ಬಾಲ್ಯ ಸ್ನೇಹಿತರಿಂದಲೇ ಸಿನಿಮೀಯ ಮಾದರಿ ಹತ್ಯೆ

Team Udayavani, Sep 23, 2017, 7:42 AM IST

23.jpg

ಬೆಂಗಳೂರು: ಸಿನಿಮೀಯ ಮಾದರಿ ಹತ್ಯೆಗೆ ಬೇಡಿಕೆ ಇಟ್ಟ ಹಣ ನೀಡದಿರುವುದೇ ಪ್ರಮುಖ ಕಾರಣವಾಗಿತ್ತು. ಬಾಲ್ಯ ಸ್ನೇಹಿತ ಎನ್ನುವುದನ್ನೂ ಲೆಕ್ಕಿಸದೆ ಬರ್ಬರವಾಗಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದರು ಆ ಐವರು ಕಟುಕರು. ಅವರಲ್ಲೀಗ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ!

ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್‌ ಕುಮಾರ್‌ ಪುತ್ರ ಶರತ್‌ನನ್ನು ಇತ್ತೀಚೆಗೆ ಅಪಹರಿಸಿ ದಾರುಣವಾಗಿ ಕೊಲೆಗೈದು ಕೆರೆಯೊಂದರಲ್ಲಿ ಬಿಸಾಡಿದ್ದ ಬಾಲ್ಯ ಸ್ನೇಹಿತ ಸೇರಿದಂತೆ ನಾಲ್ಕು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೃತ ಶರತ್‌ನ ಬಾಲ್ಯ ಸ್ನೇಹಿತ ಹಾಗೂ ಪ್ರಕರಣದ ಮಾಸ್ಟರ್‌ ಮೈಂಡ್‌ ವಿಶಾಲ್‌(21), ಈತನ ಸಹಚರರಾದ ಕಾರು ಚಾಲಕ ವಿನಯ್‌ ಪ್ರಸಾದ್‌ (24), ಬಿಡದಿಯ ಮದರಸನ್‌ ಫ್ಯಾಕ್ಟರಿ ನೌಕರರಾದ ಕರುಣ್‌ ಪೈ (22) ಮತ್ತು ವಿನೋದ್‌ ಕುಮಾರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಉಬರ್‌ ಕಾರು ಚಾಲಕ ಶಾಂತ ಕುಮಾರ್‌ ತಲೆಮರೆಸಿ  ಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ನಗರದ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ವಿದೇಶಿ ಮತ್ತು ದುಬಾರಿ ಬೈಕ್‌ಗಳ ಬಗ್ಗೆ ವ್ಯಾಮೋಹ ಹೊಂದಿದ್ದ ಶರತ್‌ನನ್ನು ಆರೋಪಿ ವಿಶಾಲ್‌, ಇದೇ ಸೆ.12ರಂದು ಸಂಜೆ 6.30ರ ಸುಮಾರಿಗೆ ಕರೆ ಮಾಡಿ ತನ್ನ ಸ್ನೇಹಿತ ಬಳಿ ಐಷಾರಾಮಿ ಬೆನಾಲಿ ಬೈಕ್‌ ಇದ್ದು, ಅದನ್ನು ರೈಡ್‌ ಮಾಡಲು ಹೋಗೋಣ ಎಂದು ಕೆಂಗೇರಿಯ ಸ್ಯಾಟಲೈಟ್‌ ಟೌನ್‌ನ ಶಿರ್ಕೆ ಅಪಾರ್ಟ್‌ಮೆಂಟ್‌ ಬಳಿ ಕರೆಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ಸ್ನೇಹಿತ ರೆಲ್ಲರೂ
ಕಂಠಪೂರ್ತಿ ಮದ್ಯ ಸೇವಿಸಿ, ಬಳಿಕ ಶರತ್‌ನನ್ನು ಅಪಹರಿಸಿ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ. ನಂತರ, ಶರತ್‌ನಿಂದಲೇ ಅಪಹರಣವಾಗಿರುವ ಬಗ್ಗೆ ಸೆಲ್ಫಿ ವಿಡಿಯೋ ಮಾಡಿಸಿ, “50 ಲಕ್ಷ ರೂ. ಕೇಳುತ್ತಿದ್ದಾರೆ. ಕೂಡಲೇ ಹಣ ತಂದು ಕೊಡಿ ಅಪ್ಪಾ’ ಎಂದು ಆತನ ಮೂಲಕವೇ ಬೇಡಿಕೆ ಇಟ್ಟಿದ್ದಾರೆ.  

ಗಾಬರಿಗೊಂಡ ಪೋಷಕರು ಕೂಡಲೇ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಇಷ್ಟೆಲ್ಲಾ ಆದ ಬಳಿಕ ಶರತ್‌ ಮನೆಗೆ ಬಂದ ಆರೋಪಿ ವಿಶಾಲ್‌, ಕುಟುಂಬಸ್ಥರೊಂದಿಗೆ ಸೇರಿಕೊಂಡು ಶರತ್‌ ಹುಡುಕಾಟದಲ್ಲಿ ತೊಡಗಿದ್ದಾನೆ. ಕುಟುಂಬ ಸದಸ್ಯರ ಜತೆ ತಾನೂ ಠಾಣೆಗೆ ಹೋಗಿ ದೂರು ನೀಡಿದ್ದಾನೆ. 

ಕಲ್ಲು ಕ್ವಾರಿಯಲ್ಲಿ ಮುಚ್ಚಿದ ದುರುಳರು: ಕೆರೆಯ ನೀರಿನಲ್ಲಿ ತೇಲುತ್ತಿದ್ದ ಶರತ್‌ ಮೃತದೇಹವನ್ನು ಹೊರ ತೆಗೆದ ಆರೋಪಿ
ಗಳು ತಲೆಮರೆಸಿಕೊಂಡಿರುವ ಆರೋಪಿಯ ಶಾಂತಕುಮಾರ್‌ನ ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿ ಬೇರೆಡೆ ಕೊಂಡೊಯ್ಯಲು
ನಿರ್ಧರಿಸಿದ್ದರು. ಅದರಂತೆ ಸೆ.20ರಂದು ದೇಹವನ್ನು ಗೋಣಿ ಚೀಲವೊಂದರಲ್ಲಿ ಕಟ್ಟಿ ಕಾರಿನ ಹಿಂಬದಿಯಲ್ಲಿ ಹಾಕಿಕೊಂಡಿ
ದ್ದರು. ಬಳಿಕ ಯಾವ ಸ್ಥಳದಲ್ಲಿ ಬಿಸಾಡುವುದು ಎಂದು ತಿಳಿಯದೆ ಅರ್ಧ ದಿನ ಅಲ್ಲಲ್ಲಿ ಸುತ್ತಾಡಿದ್ದಾರೆ. ಬಳಿಕ ರಾಮನಗರ
ಜಿಲ್ಲೆಯ ಅಜ್ಜೆàಯನಹಳ್ಳಿ ಬಳಿಯ ಕುರುಬರಪಾಳ್ಯ ಬಂಡೆಯ ಕ್ವಾರೆಯಲ್ಲಿ ಜೆಸಿಬಿ ಮೂಲಕ ತೆಗೆದಿದ್ದ ಗುಂಡಿಯೊಂದರಲ್ಲಿ
ಹಾಕುತ್ತಾರೆ. ಆದರೆ, ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ವಾಸನೆ ಹೊರಬಾರದಂತೆ ಮೃತ ದೇಹದ ಮೇಲೆ ಸುಮಾರು 15 ಬ್ಯಾಗ್‌ ಉಪ್ಪು, ಸುಗಂಧ ದ್ರವ್ಯಗಳ ಹತ್ತಾರು ಬಾಟಲಿಗಳನ್ನೇ ಅದರ ಮೇಲೆ ಸುರಿದು ಹೂಳುತ್ತಾರೆ. ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರೆ, ವಿಶಾಲ್‌ ಮಾತ್ರ ಮತ್ತೆ ಶರತ್‌ ಮನೆಗೆ ಬಂದು ಪ್ರಕರಣದ ವಿದ್ಯಮಾನಗಳನ್ನು ತಿಳಿದು ಕೊಂಡು, ಅವರಿಗೆ ಸಹಾಯ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಾನೆ ಎಂದು ಅವರು ತಿಳಿಸಿದರು.

ಶರತ್‌ ಹತ್ಯೆಗೆ ನಡೆದಿತ್ತು ಭಾರಿ ಸ್ಕೆಚ್‌ ಬೇಡಿಕೆ ಈಡೇರದಿದ್ದರೆ ಶರತ್‌ನನ್ನು ಕೊಲೆಗೈಯಲು ಟೇಪ್‌, ಚಾಕು, ಹ್ಯಾಂಡ್‌
ಗ್ಲೌಸ್‌ಗಳನ್ನು ಖರೀದಿಸಿದ್ದರು. ದೂರು ದಾಖಲಾಗುತ್ತಿ ದ್ದಂತೆ ವಿಶಾಲ್‌ ತನ್ನ ಸಹಚರರಿಗೆ ಕರೆ ಮಾಡಿ ಶರತ್‌ನನ್ನು ಕೊಲ್ಲಲು ಸೂಚಿಸಿದ್ದಾನೆ. ಶರತ್‌ ಬಾಯಿಗೆ ಟೇಪ್‌ ಸುತ್ತಿ, ಕೈ, ಕಾಲುಗಳನ್ನು ತಂತಿಯಿಂದ ಕಟ್ಟಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ರಾಮೋಹಳ್ಳಿಯ ನರಸಿಂಹಯ್ಯ ಕೆರೆಯಲ್ಲಿ ಮೃತ ದೇಹಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ ನೀರಿನಲ್ಲಿ ಬಿಸಾಡಿದ್ದಾರೆ. ಮೃತ ದೇಹ ತೇಲುತ್ತದೆಯೇ ಎಂದು ತಿಳಿಯಲು ನಿತ್ಯ ಕೆರೆ ಬಳಿ ಹೋಗುತ್ತಿದ್ದರು. ಕೆಲ ದಿನಗಳ ಬಳಿಕ ಮೃತ ದೇಹ ಮೇಲಕ್ಕೆ ಬಂದಾಗ ವಿಶಾಲ್‌, ಸ್ನೇಹಿತ ವಿನೋದ್‌ ಕುಮಾರ್‌ನನ್ನು ಕರೆದೊಯ್ದು ಮೃತ ದೇಹಕ್ಕೆ ಮತ್ತೆ ಕಲ್ಲು ಕಟ್ಟಿ ಮತ್ತೆ ಕೆರೆಯೊಳಗೆ ಬಿಸಾಡಿದ್ದಾನೆ ಎಂದು ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

ಟಾಪ್ ನ್ಯೂಸ್

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.