ಪಾತಕಿ ದಾವೂದ್ ಆರೋಗ್ಯವಂತ
Team Udayavani, Sep 23, 2017, 8:23 AM IST
ಮುಂಬೈ: ವಸೂಲಿ ಪ್ರಕರಣ ಸಂಬಂಧ ಇಕ್ಬಾಲ್ ಕಸ್ಕರ್ ಬಂಧನವಾದ ದಿನ ದಿಂದಲೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗವಾ ಗುತ್ತಲೇ ಇವೆ. ಇದೀಗ ಇದಕ್ಕೆ ಹೊಸ ಸೇರ್ಪಡೆಯೆಂಬಂತೆ, “ದಾವೂದ್ಗೆ ಯಾವುದೇ ಕಾಯಿಲೆಗಳಿಲ್ಲ. ಆತ ಆರೋಗ್ಯವಾಗಿಯೇ ಇದ್ದಾನೆ’ ಎಂದು ಅವನ ಸೋದರ ಕಸ್ಕರ್ ಹೇಳಿದ್ದಾನೆ.
ದಾವೂದ್ಗೆ ಗ್ಯಾಂಗ್ರೀನ್ ಆಗಿದೆ, ಹೃದಯಾಘಾತ ಆಗಿದೆ ಎಂದೆಲ್ಲ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಈ ಎಲ್ಲ ವರದಿಗಳನ್ನೂ ತಳ್ಳಿಹಾಕಿರುವ ಕಸ್ಕರ್, “ದಾವೂದ್ ಈಗಲೂ ಫಿಟ್ ಆ್ಯಂಡ್ ಫೈನ್’ ಆಗಿದ್ದಾನೆ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಅಷ್ಟೇ ಅಲ್ಲ, ಪಾಕಿಸ್ತಾನದ ಕರಾಚಿಯಲ್ಲಿರುವ ದಾವೂದ್ನ 4 ಮನೆಗಳ ವಿಳಾಸಗಳನ್ನೂ ಕಸ್ಕರ್ ಇದೇ ವೇಳೆ ಪೊಲೀಸರಿಗೆ ನೀಡಿದ್ದಾನೆ. ಜತೆಗೆ, ದಾವೂದ್ನೊಂದಿಗೆ ಆತನ ಮತ್ತೂಬ್ಬ ಸಹೋದರ ಅನೀಸ್ ಮತ್ತು ಆಪ್ತ ಸಹಚರ ಛೋಟಾ ಶಕೀಲ್ ಕೂಡ ಪಾಕ್ನ ಬಂದರು ನಗರಿಯ ವೈಭವೋಪೇತ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾನೆ.
ಸೋದರ ಅನೀಸ್ ಪ್ರತಿ ವರ್ಷ ಈದ್ ಹಬ್ಬದ ಸಂದರ್ಭದಲ್ಲಿ ಮುಂಬೈನಲ್ಲಿ ರುವ ಕುಟುಂಬ ಸದಸ್ಯರಿಗೆ ದೂರವಾಣಿ ಕರೆ ಮಾಡುತ್ತಾನೆ ಎಂದಿದ್ದಾನೆ.
ಮುಂಬೈಗೆ ಬಂದಿದ್ದ ಪತ್ನಿ: ಇದೇ ವೇಳೆ, ದಾವೂದ್ ಪತ್ನಿ ಮೆಹಜಬಿನ್ ಶೇಖ್ ಅಲಿಯಾಸ್ ಝುಬೀನಾ ಝರೀನ್ ಕಳೆದ ವರ್ಷ ತನ್ನ ಅಪ್ಪನನ್ನು ಭೇಟಿ ಯಾಗಲೆಂದು ಮುಂಬೈಗೆ ಬಂದಿದ್ದರು. ತಂದೆ ಸಲೀಂ ಕಾಶ್ಮೀರಿಯನ್ನು ಭೇಟಿಯಾದ ಬಳಿಕ ಆಕೆ ವಾಪಸಾದಳು
ಎಂದಿದ್ದಾನೆ ಕಸ್ಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
MUST WATCH
ಹೊಸ ಸೇರ್ಪಡೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.