“8 ಎಂಎಂ’ಗೆ ಜಾಪನೀಸ್ ಚಿತ್ರದ ಸ್ಫೂರ್ತಿ!
Team Udayavani, Sep 22, 2017, 4:07 PM IST
“ನೀರ್ ದೋಸೆ’ ನಂತರ ಜಗ್ಗೇಶ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರದ ಚಿತ್ರೀಕರಣ ಇವತ್ತಿನಿಂದ ಪ್ರಾರಂಭವಾಗಿದೆ. ಇದಕ್ಕೂ ಮುನ್ನ ಗುರುವಾರ ಸಂಜೆ ಚಿತ್ರದ ಮೊದಲ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ, ಇದು ತಮಿಳಿನ “8 ತೊಟ್ಟಕ್ಕಲ್’ ಎಂಬ ಚಿತ್ರದ ರೀಮೇಕ್ ಎಂದು ಹೇಳಲಾಗಿತ್ತು.
ಆದರೆ, ಚಿತ್ರತಂಡ ಮಾತ್ರ ಚಿತ್ರದ ಕಥೆಯ ಕುರಿತಾಗಿ ಯಾವೊಂದು ರಹಸ್ಯವನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಜಗ್ಗೇಶ್ ಅವರೇ ಈ ಚಿತ್ರದ ಸ್ಫೂರ್ತಿ ಏನು ಎಂದು ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ, “8 ಎಂಎಂ’ ಚಿತ್ರವು ತಮಿಳಿನ “8 ತೊಟ್ಟಕ್ಕಲ್’ ಎಂಬ ಚಿತ್ರದ ರೀಮೇಕ್ ಚಿತ್ರವಲ್ಲವಂತೆ. ಹಲವು ದಶಕಗಳ ಹಿಂದೆ ಬಂದ ಜಾಪನೀಸ್ ಚಿತ್ರ “ಸ್ಟ್ರೇ ಡಾಗ್ಸ್’ ಈ ಚಿತ್ರಕ್ಕೆ ಸ್ಫೂರ್ತಿಯಂತೆ.
ಜಪಾನ್‌ನ ಜನಪ್ರಿಯ ನಿರ್ದೇಶಕ ಅಕಿರಾ ಕುರೋಸಾವಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರದಿಂದ ಸ್ಫೂರ್ತಿ ಪಡೆದು, ಇದೀಗ “8 ಎಂಎಂ’ ಚಿತ್ರ ಮಾಡಲಾಗುತ್ತಿದೆ ಎಂದು ಸ್ವತಃ ಚಿತ್ರದ ನಾಯಕ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನ್ಫೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.