ಬೆಂಬಲಕ್ಕೆ ನಿಂತಿದೆ. ಈ ನಡುವೆ ದಿಲ್ಲಿ ಸಿಎಂ ಭೇಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಗುರುವಾರ ಬೆಳಗ್ಗೆಯೇ ಕೇಜ್ರಿವಾಲ್ ವಿಮಾನವೇರಿ ಚೆನ್ನೈ ತಲುಪಿದಾಗ, ಕಮಲ್ ಹಾಸನ್‌ರ ಕಿರಿಯ ಪುತ್ರಿ ಅಕ್ಷರಾ ಹಾಸನ್ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ದಿಲ್ಲಿ ಸಿಎಂ ಅಲ್ಲಿಂದ ನೇರವಾಗಿ ಅಲ್ವಾರ್‌ಪೇಟ್‌ನಲ್ಲಿರುವ ಕಮಲ್ ಮನೆಗೆ ತೆರಳಿದ್ದು, ಇಬ್ಬರೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ನಂತರ ಜತೆಗೆ ಕುಳಿತು ಊಟ ಕೂಡ ಮಾಡಿದ್ದಾರೆ. ಈ ದಿಢೀರ್ ಹಾಗೂ ಮಹತ್ವದ ಭೇಟಿ ವೇಳೆ ಚರ್ಚಿಸಿದ ವಿಷಯಗಳ ಕುರಿತು ನಟ ಕಮಲ್ ಹಾಸನ್ ಆಗಲಿ, ದಿಲ್ಲಿ ಸಿಎಂ ಕೇಜ್ರಿವಾಲ್ ಆಗಲಿ ಹೆಚ್ಚಿನ ಮಾಹಿತಿ ನೀಡಿಲ್ಲ.
ನಾವು ಸಂಬಂಧಿಗಳು
ಮಾತುಕತೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಟ ಕಮಲ್ ಹಾಸನ್, ‘ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಲ್ಲರೂ ನನಗೆ ಒಡನಾಡಿಗಳಿದ್ದಂತೆ. ಆರಂಭದಿಂದಲೂ ನಾನು ಕೇಜ್ರಿವಾಲ್‌ರ ಕಾರ್ಯಗಳನ್ನು ಮೆಚ್ಚಿ, ಗೌರವಿಸುತ್ತಾ ಬಂದಿದ್ದೇನೆ. ಹಾಗೇ ನಮ್ಮಿಬ್ಬರ ಆಲೋಚನೆಗಳು ಒಂದೇ ಆಗಿವೆ,’ ಎಂದು ಹೇಳಿದ್ದಾರೆ. ಜತೆಗೆ “ಭ್ರಷ್ಟಾಚಾರ ಹಾಗೂ ಕೋಮುವಾದದ ವಿರುದ್ಧ ಗಂಭೀರವಾಗಿ ಹೋರಾಡುವ ಯಾರನ್ನೇ ಆದರೂ ಭೇಟಿ ಮಾಡಲು ನಾನು ಹಿಂಜರಿಯುವುದಿಲ್ಲ,’ ಎಂದು ಹೇಳಿದ್ದಾರೆ.
ನಾನವರ ದೊಡ್ಡ ಅಭಿಮಾನಿ
ಇದೇ ವೇಳೆ, “ವ್ಯಕ್ತಿಗತವಾಗಿ ಹಾಗೂ ಒಬ್ಬ ಶ್ರೇಷ್ಠ ನಟರಾಗಿ ಕಮಲ್ ಸದಾ ನನ್ನನ್ನು ಪ್ರೇರೇಪಿಸಿದ್ದು, ನಾನು ಅವರ ದೊಡ್ಡ ಅಭಿಮಾನಿ,’ ಎಂದಿರುವ ದಿಲ್ಲಿ ಸಿಎಂ, “ಮಾತುಕತೆ ವೇಳೆ ನಾವಿಬ್ಬರೂ ನಮ್ಮ ಅನಿಸಿಕೆ ಹಂಚಿಕೊಂಡಿದ್ದೇವೆ. ದೇಶದಲ್ಲಿ ಭ್ರಷ್ಟಾಚಾರ ಹಾಗೂ ಕೋಮುವಾದ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಕಮಲ್ ಹಾಸನ್ ರಾಜಕೀಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಇದೆ. ಹಿಂದೆ ಕೂಡ ನಾವಿಬ್ಬರೂ ಸಾಕಷ್ಟು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಿದೆ. ಮುಂದೆ ಕೂಡ ನಾವು ಭೇಟಿಯಾಗುತ್ತಿರುತ್ತೇವೆ,’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.