ಸಚಿವ ತಾವಡೆ ಮೇಲೆ ಕಪ್ಪು ಪುಡಿ ಎಸೆದ ಧಂಗರ್ ಸದಸ್ಯ ಅರೆಸ್ಟ್
Team Udayavani, Sep 22, 2017, 5:23 PM IST
ಮುಂಬಯಿ : ಧಂಗರ್ ಸಮುದಾಯದ ಸದಸ್ಯನೋರ್ವ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವಡೆ ಅವರ ಮೇಲೆ ಸಾತಾರಾದಲ್ಲಿ ಕಪ್ಪು ಪುಡಿಯನ್ನು ಎಸೆಯಲು ಯತ್ನಿಸಿದ ಘಟನೆ ನಡೆದಿದೆ.
ತಾವಡೆ ಅವರು ಇಲ್ಲಿಂದ ಸುಮಾರು 250 ಕಿ.ಮೀ.ದೂರದ ಪಶ್ಚಿಮ ಮಹಾರಾಷ್ಟ್ರ ಪಟ್ಟಣದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾರುತಿ ಜನಕಾರ್ ಎಂಬ ವ್ಯಕ್ತಿಯೋರ್ವ ತಾವಡೆ ಅವರ ಸಮೀಪಕ್ಕೆ ತೆರಳಿ ಅವರ ಮೇಲೆ ಕಪ್ಪು ಪುಡಿಯನ್ನು ಚೆಲ್ಲಲು ಯತ್ನಿಸಿದ.
ಕೂಡಲೇ ಪೊಲೀಸರು ಜನಕಾರ್ನನ್ನು ವಶಕ್ಕೆ ತೆಗೆದುಕೊಂಡರು. ಆದರೆ ಆತ ಎಸೆದ ಕಪ್ಪು ಪುಡಿಯು ಮಂಗಳಕರ ಸಮಾರಂಭಗಳಲ್ಲಿ ಬಳಸಲಾಗುವ “ಬುಕ್ಕ’ ಎಂದು ಗೊತ್ತಾಗಿದೆ.
ಧಂಗಾರ್ ಸಮುದಾಯದವರು ಬಹಳ ಕಾಲದಿಂದ ತಮಗೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕೆಂದು ಸರಕಾರವನ್ನು ಆಗ್ರಹಿಸುತ್ತಾ ಬಂದಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ಸಮುದಾಯದ ಕೆಲ ಸದಸ್ಯರು ಸಚಿವ ತಾವಡೆ ಅವರ ಮೇಲೆ ಶೋಲಾಪುರ ನಗರದಲ್ಲಿನ ನಡೆದಿದ್ದ ಸಮಾರಂಭವೊಂದರಲ್ಲಿ ಹಳದಿ ಪುಡಿ (ಭಂಡಾರ) ಎಸೆದಿದ್ದರು. ಶೋಲಾಪುರ ವಿವಿಗೆ ಅಹಲ್ಯಾಬಾಯಿ ಹೋಳ್ಕರ್ ಹೆಸರು ಇಡಬೇಕೆಂಬುದು ಅವರ ಆಗ್ರಹವಾಗಿತ್ತು. ಅಹಲ್ಯಾಬಾಯಿ ಹೋಳ್ಕರ್ ಮರಾಠಾ ಆಳ್ವಿಕೆಗೆ ಒಳಪಟ್ಟಿದ್ದ ಮಧ್ಯ ಕಾಲೀನ ಮಾಲ್ವಾ ಆರಸೊತ್ತಿಗೆಯ ರಾಣಿಯಾಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.